ಬನ್ನಂಜೆ ಗದ್ದೆಗಳಲ್ಲಿ ಬೆಂಕಿ ಆಕಸ್ಮಿಕ; ಅನಾಹುತ ತಪ್ಪಿಸಿದ ಸ್ಥಳೀಯರು
ಉಡುಪಿ: ಇಲ್ಲಿನ ಬನ್ನಂಜೆ ಪರಿಸರದ ಹತ್ತಾರು ಎಕ್ರೆ ಗದ್ದೆಗಳಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಇಲ್ಲಿನ ನಿವಾಸಿಗಳು ಆತಂಕಕ್ಕೊಳಗಾದ ಘಟನೆ ನಡೆಯಿತು. ಸ್ಥಳೀಯ ಯುವಕರು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದರು.
ರಾ.ಹೆ. 66ರಲ್ಲಿರುವ ಶಾರದಾ ಹೊಟೇಲಿನ ಹಿಂಭಾಗದ ಗದ್ದೆಯಲ್ಲಿ ಅನೇಕ ವರ್ಷಗಳಿಂದ ವ್ಯವಸಾಯ ಮಾಡದೇ ಬೆಳೆದು ಒಣಗಿದ್ದ ಕಳೆ ಹುಲ್ಲಿಗೆ ಮಧ್ಯಾಹ್ನ ಸುಮಾರು 3 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು. ಗಾಳಿ ತೀವ್ರ ಹೆಚ್ಚಿದ್ದರಿಂದ ಬೆಂಕಿ ವೇಗವಾಗಿ ಹರಡತೊಡಗಿತು. ಸ್ಥಳೀಯರು ನಂದಿಸಲು ವಿಫಲರಾಗಿ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದರು. ಅವರು ಬಂದು ಒಂದು ಕಡೆಯಲ್ಲಿ ನಂದಿಸುತ್ತಿದ್ದಂತೆ ಇನ್ನೊಂದು ಕಡೆಯಲ್ಲಿ ಬೆಂಕಿ ಹರಡುತ್ತಿತ್ತು. ಕೆಲವೇ ನಿಮಿಷದಲ್ಲಿ ಹತ್ತಾರು ಎಕ್ರೆ ವ್ಯಾಪಿಸಿದ ಬೆಂಕಿ ಬನ್ನಂಜೆ ಶನಿ ದೇವಸ್ಥಾನದವರೆಗೂ ಹರಡಿತು. ಇದರಿಂದ ಪರಿಸರದಲ್ಲಿ ದಟ್ಟ ಹೊಗೆ ತುಂಬಿಕೊಂಡು ಅಲ್ಲಿ ಹತ್ತಾರು ಮನೆಗಳ ನಿವಾಸಿಗಳ ಉಸಿರುಗಟ್ಟತೊಡಗಿತು. ಅಲ್ಲಿನ ವಲಸೆ ಐದಾರು ಕಾರ್ಮಿಕರ ಗುಡಿಸಲಿನ ಸುತ್ತ ಬೆಂಕಿ ಹಬ್ಬಿ ಅವರು ಗುಡಿಸಲಿನಲ್ಲಿದ್ದ ಸಾಮಾನುಗಳನ್ನು ಹೊರಗೆ ಸಾಗಿಸಿದರು. ತಕ್ಷಣ ಸ್ಥಳೀಯ ಯುವಕರು ಸೇರಿ ಹರಸಾಹಸದಿಂದ ಹಸಿ ಎಲೆಯ ಕೊಂಬೆಗಳಿಂದ ಬೆಂಕಿಯನ್ನು ನಂದಿಸಿದರು. ನಂತರ ಬಂದ ಅಗ್ನಿಶಾಮಕ ದಳದವರು ಬೆಂಕಿ ಹತೋಟಿಗೆ ತಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

