ಗೊರಸು ಕಡಿದು ಅಂಗಳಕ್ಕೆಎಸೆದ ದುಷ್ಕರ್ಮಿಗಳು
ಮಂಗಳೂರು: ಸೋಮೇಶ್ವರ ಉಚ್ಚಿಲ ಸೇತುವೆ ಸಮೀಪದ ಮನೆಯೊಂದರಿಂದ ಗೋವುಗಳನ್ನು ಕದ್ದ ದುಷ್ಕರ್ಮಿಗಳು ಗೊರಸನ್ನು ಕಡಿದು ತುಳಸಿ ಕಟ್ಟೆ ಸಮೀಪ ಎಸೆದಿದ್ದಾರೆ.
ಗಣೇಶ್ ವಾಸುದೇವ ಮಯ್ಯ ಎಂಬವರ ಮನೆ ಮುಂದಿನ ತುಳಸಿಕಟ್ಟೆ ಎದುರು ಗುರುವಾರ ಬೆಳಗ್ಗೆ ಗೋವಿನ ಕಾಲು ತುಂಡರಿಸಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಯಿತು.
ಗಣೇಶ್ ಪತ್ನಿ ಇದನ್ನು ನೋಡಿ ಹೆದರಿ ಹಸು ಹುಡುಕಾಡಿದಾಗ ಮನೆ ಹೊರಭಾಗದಲ್ಲಿ ಕಟ್ಟಿ ಹಾಕಿದ್ದ ಹಾಲು ಕೊಡುವ ಹಸು ಮತ್ತು ಕರು ನಾಪತ್ತೆಯಾಗಿತ್ತು. ಹಸುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಹಸು ಮತ್ತು ಕರುವನ್ನು ಹೊರಭಾಗದಲ್ಲಿ ಕಟ್ಟಿ ಹಾಕಿದ್ದರು. ಕಡಿದು ಹಾಕಿದ್ದ ಗೊರಸು ಮನೆಯಲ್ಲಿದ್ದ ಹಸುವಿನದ್ದಲ್ಲ ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಆರಂಭದಲ್ಲಿ ದಾಖಲಿಸಿಲ್ಲ. ವಿಚಾರ ತಿಳಿದ ಶಾಸಕ ಯು.ಟಿ.ಖಾದರ್ ಮನೆಗೆ ಭೇಟಿ ನೀಡಿದರು. ಇದಾದ ಬಳಿಕ ಉಳ್ಳಾಲ ಇನ್ಸ್ಪೆಕ್ಟರ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಪೊಲೀಸರು ರಾತ್ರಿ ಗಸ್ತು ನಡೆಸದ ಹಿನ್ನೆಲೆಯಲ್ಲಿ ಕಳ್ಳತನ ಹೆಚ್ಚುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೀಟ್ ಪುಸ್ತಕಗಳಿದ್ದರೂ ಕೆಲ ತಿಂಗಳುಗಳಿಂದ ಸಹಿ ಹಾಕುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಫಲಿತಾಂಶದ ಮರುದಿನವೇ ಕೋಮು ಸೌಹಾರ್ದ ಕದಡುವ ಘಟನೆ ನಡೆದಿದೆ. ಇದರ ಹಿಂದಿರುವ ದುಷ್ಟ ಶಕ್ತಿಗಳನ್ನು ಪೊಲೀಸರು ಬಂಧಿಸಬೇಕಾಗಿದೆ. ಇಲ್ಲವಾದರೆ ಮಂಗಳೂರಲ್ಲಿ ಮತ್ತೆ ಕೋಮಿ ಸೌಹಾರ್ದ ಕದಡಲು ದುಷ್ಟ ಶಕ್ತಿಗಳು ಪ್ರಯತ್ನಿಸುವ ಸಾಧ್ಯತೆಗಳಿವೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

