ದಕ್ಷಿಣ ಕನ್ನಡ

ಮಾಣಿ ಪೆರಾಜೆ ರಾಮಚಂದ್ರಾಪುರ ಮಠ ಸಭಾಭವನ ಪ್ರವೇಶೋತ್ಸವ

Published On :

ವಿಟ್ಲ: ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ವಠಾರದಲ್ಲಿ ನಿರ್ಮಿಸಿದ ನೂತನ ಸಭಾಭವನದ ಪ್ರವೇಶೋತ್ಸವ ಸೋಮವಾರ ಅದ್ಧೂರಿಯಾಗಿ ನೆರವೇರಿತು.
ಶ್ರೀ ಸೀತಾರಾಮಚಂದ್ರ ಚಂದ್ರಮೌಳೀಶ್ವರ ಶ್ರೀ ರಾಜರಾಜೇಶ್ವರೀ ದೇವತಾ ಸಹಿತ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಭಾಭವನ ಪ್ರವೇಶಿಸಿದರು.
ಮಹಿಳೆಯರು ಸ್ವಾಮೀಜಿಯನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರೆ ಮಹನೀಯರು ಚೆಂಡೆ, ಕೊಂಬು, ವಾದ್ಯಗಳೊಂದಿಗೆ ಮೇಳೈಸಿದರು. ಶ್ರೀ ಗುರುಪಾದುಕಾ ಪೂಜೆಯನ್ನು ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ದಂಪತಿ ನೆರವೇರಿಸಿದರು.
ಬಳಿಕ ಸ್ವರ್ಣಮಂಟಪದಲ್ಲಿ ಶ್ರೀಕರಾರ್ಚಿತ ಪೂಜೆ, ಶಿಷ್ಯಭಕ್ತರಿಂದ ರುದ್ರಪಠನ, ಅಷ್ಟಾವಧಾನ ಸೇವೆ, ಮಹಿಳೆಯರಿಂದ ಕುಂಕುಮಾರ್ಚನೆ, ಶ್ರೀ ಗುರುಭಿಕ್ಷಾ ಸೇವೆ, ಉಗ್ರಾಣ ಮುಹೂರ್ತ, ಹೊರೆಕಾಣಿಕೆ ಸಮರ್ಪಣೆ ಜರುಗಿತು.
ಸಭಾಭವನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಉರಿಮಜಲು ರಾಮ ಭಟ್, ಬಂಗಾರಡ್ಕ ರಾಮಕೃಷ್ಣ ಭಟ್, ಶ್ರೀ ಮಠದ ಮುಖ್ಯ ಕಾರ್ಯನಿರ್ವಹಣಾಕಾರಿ ಕೆ.ಜಿ.ಭಟ್, ಆಡಳಿತ ಸಮಿತಿ ಉಪಾಧ್ಯಕ್ಷೆ ಶಾರದಾ ಜಯಗೋವಿಂದ, ಆಡಳಿತ ಸಮಿತಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಯಡಪ್ಪಾಡಿ, ಹವ್ಯಕ ಮಹಾಮಂಡಲ ಕಾರ್ಯದರ್ಶಿ ಜೆಡ್ಡು ರಾಮಚಂದ್ರ ಭಟ್, ಸೇವಾ ವಿಭಾಗ ಪ್ರಧಾನ ಕೆ.ಟಿ.ವೆಂಕಟೇಶ್ವರ ನೂಜಿ, ಮುಖ್ಯಸ್ಥರಾದ ಎಂ.ಬಿ.ಮುಳಿಯ, ದಿಗ್ದರ್ಶಕ ಮಂಡಳಿ ಸದಸ್ಯ ಬಿ.ಜಿ.ರಾಮ ಭಟ್, ಮಂಗಳೂರು ಹವ್ಯಕ ಮಂಡಲ ಕಾರ್ಯದಶರ್ ಸೇರಾಜೆ ಸುಬ್ರಹ್ಮಣ್ಯ ಭಟ್, ಕೋಶಾಕಾರಿ ಪಕಳಕುಂಜ ಗೋಪಾಲಕೃಷ್ಣ ಭಟ್, ನಾಗರಾಜ ಭಟ್ ಪೆದಮಲೆ, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಕಾಂತಾಜೆ ಈಶ್ವರ ಭಟ್, ಸಭಾಭವನ ನಿರ್ಮಾಣ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ಕೋಶಾಧ್ಯಕ್ಷ ಬಂಗಾರಡ್ಕ ಜನಾರ್ದನ ಭಟ್, ಆಡಳಿತ ಸಮಿತಿ ಕೋಶಾಕಾರಿ ಮೈಕೆ ಗಣೇಶ್ ಭಟ್, ಕೈಲಾರು ಗಿರಿಶಂಕರ, ಎಸ್.ಬಿ.ಹೇಟ್, ಕಟ್ಟಡ ನಿರ್ಮಾಪಕ, ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.