ದಕ್ಷಿಣ ಕನ್ನಡ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜನರೇ ಕಿತ್ತು ಎಸಿತಾರೆ: ಪೂಜಾರಿ

Published On :

ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ದೇಶದಿಂದಲೇ ತೆಗೆದು ಹಾಕುತ್ತಾರೆ. ಅದು ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯಿಂದ ಆರಂಭವಾಗಿದೆ ಎಂದು ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಯುಪಿಎ ಸರ್ಕಾರದ ಮೇಲೆ ನಿಷ್ಕ್ರಿಯತೆ, ಭ್ರಷ್ಟಾಚಾರದ ಆರೋಪ ಹೊರಿಸಿ ಮೇ 28ರಂದು ದೇಶಾದ್ಯಂತ ಜೈಲ್ ಭರೋ ಆಂದೋಲನ ನಡೆಸುವುದಾಗಿ ಬಿಜೆಪಿ ಹೇಳಿದೆ. ಹೀಗೆ ಹೇಳುವುದಕ್ಕೆ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಹೇಳಿದರು.
ಬಿಜೆಪಿಗೆ ಸ್ವಲ್ಪವಾದರೂ ಮಾನಮರ್ಯಾದೆ ಇದ್ದರೆ, ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರವೂ ಸೇರಿದಂತೆ ಬಿಜೆಪಿಯ ಆಡಳಿತ ಇರುವ ರಾಜ್ಯಗಳಲ್ಲಿ ಸರ್ಕಾರಗಳು ಹೇಗೆ ನಡೆಯುತ್ತಿವೆ, ಎಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಗಮನಿಸಲಿ ಎಂದರು.
ದೇಶದ ಮಾನ ಕಳೆಯುತ್ತಿರುವ ಬಿಜೆಪಿ: ಬಿಜೆಪಿ ಆರೋಪಿಸುತ್ತಿರುವ ಬೆಲೆ ಏರಿಕೆ, ಹಣದಬ್ಬರ ಇಳಿಕೆಯಲ್ಲಿ ಕೇಂದ್ರ ಸರ್ಕಾರದ ಜತೆ ರಾಜ್ಯ ಸರ್ಕಾರಗಳ ಕೊಡುಗೆಯೂ ಇದೆ. ಕೃಷಿ ಉತ್ಪನ್ನಗಳ ಸಂಗ್ರಹಣೆ ರಾಜ್ಯ ಸರ್ಕಾರಗಳ ಕೆಲಸ, ದೇಶದ ಜಿಡಿಪಿ ಏರಿಕೆಯಲ್ಲಿಯೂ ರಾಜ್ಯ ಸರ್ಕಾರಗಳ ಪಾಲಿದೆ. ಕೇಂದ್ರದಲ್ಲಿ ಮಂತ್ರಿಗಳಾಗಿದ್ದ ಬಿಜೆಪಿಯ ಆಡ್ವಾನಿ, ಸುಷ್ಮಾ ಸ್ವರಾಜ್ ಅವರಿಗೆ ಇಂತಹ ಆರ್ಥಿಕ ವಿಷಯಗಳು ಗೊತ್ತಿಲ್ಲವೇ? ಇಡೀ ವಿಶ್ವದ ಜಿಡಿಪಿ ಶೇ 1.9 ಇರುವಾಗ, ಭಾರತದ ಜಿಡಿಪಿ ಶೇ 8.2 ಇದೆ. ಈ ಬಗ್ಗೆ ಖುಷಿ ಪಡುವುದನ್ನು ಬಿಟ್ಟು, ಬಿಜೆಪಿ ಜಗತ್ತಿನ ಮುಂದೆ ದೇಶದ ಮಾನ ಕಳೆಯುತ್ತಿದೆ ಎಂದು ಪೂಜಾರಿ ಆರೋಪಿಸಿದರು.
ಕೇಂದ್ರ ಯುಪಿಎ ಸರ್ಕಾರದ ಮಂತ್ರಿಗಳ ಮೇಲೆ ಹೊರಿಸಲಾಗಿರುವ ಹಗರಣಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಶಿಶುಗಳು. ಈ ಹಗರಣಗಳಿಂದ ದೇಶಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ ಎನ್ನುವ ಆರೋಪ ಸಾಬೀತಾಗಿಲ್ಲ ಎಂದವರು ಸಮರ್ಥಿಸಿಕೊಂಡರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹರೀಶ್ ಕಿಣಿ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಕೇಶವ ಕೋಟ್ಯಾನ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.