ಪುತ್ತೂರು ಮಹಾಲಿಂಗೇಶ್ವರ ದೇಗುಲ ಬ್ರಹ್ಮಕಲಶೋತ್ಸವ: ಹೊರೆ ಕಾಣಿಕೆ ಸಮರ್ಪಣೆ
ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ಮೇ 3 ರಿಂದ 12ರ ತನಕ ವಿವಿಧ ಪ್ರದೇಶಗಳಿಂದ ಭಕ್ತಾಧಿಗಳು ಹೊರೆ ಕಾಣಿಕೆಯನ್ನು ಮೆರವಣಿಗೆಯಲ್ಲಿ ತಂದು ಸಮರ್ಪಿಸಲಿದ್ದಾರೆ. ಈ ನಿಟ್ಟಿನಲ್ಲಿ ಸಮಿತಿಯು ಈ ಕುರಿತು ದೇವಸ್ಥಾನದ ಹೊರೆ ಕಾಣಿಕೆ ಸಮಿತಿಯು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಸಮಿತಿಯ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ತಿಳಿಸಿದ್ದಾರೆ.
ಅವರು ಪುತ್ತೂರಿನಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 3ರಂದು ಪುತ್ತೂರು ನಗರ ವ್ಯಾಪ್ತಿ ಮತ್ತು ಬಲ್ನಾಡು ಗ್ರಾಮಗಳ ಹೊರೆ ಕಾಣಿಕೆ ಮೆರವಣಿಗೆ ಬೆಳಗ್ಗೆ 10.30ಕ್ಕೆ ದರ್ಬೆಯಿಂದ ಹೊರಡಲಿದೆ.
ಮೇ 6ರಂದು ಕೊಲ್ಲೂರು, ಕಟೀಲು, ಮಂಗಳೂರು, ಕಾರ್ಕಳ, ಮೂಡುಬಿದಿರೆ, ಶಕ್ತಿನಗರ, ಪೊಳಲಿ, ಬಿ.ಸಿ. ರೋಡು, ಬಂಟ್ವಾಳ, ಮಾಣಿ, ಇಡ್ಕಿದು, ಕುಳ, ಅನಂತಾಡಿ, ಒಡಿಯೂರು, ಮಾಣಿಲ, ಅಳಿಕೆ, ಕನ್ಯಾನ, ವಿಟ್ಲ, ಚಂದಳಿಕೆ, ಕುಂಡಡ್ಕ, ಪಡ್ನೂರು, ಕೆದಿಲ, ಮುರ, ನೆಹರೂನಗರ ಪ್ರದೇಶಗಳಿಂದ ಹೊರೆ ಕಾಣಿಕೆ ಮೆರವಣಿಗೆ ಕಬಕದಲ್ಲಿ ಸೇರಿ ಮಧ್ಯಾಹ್ನ 12 ಗಂಟೆಗೆ ಕಬಕದಿಂದ ಬೊಳ್ವಾರು ರಸ್ತೆಯಾಗಿ ಆಗಮಿಸಲಿದೆ.
ಮೇ 7 ರಂದು ಸುಳ್ಯ, ಜಾಲ್ಸೂರು, ಕನಕಮಜಲು, ಅಮ್ಚಿನಡ್ಕ, ಕೊಳ್ತಿಗೆ, ಪೆರ್ಲಂಪಾಡಿ, ಅರಿಯಡ್ಕ, ಈಶ್ವರಮಂಗಲ, ಕುಂಬ್ರ, ಬೆಳ್ಳಾರೆ, ಮಣಿಕ್ಕರ, ಮಾಡಾವು, ಕೆಯ್ಯೂರು, ಕೆದಂಬಾಡಿ, ತಿಂಗಳಾಡಿ, ಕೊಲತ್ತಡ್ಕ, ಒಳಮೊಗ್ರು, ಪರ್ಪುಂಜ, ಕುರಿಯ, ಸಂಟ್ಯಾರ್, ಕೈಕಾರ, ಸಂಪ್ಯ, ಆರ್ಯಾಪು, ಮೊಟ್ಟೆತ್ತಡ್ಕ ಪ್ರದೇಶಗಳಿಂದ ವಿವಿಧ ಸಮಯಗಳಿಂದ ಹೊರಟ ಮೆರವಣಿಗೆ ಬೆಳಗ್ಗೆ 11.45 ಕ್ಕೆ ದರ್ಬೆ ತಲುಪಲಿದ್ದು, ಬಳಿಕ ದರ್ಬೆಯಿಂದ ಮೆರವಣಿಗೆಯಲ್ಲಿ ದೇವಳಕ್ಕೆ ಆಗಮಿಸಲಿದೆ.
ಮೇ 9ರಂದು ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು, ಕಾಣಿಯೂರು, ದೋಲ್ಪಾಡಿ, ಚಾರ್ವಾಕ, ಬೆಳಂದೂರು, ಸವಣೂರು, ಕಾಮಣ, ಪುಣ್ಚಪ್ಪಾಡಿ, ಪಾಲ್ತಾಡಿ, ಕುದ್ಮಾರು, ಶಾಂತಿಗೋಡು, ಮುಂಡೂರು, ನರಿಮೊಗರು, ಆನಡ್ಕ, ಪುರುಷರಕಟ್ಟೆ, ಬೆದ್ರಾಳ ಮೂಲಕ ದರ್ಬೆ ತಲುಪಿ 11.30ಕ್ಕೆ ದರ್ಬೆಯಿಂದ ಮೆರವಣಿಗೆಯಲ್ಲಿ ಮುಂದುವರಿಯಲಿದೆ.
ಮೇ 11ರಂದು ಪಾಣಾಜೆ, ಕಾಟುಕುಕ್ಕೆ, ನಿಡ್ಪಳ್ಳಿ, ಆರ್ಲಪದವು, ಬೆಟ್ಟಂಪಾಡಿ ಬಡಗನ್ನೂರು, ಪಡುವನ್ನೂರು, ಗುಮ್ಮಟಗದ್ದೆ, ಅಜ್ಜಿಕಲ್ಲು, ದೇವಸ್ಯ, ತೋರಣಕಟ್ಟೆ, ಕೇಪು, ಪುಣಚ, ಬುಳೇರಿಕಟ್ಟೆ, ಬಂಗಾರಡ್ಕ ಪರ್ವಡ್ಕ ಮೂಲಕ ದರ್ಬೆಗೆ ಬೆಳಗ್ಗೆ 11.30 ಕ್ಕೆ ಆಗಮಿಸಿ ಬಳಿಕ ಮೆರವಣಿಗೆಯಲ್ಲಿ ದೇವಳಕ್ಕೆ ಸಾಗಲಿದೆ.
ಮೇ 12ರಂದು ಕಡಬ, ಮರ್ದಾಳ, ಆಲಂಕಾರು, ಹಿರೆಬಂಡಾಡಿ, ಧರ್ಮಸ್ಥಳ, ಬೆಳ್ತಂಗಡಿ, ಕರಾಯ, ಉಪ್ಪಿನಂಗಡಿ, ನೆಕ್ಕಿಲಾಡಿ, ಗುಂಡ್ಯ, ನೆಲ್ಯಾಡಿ, ಪೆರ್ನೆ, ಆದರ್ಶನಗರ ಬೇರಿಕೆ, ಶಾಂತಿನಗರ, ಬೆಳ್ಳಿಪ್ಪಾಡಿ, ಮಠಂತಬೆಟ್ಟು, ಕೋಡಿಂಬಾಡಿ, ಸೇಡಿಯಾಪು, ದಾರಂದಕುಕ್ಕು, ಕೆಮ್ಮಾಯಿ, ಚಿಕ್ಕಮುಡ್ನೂರುಗಳಿಂದ ಬೊಳ್ವಾರಿಗೆ ಆಗಮಿಸಿ, ಮಧ್ಯಾಹ್ನ 12 ಗಂಟೆಗೆ ಬೊಳ್ವಾರಿನಿಂದ ದೇವಳಕ್ಕೆ ಮೆರವಣಿಗೆಯಲ್ಲಿ ಸಾಗಿ ಬರಲಿದೆ ಎಂದರು. ಬ್ರಹ್ಮಕಲಶೋತ್ಸವ ಸಮಾರಂಭ ಮೇ 5 ರಿಂದ 16 ರ ತನಕ ನಡೆಯಲಿದ್ದು ಒಟ್ಟು 20 ಲಕ್ಷ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಈ ಸಂದರ್ಭ, ಸುದ್ದಿಗೋಷ್ಠಿಯಲ್ಲಿ ಹೊರೆ ಕಾಣಿಕೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೀವಂದರ ಜೈನ್, ಖಜಾಂಜಿ ಶಶಿಕುಮಾರ್ ರೈ ಬಾಲ್ಯೊಟ್ಟು, ಸಂಘಟನಾ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಸದಸ್ಯರಾದ ಕೃಷ್ಣ ಕುಮಾರ್ ರೈ, ನವೀನ್ ಚಂದ್ರ ನೈಕ್ ಮತ್ತಿತರ ಪ್ರಮುಖರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

