ದಕ್ಷಿಣ ಕನ್ನಡ

ಕಾಂಗ್ರೆಸ್, ಬಿಜೆಪಿ ದಲಿತ,ಶೋಷಿತರ ಪ್ರತಿನಿಧಿಗಳಲ್ಲ: ಡಾ.ದ್ವಾರಕನಾಥ್

Published On :

ಪುತ್ತೂರು: ಕಾಂಗ್ರೆಸ್ ಮತ್ತು ಬಿಜೆಪಿಯ ಅಜೆಂಡಾ ಒಂದೇ ಆಗಿದ್ದು, ಈ ಎರಡು ಪಕ್ಷಗಳ ಬೂಟಾಟಿಕೆಯನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವವರು ಅಲ್ಪಸಂಖ್ಯಾತರ, ದಲಿತರ, ಶೋಷಿತರ ಪ್ರತಿನಿಧಿಗಳಲ್ಲ ಎಂಬುವುದು ನಮಗೆ ಗೊತ್ತಿರಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ದ್ವಾರಕನಾಥ್ ಹೇಳಿದ್ದಾರೆ.
 ಪುತ್ತೂರಿನಲ್ಲಿ ಮಂಗಳವಾರ ಎಸ್‌ಡಿಪಿಐ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಒಂದೇ ಆಗಿದ್ದು, ಬಡವರಿಗೆ ಒಂದು ರುಪಾಯಿಗೆ ಅಕ್ಕಿ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ ನಾವು ನಮ್ಮ ಆತ್ಮ ಗೌರವ ಮಾರಿಕೊಳ್ಳಲು ತಯಾರಿಲ್ಲ. ನಮಗೆ ಭೂಮಿ ಮತ್ತು ಅಧಿಕಾರ ಕೊಡಿ. ಒಂದು ರುಪಾಯಿಯ ಅಕ್ಕಿಯನ್ನು ನೀವೇ ತಿನ್ನಿ' ಎಂದು ಅವರು ಹೇಳಿದರು.
ವಿಧಾನಸಭೆಯಲ್ಲಿ ಮೊಬೈಲ್ ಮೂಲಕ ಬ್ಲೂಫಿಲಂ ನೋಡುವ ನೀವು ಲ್ಯಾಪ್‌ಟಾಪ್ ನೀಡುವ ಮೂಲಕ ಮಕ್ಕಳನ್ನೂ ಕೆಡಿಸಲು ಹೊರಟಿದ್ದೀರಾ ಎಂದು ಅವರು ಪ್ರಶ್ನಿಸಿದರು.
 ಎಸ್‌ಡಿಪಿಐ ರಾಷ್ಟ್ರೀಯ ಮಾಜಿ ಅಧ್ಯಕ್ಷ ಇ.ಅಬೂಬಕ್ಕರ್ ಮಾತನಾಡಿ, ಕಾಂಗ್ರೆಸಿಗೆ ಮತ ನೀಡದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಗುಮ್ಮ ಎಬ್ಬಿಸಿ ಅಧಿಕಾರ ಪಡೆದ ಕಾಂಗ್ರೆಸಿಗರು ಅಲ್ಪಸಂಖ್ಯಾತ, ದಲಿತ ವರ್ಗಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಎಸ್‌ಡಿಪಿಐ ಪುತ್ತೂರು ಕ್ಷೇತ್ರದ ಅಭ್ಯರ್ಥಿಅಬೂಬಕ್ಕರ್ ಸಿದ್ದೀಕ್ ಅಧ್ಯಕ್ಷತೆ ವಹಿಸಿದ್ದರು.  ಸಭಾ ಕಾರ್ಯಕ್ರಮಕ್ಕೆ ಮೊದಲು ದರ್ಬೆಯಿಂದ ಕಿಲ್ಲೆ ಮೈದಾನದ ತನಕ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.