ಮದುವೆ ಮನೆಯಲ್ಲಿ ಸರ ಕದಿಯುತ್ತಿದ್ದ ಮಹಿಳೆ ಸೆರೆ
ಬಂಟ್ವಾಳ: ಮದುವೆ ಸಮಾರಂಭವನ್ನೇ ಗುರಿಯಾಗಿರಿಸಿಕೊಂಡು ಮಕ್ಕಳ ಕತ್ತಿನಿಂದ ಸರ ಅಪಹರಿಸುತ್ತಿದ್ದ ಮಹಿಳೆಯನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಬಿ.ಸಿ. ರೋಡಿನಲ್ಲಿ ಬಂಧಿಸಿದ್ದಾರೆ. ನೀರುಮಾರ್ಗ ನಿವಾಸಿ ಶಶಿಕಲಾ ಬಂಧಿತ ಮಹಿಳೆ. ಈಕೆ ನೀಡಿದ ಮಾಹಿತಿಯಂತೆ ಮಂಗಳೂರಿನ ವಿವಿಧ ಜ್ಯುವೆಲ್ಲರಿ ಅಂಗಡಿಗಳಿಗೆ ಕದ್ದು ಮಾರಿದ್ದ 1.40 ಲಕ್ಷ ಮೌಲ್ಯದ 51 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಕಳೆದೆರಡು ವರ್ಷಗಳಿಂದ ಸರ ಅಪಹರಣ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಈಕೆ ಸಭೆ ಸಮಾರಂಭಗಳಿಗೆ ತೆರಳಿ ಅಲ್ಲಿ ಮಕ್ಕಳನ್ನು ಪುಸಲಾಯಿಸಿ ಅವರ ಕತ್ತಿನಿಂದ ಸರ ಎಗರಿಸಿ ಪರಾರಿಯಾಗುತ್ತಿದ್ದಳು.
ಈಕೆಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದರೂ ಈವರೆಗೂ ಪೊಲೀಸರ ಕಣ್ತಪ್ಪಿಸಿ ಕೊಂಡಿದ್ದಳು. ಬಿ.ಸಿ. ರೋಡಿನ ಖಾಸಗಿ ಹೊಟೇಲೊಂದರಲ್ಲಿ ಈಕೆ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ನಗರ ಎಸ್ಐ ಶೇಖರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕದಿಯುತ್ತಿದ್ದುದು ಹೀಗೆ: ಝಗಮಗಿಸುವ ಸೀರೆ ಉಟ್ಟುಕೊಂಡು ಯಾರದೋ ಮದುವೆ ಸಮಾರಂಭಗಳಿಗೆ ಹಾಜರಾಗುವ ಶಶಿಕಲಾ ಮನೆಮಂದಿಯಂತೆ ವರ್ತಿಸುತ್ತಿದ್ದಳು. ಬಿ.ಸಿ. ರೋಡಿನ ಮದುವೆ ಹಾಲೊಂದರಲ್ಲಿ ಶಶಿಕಲಾಳ ಕೈಚಳಕವನ್ನು ವಿಡಿಯೋದಲ್ಲಿ ಗುರುತಿಸಿದ ಪೊಲೀಸರು, ಬುಧವಾರ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

