ದಕ್ಷಿಣ ಕನ್ನಡ

19ರಂದು 'ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್‌' ಚಿತ್ರ ಮುಹೂರ್ತ

Published On :

ಕಾರ್ಕಳ: ಅತ್ತೂರಿವ ಸೈಂಟ್ ಲಾರೆನ್ಸ್ ಚರ್ಚ್‌ನಲ್ಲಿ 19ರಂದು ಬೆಳಗ್ಗೆ 10 ಗಂಟೆಗೆ ಡಿವೈನ್‌ವರ್ಡ್ ಮೂವಿಸ್ ಇಂಟರ್ ನ್ಯಾಶನಲ್ ಪ್ರಸ್ತುತ ಪಡಿಸುವ 'ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್‌' ಚಲನಚಿತ್ರದ ಮುಹೂರ್ತ ಕಾರ್ಯಕ್ರಮ ಜರುಗಲಿದೆ.
ಸಹ ನಿರ್ಮಾಪಕರಾಗಿ ಡೇವಿಡ್ ಫ್ರಾಂಕ್ ಪೆರ್ನಾಂಡಿಸ್, ರಾಜೇಶ್ ರೋಹನ್ ಮೆಂಡಿಸ್, ಆಲ್ವಿನ್ ವಾಲ್ಟರ್ ಡಿ' ಸೋಜ, ಜಗದೀಶ್ ಶೆಟ್ಟಿ ದೇವಿ ದಯಾಳ್, ವಿಲಿಯಂ ರೆಬೆಲ್ಲೊ ಮಂಗಳೂರು ಕಾರ್ಯನಿರ್ವಹಿಸುತ್ತಿದ್ದು,  ರವಿಚೇತನ್, ಭವ್ಯ, ಶೋಭರಾಜ್, ಟೆನ್ನಿಸ್‌ಕೃಷ್ಣ, ಆನಂದ್ ಬೋಳಾರು, ಬೋಜರಾಜ್ ವಾಮಂಜೂರು ಅಭಿನಯಿಸಲಿದ್ದಾರೆ. ಈ ಚಿತ್ರವನ್ನು ಪ್ರವೀಣ ಡಿ' ಸೋಜ ನಿರ್ದೇಶಿಸಲಿದ್ದಾರೆ. ಕಾರ್ಕಳ ಸಂತ ಲಾರೆನ್ಸ್ ಚರ್ಚ್ ಪವಾಡ ಪುರುಷ ಸಂತ ಲಾರೆನ್ಸ್ ಅವರ ಪವಾಡ ಮತ್ತು ಜೀವನ ಚರಿತ್ರೆಯ ಬಗ್ಗೆ ಈ ಚಲನಚಿತ್ರವು ಮೂಡಿ ಬರಲಿದೆ ಎಂದು ನಿರ್ಮಾಪಕ, ವೆಸ್ಟರ್ನ್ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ವಾಲ್ಟರ್ ಸ್ಟೀಪನ್ ಮೆಂಡಿಸ್ ತಿಳಿಸಿದ್ದಾರೆ.
18ರಂದು ಶಂಕರ ಜನ್ಮಮಹೋತ್ಸವ
ಉಡುಪಿ: ಶ್ರೀಶಂಕರಾಚಾರ್ಯರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಇಲ್ಲಿನ ತೆಂಕನಿಡಿಯೂರು ಕಾಳಿಕಾಂಬಾ ಭಜನಾ ಸಂಘದ ಆಶ್ರಯದಲ್ಲಿ 18ರಂದು ಸಂಜೆ 5ಕ್ಕೆ ನಡೆಯಲಿದೆ. ಸ್ಥಳೀಯ ಕಾಳಿಕಾಂಬಾ ಸಭಾಭವನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸಕ ವಿದ್ವಾನ್ ನಾರಾಯಣ ತಂತ್ರಿ ಬೈಲೂರು ಅವರು ಶಂಕರಾಚಾರ್ಯರ ಜೀವನ ಸಂದೇಶದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ನಂತರ ಧಾರ್ಮಿಕ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ ಎಂದು ಭಜನಾ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಯುರ್ವೇದ ಚಿಕಿತ್ಸಾ ಶಿಬಿರ
ಮಂಗಳೂರು: ವೇದಂ ಆಯುರ್ವೇದ ಆಸ್ಪತ್ರೆ ಮತ್ತು ಸಾಹಿತ್ಯ ಕೇಂದ್ರ ಆಶ್ರಯದಲ್ಲಿ ಉಚಿತ ಆಯುರ್ವೇದ ತಪಾಸಣಾ ಶಿಬಿರ ಸಾಹಿತ್ಯ ಕೇಂದ್ರ ಆವರಣದಲ್ಲಿ ಬುಧವಾರ ಪ್ರಾರಂಭಗೊಂಡಿತು. ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಉದ್ಘಾಟಿಸಿ, ಆಯುರ್ವೇದದ ಮಹತ್ವ ಇಂದಿನ ದಿನಗಳಲ್ಲಿ ಅಗತ್ಯ.  ಇಂಥ ಶಿಬಿರದ ಸದುಪಯೋಗ ಪಡೆಯುವಂತೆ ಕರೆ ನೀಡಿದರು.  ಮೇ 17ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಈ ಶಿಬಿರ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.