ರಾಜ್ಯ ಸಾರಿಗೆ ಸಿಬ್ಬಂದಿ ಹಲ್ಲೆ; ಆರೋಪಿಗಳ ಬಂಧಿಸದಿದ್ದಲ್ಲಿ 4ರಂದು ಬೃಹತ್ ಪ್ರತಿಭಟನೆ
ಪುತ್ತೂರು: ಇತ್ತೀಚೆಗೆ ಸವಣೂರು ಗ್ರಾಮದ ಪರಣೆ ಎಂಬಲ್ಲಿ ಕೆಎಸ್,ಆರ್,ಟಿ ಬಸ್ ಚಾಲಕ ಪ್ರಶಾಂತ್ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಏ.3ರೊಳಗೆ ಬಂಧಿಸದಿದ್ದಲ್ಲಿ ಏ.4ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಜ್ದೂರು ಸಂಘಗಳ ರಾಜ್ಯ ಕಾರ್ಯದರ್ಶಿ ಶಾಂತಾರಾಮ್ ವಿಟ್ಲ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ತಿಂಗಳನಿಂದ ಸಾರಿಗೆ ನಿಗಮದ ಸಿಬ್ಬಂದಿ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ಇದರಿಂದ ಕೆಲವೊಂದು ಮಾರ್ಗಗಳಲ್ಲಿ ಚಾಲಕರು ಬಸ್,ಗಳನ್ನು ಚಲಾಯಿಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಹಲ್ಲೆಗೆ ಬೆದರಿ ಈಗಾಗಲೇ ಹಲವು ಮಂದಿ ರಜೆಯಲ್ಲಿ ತೆರಳುವ ಸನ್ನಿವೇಶ ಎದುರಾಗಿದೆ. ಮಾ.22 ರಂದು ಸವಣೂರಿನ ಪರಣೆಯಲ್ಲಿ ಸೈಡ್ ನೀಡಲಿಲ್ಲ ಎಂಬ ಕಾರಣ ಮುಂದಿಟ್ಟು ಸುಮಾರು 20 ಮಂದಿ ತಂಡ ಬಸ್ ಚಾಲಕನನ್ನು ಬಸ್ಸಿನಿಂದ ಎಳೆದು ಹಾಕಿ ಥಳಿಸಿದೆ ಇದನ್ನು ಸಂಘವು ಗಂಭೀರವಾಗಿ ಪರಿಗಣಿಸಿದೆ.
ಈ ಬಗ್ಗೆ ಸಂಘದ ಮೂಲಕ ಈಗಾಗಲೇ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ಆದರೂ ಈ ತನಕ ಆರೋಪಿಗಳನ್ನು ಬಂಧಿಸಲಾಗಿಲ್ಲ. ಆರೋಪಿಗಳು ರಾಜಾರೋಷವಾಗಿ ತಿರುಗುತ್ತಿದ್ದರೂ, ಅವರ ಸ್ಪಷ್ಟ ವಿಳಾಸ ಗೊತ್ತಿದ್ದರೂ ಬಂಧಿಸಿಲ್ಲ. ಆರೋಪಿಗಳ ಬಂಧನಕ್ಕೆ ಏ.3 ರವರೆಗೆ ಗಡುವು ನಿಗದಿಪಡಿಸಿದ್ದೇವೆ. ಅದರೊಳಗೆ ಬಂಧಿಸದಿದ್ದಲ್ಲಿ ಏ.4ರಂದು ನೆಲ್ಲಿಕಟ್ಟೆ ಬಸ್ ನಿಲ್ದಾಣದಿಂದ ಕಾಲ್ನಡಿಗೆ ಜಾಥಾ ನಡೆಸಿ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ಹೋರಾಟಕ್ಕೆ ಸಂಘಪರಿವಾರ ಸಂಘಟನೆಗಳಾದ ಎಬಿವಿಪಿ, ವಿಹಿಂಪ, ಹಿಂಜಾವೇದಿಕೆ ಸೇರಿದಂತೆ ಸಮಾನ ಮನಸ್ಕ ಸಂಘಟನೆಗಳು ಸಹಕಾರ ನೀಡಲಿವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

