ದಕ್ಷಿಣ ಕನ್ನಡ

ಸಂತೋಷ್ ಹೆಗ್ಡೆ, ರಾಮದಾಸ್ ಪೈ, ದಿ.ಲಿಂಗಪ್ಪಯ್ಯಗೆ ಅಭಯಶ್ರೀ ಪ್ರಶಸ್ತಿ

Published On :

ಮಂಗಳೂರು: ಕೊಡಿಯಾಲಬೈಲ್ ಅಭಯಾಶ್ರಮ ವತಿಯಿಂದ ಅಭಯಾಶ್ರಮ ಸಂಸ್ಥಾಪಕ ದಿ.ಬೇಕಲ ಲಿಂಗಪ್ಪಯ್ಯ, ಮಣಿಪಾಲ ವಿವಿ ಕುಲಾಧಿಪತಿ ಡಾ.ರಾಮದಾಸ ಪೈ, ನ್ಯಾ.ಸಂತೋಷ್ ಹೆಗ್ಡೆಗೆ ಅಭಯಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಮೇ 19ರಂದು ಕೊಡಿಯಾಲಬೈಲ್ ಡಾ.ಜಿ.ಎಸ್.ವೃದ್ಧಾಶ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಂದರ್ಭ ಅಭಯಾಶ್ರಮದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿದ ಮೂರು ಬ್ಲಾಕ್‌ಗಳನ್ನು ಉದ್ಘಾಟಿಸಲಾಗುವುದು ಎಂದು  ಸಂಚಾಲಕ ಶ್ರೀನಾಥ ಹೆಗ್ಡೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ಮಹಡಿ ಬ್ಯಾಂಕ್‌ಗಳ ದೇಣಿಗೆ ಮೂಲಕ ನಿರ್ಮಿಸಿದರೆ, ಎರಡನೇ ಮಹಡಿ ಕುಂಬ್ಳೆ ರಾಮದಾಸ ನಾಯಕ ಸ್ಮಾರಕ ಟ್ರಸ್ಟ್ ನಿರ್ಮಿಸಿಕೊಟ್ಟಿದೆ. ಎಂ.ಆರ್.ಪಿ.ಎಲ್. ದೇಣಿಗೆಯಿಂದ 15 ಲಕ್ಷ ವೆಚ್ಚದಲ್ಲಿ ಅಡುಗೆಕೋಣೆ ನಿರ್ಮಿಸಲಾಗಿದೆ. 1982ರಲ್ಲಿ ಡಾ.ರಾಧಾ ಅವರು ಕೊಡಿಯಾಲ ಬೈಲ್‌ನ ಎರಡು ಮನೆಗಳಿರುವ ಸ್ಥಳವನ್ನು ವಿಲ್ ಬರೆದು ಆಶ್ರಮಕ್ಕೆ ಬಿಟ್ಟು ಕೊಟ್ಟ ಮಹಾತ್ಮರು. ಅವರ ತಾಯಿ, ತಂದೆ ಹೆಸರಿನ ವೃದ್ಧಾಶ್ರಮ ಮಾಡಿದ್ದು, 60 ಮಂದಿ ವಾಸ್ತವ್ಯ ಇದ್ದಾರೆ. ಕೆಎಂಸಿ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ಲಭಿಸುತ್ತದೆ. ಉಚಿತ ವಸತಿ, ಊಟವೂ ಲಭ್ಯ. ಔಷಧ ಕ್ಕಾಗಿ 3 ಲಕ್ಷ ವೆಚ್ಚವಾಗುತ್ತದೆ. ದಾನಿಗಳು ಆಶ್ರಮಕ್ಕೆ ಊಟದ ವ್ಯವಸ್ಥೆ ಮಾಡಬಹುದು. ದಾನಿಗಳು ದೇಣಿಗೆ ನೀಡಿದರೆ 25ಎಸಿ ಮೇರೆಗೆ ಸಂಪೂರ್ಣ ವಿನಾಯಿತಿ ದೊರಕುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಂ.ಎನ್.ಕಾಮತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.