ಕ್ಷುಲ್ಲಕ ವಿಚಾರ: ವ್ಯಕ್ತಿಗೆ ತಂಡ ಹಲ್ಲೆ, ಗುಂಪು ಚದುರಿಸಲು ಲಾಠಿ ಪ್ರಹಾರ
ವಿಟ್ಲ: ವಿಟ್ಲ ಸಮೀಪದ ಮಂಗಳಪದವು ಜಂಕ್ಷನ್ನಲ್ಲಿ ಸೋಮವಾರ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಗುಂಪೊಂದು ಹಲ್ಲೆ ನಡೆಸಿದ ಪರಿಣಾಮ ಕೆಲ ಸಮಯ ಪರಿಸರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡ ಘಟನೆ ನಡೆದಿದೆ. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಎರಡು ದಿನಗಳ ಹಿಂದೆ ನಡೆದ ವಿಚಾರವೊಂದಕ್ಕೆ ಸಂಬಂಧಿಸಿ ಮಂಗಳಪದವಿನ ವ್ಯಕ್ತಿ ಹಾಗೂ ಜನರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಅದು ತಾರಕಕ್ಕೇರಿ ಘರ್ಷಣೆ ನಡೆಯಿತು. ಈ ಸಂದರ್ಭ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಹಾಗೂ ಸಿಬ್ಬಂದಿ ಸ್ಥಳದಲ್ಲಿ ಸೇರಿದ್ದ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ: ಸೂರಜ್ ಹೆಗ್ಡೆಗೆ ಅಭಿನಂದನೆ
ಕಾರ್ಕಳ: ಪದವಿ ಪೂರ್ವ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಕಕ್ಕೆ ಮೊದಲ ಸ್ಥಾನ ಪಡೆದ ಕಾರ್ಕಳ ತಾಲೂಕಿನ ಬೋರ್ಕಟ್ಟೆ ವಿದ್ಯಾರ್ಥಿ ಸೂರಜ್ ಹೆಗ್ಡೆಯನ್ನು ಮಂಗಳವಾರ ಇಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ಭುವನೇಂದ್ರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ. ರವೀಂದ್ರ ಭಟ್, ಜಿಎಸ್ಬಿ ಸಮಾಜ ದೇಶದ ಅತೀ ಪುಟ್ಟ ಸಮಾಜವಾಗಿದೆ. ಆದರೆ, ಸಮಾಜದ ಮಂದಿಯ ಸಾಧನೆ ಅತಿ ದೊಡ್ಡದು ಎನ್ನುವುದು ಮಾಧ್ಯಮಗಳಿಂದ ವೇದ್ಯವಾಗುತ್ತದೆ ಎಂದು ಹೇಳಿದರು. ದೇವಸ್ದಾನದ ಆಡಳಿತ ಮೊಕ್ತೇಸರ ಜಯರಾಮ ಪ್ರಭು, ಮೋಹನದಾಸ ಶೆಣೈ, ಪರ್ಯಾಯ ಚಂದ್ರಕಾಂತ ಪುರಾಣಿಕ, ಸೂರಜ್ ಹೆಗ್ಡೆಯ ಮಾತಾಪಿತರಾದ ಪ್ರಸನ್ನಾ ಹೆಗ್ಡೆ, ಸಂತೋಷ ಹೆಗ್ಡೆ, ಉದ್ಯಮಿ ಬೋರ್ಕಟ್ಟೆ ಗಣಪತಿ ಹೆಗ್ಡೆ, ಉದ್ಯಮಿ ರಘುಪತಿ ಪೈ, ಜಿಎಸ್ಬಿ ಅಧ್ಯಕ್ಷ ಎಸ್. ನಿತ್ಯಾನಂದ ಪೈ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

