ನಿಡ್ಡೋಡಿ ವಿದ್ಯುತ್ ಸ್ಥಾವರಕ್ಕೆ ಪರಿಸರಾಸಕ್ತ ಒಕ್ಕೂಟ ವಿರೋಧ
ಮಂಗಳೂರು: ಮೂಡುಬಿದಿರೆಯ ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 4ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರ ಪ್ರಾಜೆಕ್ಟ್ನ್ನು ಕೈಬಿಡುವಂತೆ ದ.ಕ. ಪರಿಸರಾಸಕ್ತ ಒಕ್ಕೂಟ ಆಗ್ರಹಿಸಿದೆ.
ನಿಡ್ಡೋಡಿಯ ರೈತರು, ಜನಸಾಮಾನ್ಯರು, ಪರಿಸರಾಕ್ತರು ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಸರ್ಕಾರ ಪರಿಸರ ವಿರೋಧಿ ಧೋರಣೆಯಿಂದ ಉಷ್ಣ ವಿದ್ಯುತ್ ಸ್ಥಾವರನ್ನು ಬಲವಂತದಿಂದ ಸ್ಥಾಪಿಸಲು ಹುನ್ನಾರ ನಡೆಸುತ್ತಿದೆ ಎಂದು ಒಕ್ಕೂಟ ಅಧ್ಯಕ್ಷ ಉಪೇಂದ್ರ ಹೊಸಬೆಟ್ಟು ಹೇಳಿದ್ದಾರೆ.
ಈಗಾಗಲೇ ಉಡುಪಿಯ ಯುಪಿಸಿಎಲ್ನಿಂದ ಜನರು, ಕೃಷಿಕರು, ಮೀನುಗಾರರು ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ಇನ್ನೂ ದೊರಕಿಲ್ಲ. ಹಾಗಾಗಿ ನಾಲ್ಕು ಪಟ್ಟು ಅಧಿಕವಾಗಿರುವ ವಿದ್ಯುತ್ ಸ್ಥಾವರ ನಿಡ್ಡೋಡಿಯ ಗ್ರಾಮವಲ್ಲದೆ ಸುತ್ತಮುತ್ತಲಿನ 15 ಗ್ರಾಮಗಳಿಗೂ ಬಾಧೆ ಉಂಟಾಗಲಿದೆ. ಜಿಲ್ಲೆಯು ಜೈವಿಕವಾಗಿ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಭಾರೀ ಕೈಗಾರಿಕೆಗಳನ್ನು ಸ್ಥಾಪಿಸುವುದು ಅಪಾಯವನ್ನು ಆಹ್ವಾನಿಸಿದಂತೆ.
ಆದ್ದರಿಂದ ಮಾಲಿನ್ಯಕಾರಕ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮಂಗಳೂರು ಮೊದಲನೆ ಸ್ಥಾನದಲ್ಲಿದೆ ಎಂಬ ವರದಿಯನ್ನು ಸರ್ಕಾರ ಅನುಮೋದಿಸಿದೆ. ಆದ್ದರಿಂದ ಶಾಶ್ವತವಾಗಿ ಮಾಲಿನ್ಯಕಾರಕ ಪಟ್ಟಿಯಿಂದ ನಗರವನ್ನು ಶಾಶ್ವತವಾಗಿ ಹೊರಬರುವಂತೆ ಈ ತನಕ ಕೈಗೊಂಡ ನೀತಿ ಮತ್ತು ಕ್ರಮಗಳ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಿಸಬೇಕು.
ಅಲ್ಲದೆ ಸಂಸದರ, ಶಾಸಕರ ಉಪಸ್ಥಿತಿಯಲ್ಲಿ ಸ್ಥಳೀಯ ಹೋರಾಟ ಸಮಿತಿಯೊಂದಿಗೆ ಸಭೆ ನಡೆಸಬೇಕು. ಉದ್ದಿಮೆ ವಲಯದಲ್ಲಿ ವಾಸಿಸುತ್ತಿರುವ ಜನರ ಆರೋಗ್ಯದ ಮೇಲೆ ಆಗಿರುವ ಪರಿಣಾಮದ ಬಗ್ಗೆ ಪ್ರತ್ಯೇಕ ಅಧ್ಯಯನ ನಡೆಸಬೇಕು.
ಉದ್ದಿಮೆಯ ನೆಪದಲ್ಲಿ ಕೃಷಿ ಭೂಮಿ ಕಬಳಿಕೆಯಾಗಿ ಭ್ರಷ್ಟಾಚಾರ ನಡೆದಿದ್ದು, ಇನ್ನು ಮುಂದೆ ಯಾವುದೇ ಉದ್ದಿಮೆಗಳು ಕೃಷಿ ಭೂಮಿ ಸ್ವಾಧೀನ ಪಡಿಸಬಾರದು.
ವಶಪಡಿಸಿಕೊಂಡ ಕೃಷಿ ಭೂಮಿಯನ್ನು ವಾರಸುದಾರರಿಗೆ ಹಿಂತಿರುಗಿಸಬೇಕು ಇತ್ಯಾದಿ ಹಕ್ಕೋತ್ತಾಯಗಳನ್ನು ಒಕ್ಕೂಟ ಸರ್ಕಾರಕ್ಕೆ ಮಂಡಿಸುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

