ರು. 247.18 ಲಕ್ಷ ವೆಚ್ಚದಲ್ಲಿ ತೋಟಗಾರಿಕೆ ಬೆಳೆ ವಿಸ್ತರಣೆ
ಮಂಗಳೂರು: ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ವತಿಯಿಂದ ಪ್ರಸಕ್ತ ವರ್ಷದಲ್ಲಿ 3503 ಹೆಕ್ಟೇರಿನಲ್ಲಿ ರು. 247.18 ಲಕ್ಷದಲ್ಲಿ ತೋಟಗಾರಿಕೆ ಬೆಳೆ ವಿಸ್ತರಿಸುವ ಗುರಿ ಹೊಂದಿದೆ.
ಹವಮಾನಕ್ಕೆ ಹೊಂದಿಕೆಯಾಗುವ ಹಣ್ಣಿನ ಗಿಡಗಳು, ತೆಂಗು, ಅಡಿಕೆ, ಬಾಳೆ, ಕೊಕ್ಕೋ, ಗೇರು, ಮೆಣಸು ಮುಂತಾದವುಗಳನ್ನು ಬೆಳೆದು ರೈತರ ಆರ್ಥಿಕ ಮಟ್ಟ ವೃದ್ಧಿಸುವ ಗುರಿ ಹೊಂದಿದೆ.
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 60 ಹೆಕ್ಟೇರಿನಲ್ಲಿ ಬಾಳೆ ಪ್ರದೇಶ ವಿಸ್ತರಣೆಗೆ ರು. 11.81 ಲಕ್ಷ, 10 ಹೆಕ್ಟೇರಿನಲ್ಲಿ ಅನಾನಸು ಪ್ರದೇಶ ವಿಸ್ತರಣೆಗೆ ರು. 2.44 ಲಕ್ಷ, 20 ಹೆಕ್ಟೇರ್ ಹೂವಿನ ಪ್ರದೇಶ ವಿಸ್ತರಣೆಗೆ ರು. 1.58 ಲಕ್ಷ, 25 ಹೆಕ್ಟೇರಿನಲ್ಲಿ ಕಾಳುಮೆಣಸು ಪ್ರದೇಶ ವಿಸ್ತರಣೆಗೆ ರು. 5 ಲಕ, 10 ಹೆಕ್ಟೇರ್ ಪ್ರದೇಶ ವಿಸ್ತರಣೆಯಲ್ಲಿ ಜಾಯಿಕಾಯಿ ಬೆಳೆಗೆ ರು. 2 ಲಕ್ಷ, 45 ಹೆಕ್ಟೇರಿನಲ್ಲಿ ಗೇರು ಅಭಿವೃದ್ಧಿಗೆ ರು. 5.40 ಲಕ್ಷ ಹಾಗೂ 60 ಹೆಕ್ಟೇರ್ ಕೊಕ್ಕೋ ಬೆಳೆ ಅಭಿವೃದ್ಧಿಗೆ ರು. 7.20 ಲಕ್ಷ ಮೀಸಲಿಡಲಾಗಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ 110 ಹೆಕ್ಟೇರ್ ಕಾಳು ಮೆಣಸು ಅಭಿವೃದ್ಧಿಗೆ 68 ಲಕ್ಷ, 100 ಹೆಕ್ಟೇರ್ ಕೊಕ್ಕೋ ವಿಸ್ತರಣೆಗೆ ರು. 37ಲಕ್ಷ, 25 ಹೆಕ್ಟೇರ್ ಪ್ರದೇಶದಲ್ಲಿ ಬಾಳೆಎಲೆ ಬೆಳೆಯಲು ರು. 29 ಲಕ್ಷ ವೆಚ್ಚ ಮಾಡುವ ಗುರಿಯಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ನ ಪುನಶ್ಚೇತನ ಯೋಜನೆಯಡಿ ರು. 3.75 ಲಕ್ಷ ವೆಚ್ಚದಲ್ಲಿ ಗೇರು ಬೆಳೆ, 30 ಹೆಕ್ಟೇರ್ ಪ್ರದೇಶದಲ್ಲಿ ರು. 4.50 ಲಕ್ಷದಲ್ಲಿ ಕಾಳು ಮೆಣಸು ಬೆಳೆಗಳನ್ನು ಅಭಿವೃದ್ಧಿಗೊಳಿಸಲಾಗುವುದು.
ರೋಗಬಾಧಿತ ಅಡಿಕೆ ತೋಟ ಪುನಶ್ಚೇತನ: ತೋಟಗಾರಿಕಾ ರಾಜ್ಯ ವಲಯ ಕಾರ್ಯಕ್ರಮದಲ್ಲಿ ಜಿಲ್ಲೆಯ 533 ಹೆಕ್ಟೇರ್ನಲ್ಲಿ ರೋಗ ಬಾಧಿತವಿರುವ ಅಡಿಕೆ ತೋಟಗಳನ್ನು ರು. 40 ಲಕ್ಷ ವೆಚ್ಚದಲ್ಲಿ ಪುನಶ್ಚೇತಗೊಳಿಸುವ ಗುರಿಯಿದೆ.
ಸಸ್ಯ ಸಂರಕ್ಷಣೆಗೆ ತಾಲೂಕು ಪಂಚಾಯ್ತಿ ಯೋಜನೆಯನ್ವಯ 300 ಹೆಕ್ಟೇರ್ಗೆ ರು. 6 ಲಕ್ಷ ಹಾಗೂ ರಾಜ್ಯ ವಲಯ ಯೋಜನೆಯಡಿ 100 ಹೆಕ್ಟೇರ್ಗೆ ರು. 2 ಲಕ್ಷ, ತೋಟಗಾರಿಕಾ ಮಿಷನ್ನಡಿಯಲ್ಲಿ 1500 ಹೆಕ್ಟೇರ್ಗೆ ರು. 15 ಲಕ್ಷ ವೆಚ್ಚ ಮಾಡುವ ಉದ್ದೇಶ ಹೊಂದಿದೆ.
ತೋಟಗಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ವತಿಯಿಂದ 1,350 ಜನರಿಗೆ ತರಬೇತಿ ರು. 14.65 ಲಕ್ಷ ಹಾಗೂ ತಾಲೂಕು ಪಂಚಾಯ್ತಿ ಯೋಜನೆಯನ್ವಯ ರು. 1.50 ಲಕ್ಷ ವೆಚ್ಚದಲ್ಲಿ 750 ಮಂದಿಗೆ ವಿವಿಧ ಬೆಳೆಗಳ ಕುರಿತು ತರಬೇತಿ ನೀಡಲಾಗುವುದು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

