ಐಕಳ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ
ಮೂಲ್ಕಿ: ಐಕಳ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಜರಗಿದ ಮಹಾಕಾಳಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕುಂಭಾಭಿಷೇಕದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ವಹಿಸಿದ್ದು ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣಪ್ಪ ದೇರೆಬೈಲು, ಸಮಿತಿಯ ಅಧ್ಯಕ್ಷ ಕಿಟ್ಟ ಮೊಗೇರ ಮತ್ತಿತರರು ಉಪಸ್ಥಿತರಿದ್ದರು.
ಮುಳ್ಳುಬಾಗಿಲು: ಬ್ರಹ್ಮಕಲಶ
ಸುಬ್ರಹ್ಮಣ್ಯ: ಮುಳ್ಳುಬಾಗಿಲು ದೈವಸ್ಥಾನದಲ್ಲಿ ಭಾನುವಾರ ನಾಗ ಶಿಲಾ ಪ್ರತಿಷ್ಠಾ, ಉಳ್ಳಾಕುಲು, ಶಿರಾಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು. ಕೆಮ್ಮಿಂಜೆ ಶ್ರೀ ಲಕ್ಷೀಶ ತಂತ್ರಿಯವರ ನೇತೃತ್ವದಲ್ಲಿ ಮಹಾಗಣಪತಿ ಹೋಮ, ಕಲಶಪೂಜೆ, ಪ್ರತಿಷ್ಠಾ ಹೋಮ, ಶ್ರೀ ನಾಗ ಪ್ರತಿಷ್ಠೆ, ಶ್ರೀ ದೈವಗಳ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ, ಆಶ್ಲೇಷ ಬಲಿ, ಅಷ್ಟವಟ್ಟು ಆರಾಧನೆ, ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು. ಈ ಸಂದರ್ಭ ಅಸಂಖ್ಯಾತ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡರು.
--
ಮಂಗಳೂರು: ಯೆಲ್ಲೋ ಪೇಜಸ್ ಬಿಡುಗಡೆ
ಮಂಗಳೂರು: ಒನ್ಸಿಟಿ ಮೀಡಿಯಾ ವತಿಯಿಂದ 2013-14ನೇ ಸಾಲಿನ ಒನ್ಸಿಟಿ ಯೆಲ್ಲೊ ಪೇಜಸ್ನ 7ನೇ ಆವೃತ್ತಿಯನ್ನು ಪ್ರೆಸ್ಕ್ಲಬ್ನಲ್ಲಿ ಲ್ಯಾಂಡ್ ಇನ್ಪಾಸ್ಟ್ರೆಕ್ಚರ್ ಡೆವಲೆಪ್ಮೆಂಟ್ನ ಅಧ್ಯಕ್ಷ ಸಿರಾಜ್ ಅಹ್ಮದ್ ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒನ್ಸಿಟಿ ಯೆಲ್ಲೋ ಪೇಜಸ್ನ ವ್ಯವಸ್ಥಾಪಕ ನಿರ್ದೇಶಕ ಎಲ್.ಕೆ. ಮೋನು ಬೊರ್ಕಳ, ಯೆಲ್ಲೋ ಪೇಜಸ್ 35 ಸಾವಿರಕ್ಕಿಂತ ಅಧಿಕ ವ್ಯವಹಾರಿಕ ಮಾಹಿತಿ ಒಳಗೊಂಡಿದೆ.
ತುರ್ತು ಸೇವೆಗಳ ವಿವರ, ಪ್ರವಾಸಿ ತಾಣಗಳ ವಿವರ ಇದರಲ್ಲಿದೆ. ಮಂಗಳೂರು, ಉಡುಪಿಯಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ವ್ಯವಹಾರಿಕ ಮಾಹಿತಿ ಇದರಲ್ಲಿದೆ ಎಂದರು.
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಯೆಲ್ಲೋ ಪೇಜಸ್ನ ಸೇವಾವಿವರಗಳನ್ನು ಅಂತರ್ಜಾಲ ಢಿಢಿಢಿ.ಣಜಟಟ್ಟಢಿಠಛ್ಜಜ1.್ಛ್ಟಟ ಪಡೆಯಬಹುದು ಎಂದು ಮೋನು ಬೊರ್ಕಳ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

