ಮಾನಸಿಕ ಅಸ್ವಸ್ಥನ ಚಿಕಿತ್ಸೆಗೆ ನೆರವು ನೀಡುವಿರಾ?
ವಿಟ್ಲ: ವೀರಕಂಭ ಗ್ರಾಮದ ಮಂಗಳಪದವು ಸಮೀಪದ ಪಾತ್ರಜಾಲು ನಿವಾಸಿ, ಅವಿವಾಹಿತ ಗಣೇಶ್(33) ಎಂಬವರು ಹತ್ತು ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿ ಹಾಸಿಗೆ ಹಿಡಿದಿದ್ದು, ಸಹಾಯಕ್ಕಾಗಿ ದಾನಿಗಳ ಮೊರೆ ಹೋಗಿದ್ದಾರೆ.
ದಿ. ಶ್ರೀನಿವಾಸ ರೈ ಅವರ ಮೂವರು ಮಕ್ಕಳಲ್ಲಿ ಗಣೇಶ್ ಹಿರಿಯರಾಗಿದ್ದು, ಕುಟುಂಬಕ್ಕೆ ಆಸರೆಯಾಗಿದ್ದರು. ಕೆಲ ವರ್ಷಗಳ ಹಿಂದೆ ವಿಟ್ಲ ಪೇಟೆಯಲ್ಲಿ ಮನೆಮನೆಗೆ ದಿನಪತ್ರಿಕೆ, ಹಾಲು ಸರಬರಾದು ಮಾಡುತ್ತ ಜೀವನ ನಡೆಸುತ್ತಿದ್ದರು. ಬಳಿಕ ವಿಟ್ಲದಲ್ಲಿ ಮಹಾರಾಷ್ಟ್ರ ಅಪೆಕ್ಸ್,ನ ಪಿಗ್ಮಿ ಸಂಗ್ರಹಕಾರಾಗಿ ಕೆಲಸ ಮಾಡುತ್ತಿದ್ದರು. ನಷ್ಟದ ಹಿನ್ನಲೆಯಲ್ಲಿ ಅಪೆಕ್ಸ್ ಬಾಗಿಲು ಮುಚ್ಚಿದ ಬಳಿಕ ಗಣೇಶ್ ಅವರ ಬದುಕಿನ ಬಾಗಿಲೂ ಮುಚ್ಚಿತು.
ಅಪೆಕ್ಸ್ ಬಂದ್ ಆದ ಬಳಿಕ ಅವರು ಖಾತೆಯಲ್ಲಿ ಕೂಡಿಟ್ಟ ಒಂದು ಲಕ್ಷಕ್ಕೂ ಅಧಿಕ ಹಣ ಮಣ,ುಪಾಲಾಯಿತು. ಇದರಿಂದ ಭಾರೀ ಆಘಾತಕ್ಕೊಳಗಾದ ಅವರು ಮಾನಸಿಕ ಅಸ್ವಸ್ಥರಾಗಿ ಹಾಸಿಗೆ ಹಿಡಿದ್ದಾರೆ.
ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಹಣ ವ್ಯರ್ಥವಾಯಿತೇ ಹೊರತು ಕಾಯಿಲೆ ಗುಣವಾಗಲಿಲ್ಲ. ಇದೀಗ ಆರ್ಥಿಕ ಸ್ಥಿತಿಯೂ ಚೆನ್ನಾಗಿಲ್ಲದ್ದರಿಂದ ಆಸ್ಪತ್ರೆಗೆ ಹೋಗುವುದನ್ನೂ ನಿಲ್ಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆ ಮಾಡಿಸಿದಲ್ಲಿ ಅವರ ಕಾಯಿಲೆ ಗುಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಹಣ ಬೇಕಾಗುತ್ತದೆ. ಆದರೆ ಇಷ್ಟೊಂದು ಖರ್ಚನ್ನು ಭರಿಸಲು ಕುಟುಂಬಕ್ಕೆ ಸಾಧ್ಯವಿಲ್ಲದಿರುವುದರಿಂದ ದಾನಿಗಳ ನೆರವು ಕೋರಿದ್ದಾರೆ. ಇವರಿಗೆ ನೆರವು ನೀಡಲಿಚ್ಚಿಸುವವರು ಗಣೇಶ್ ಅವರ ತಾಯಿಯ ಎಸಿಡಿಸಿಸಿ ಬ್ಯಾಂಕ್,ನ ವಿಟ್ಲ ಶಾಖೆಯ ಖಾತೆ ಸಂಖ್ಯೆ- 0302-6032 ಜಮೆ ಮಾಡಬಹುದು ಅಥವಾ ಅವರ ಮೊಬೈಲ್ ಸಂಖ್ಯೆ 8971251652ನ್ನು ಸಂಪರ್ಕಿಸಿ ನೆರವಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

