ಅನ್ನಮೂಲೆಯ ನೀರು ಬೊಬ್ಬೆಕೇರಿಗೆ: ಗ್ರಾಮಸ್ಥರ ಪ್ರತಿಭಟನೆ
ವಿಟ್ಲ: ಇಲ್ಲಿನ ಕಸಬಾ ಗ್ರಾಮದ ಪಳಿಕೆ ಅನ್ನಮೂಲೆ ಗ್ರಾಮಸ್ಥರಿಗಾಗಿ ಕೊರೆದ ಕೊಳವೆ ಬಾವಿ ನೀರನ್ನು ಬೊಬ್ಬೆಕೇರಿ ಎಂಬಲ್ಲಿಗೆ ಸರಬರಾಜು ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅನ್ನಮೂಲೆ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಒಂದು ತಿಂಗಳ ಹಿಂದೆ ಈ ಪ್ರದೇಶದ ಗ್ರಾಮಸ್ಥರಿಗಾಗಿ ಕೊಳವೆ ಬಾವಿ ಕೊರೆಯಲಾಗಿತ್ತು. ಅದರಿಂದ ಗ್ರಾಮಸ್ಥರು ನೀರು ಪಡೆಯುತ್ತಿದ್ದರು.
ಆದರೆ ಕೆಲ ದಿನಗಳಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಕೊಳವೆ ಬಾವಿಗೆ ಪೈಪ್ ಅಳವಡಿಸಿ ಈ ನೀರನ್ನು ನಮಗೆ ನೀಡದೆ, ಬೊಬ್ಬೆಕೇರಿ ಪರಿಸರಕ್ಕೆ ನೀರು ಪೂರೈಸಲು ಭಾರಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಅದರ ವಿರುದ್ಧ ಪ್ರತಿಭಟನೆ ನಡೆಸಿದರು.
ಕೊಳವೆ ಬಾವಿಗೆ ಪೈಪನ್ನು ಅಳಡಿಸುವ ಸಂದರ್ಭ ಇಲ್ಲಿಯ ರಸ್ತೆಗಳನ್ನು ಕೆಡವಿ ಹಾಕಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದಲ್ಲದೆ, ಕಳೆದ ಎಂಟು ದಿನಗಳಿಂದ ಇಲ್ಲಿಗೆ ನಲ್ಲಿ ನೀರು ಕೂಡ ಸರಬರಾಜು ಆಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಬೇರೆ ಕಡೆಗೆ ನೀರು ಬೀಡಲು ನಮ್ಮ ವಿರೋಧವಿಲ್ಲ. ಆದರೆ ನಮಗೆ ನೀರು ಒದಗಿಸಿ ಬಳಿಕ ಬೇರೆ ಪ್ರದೇಶಗಳಿಗೆ ನೀರು ಬಿಡಲಿ ಎಂದು ಒತ್ತಾಯಿಸಿದರು.
ಘಟನೆ ವಿಷಯ ತಿಳಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಣ್ಣ ಸ್ಥಳಕ್ಕೆ ಧಾವಿಸಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಆದರೆ ಪಂಚಾಯಿತಿ ಸಿಬ್ಬಂದಿಯೊಬ್ಬರ ಬೇಜವಾಬ್ದಾರಿತನದಿಂದ ಈ ಪ್ರದೇಶದಲ್ಲಿ ಕೆಡವಿ ಹಾಕಲಾದ ನಲ್ಲಿ ಪೈಪ್ಗಳನ್ನು ಸೋಮವಾರ ಸಂಜೆವರೆಗೆ ದುರಸ್ತಿಗೊಳಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

