ದಕ್ಷಿಣ ಕನ್ನಡ

ಅಂತಿಮ ಹಂತದಲ್ಲಿ ಏಣಿತಡ್ಕ ಘನವಾಹನ ಸಂಚಾರ ಯೋಗ್ಯ ಸೇತುವೆ ಕಾಮಗಾರಿ

Published On :

ಉಪ್ಪಿನಂಗಡಿ: ಕೈಲ ಗ್ರಾಮದ  ಏಣಿತಡ್ಕ ಮರಾಠಿ ಕಾಲೋನಿಯನ್ನು ಸಂಪರ್ಕಿಸಲು ಏರ್ಮಡ್ಕ ಎಂಬಲ್ಲಿ ಹೊಳೆಯೊಂದಕ್ಕೆ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‌ನಿಂದ ಬಿಡುಗಡೆಯಾದ ರು. 50 ಲಕ್ಷ ವೆಚ್ಚದಲ್ಲಿ ಘನ ವಾಹನ ಸಂಚಾರಕ್ಕೆ ಯೋಗ್ಯವಾದ  ಸುಸಜ್ಜಿತ ಸೇತುವೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಅಂತಿಮ ಹಂತ ತಲುಪಿದ್ದು, ನಾಗರಿಕರ ಮನದಲ್ಲಿ ಸಂತಸ ಭಾವ ಮೂಡುತ್ತಿದೆ.
ಕುಮಾರಧಾರ ನದಿಯನ್ನು ಸಂಧಿಸುವ ಇಲ್ಲಿನ ಹೊಳೆಗೆ ನಾಗರಿಕ ಬೇಡಿಕೆಗೆ ಸ್ಪಂದಿಸುವಂತೆ ಕಿರಿದಾದ ಸೇತುವೆಯೊಂದು 2 ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಆದರೆ ಇದರಲ್ಲಿ ಘನ ವಾಹನಗಳು ತೆರಳಲು ಅಸಾಧ್ಯವಾಗಿತ್ತು.  ಸುಮಾರು 50ಕ್ಕೂ ಹೆಚ್ಚು ಕುಟುಂಬಗಳ ಉಪಯೋಗಕ್ಕಿದ್ದ ಸೇತುವೆ ಉಪಯೋಗಕ್ಕೆ ಇಲ್ಲದ ಸೌಲಭ್ಯವಾಗಿತ್ತು.
ನಾಗರಿಕರ ಸವಲತ್ತಿಗೆ ಪೂರಕವಾಗಿ ಈ ಹೊಳೆಗೆ ಘನ ವಾಹನ ಸಂಚಾರದ ಸೇತುವೆ ಬೇಕೆಂಬ ನಾಗರಿಕರ ಬೇಡಿಕೆಯನ್ನು ಪುರಸ್ಕರಿಸಿದ ಶಾಸಕ ಎಸ್. ಅಂಗಾರ ಕಳೆದ ಅವಧಿಯಲ್ಲಿ ಪರಿಶೀಲನೆ ನಡೆಸಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‌ನಿಂದ ಸುಮಾರು ರು. 50 ಲಕ್ಷ ಬಿಡುಗಡೆಗೊಳಿಸಿದರು.
ಪರಿಣಾಮವಾಗಿ ಇದೀಗ ಸುಮಾರು 16 ಮೀಟರ್ ಉದ್ದದ, 6 ಮೀಟರ್ ಅಗಲದ ಸೇತುವೆ  ನಿರ್ಮಾಣವಾಗುತ್ತಿದೆ. ಬಹುತೇಕ ಎಲ್ಲಾ ಕೆಲಸಗಳು ಮುಗಿದಿದ್ದು, ಹದಿನೈದು ದಿನದೊಳಗೆ ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಜನಾರ್ದನ ಪತ್ರಿಕೆಗೆ ತಿಳಿಸಿದ್ದಾರೆ.
ಸ್ಥಳಿಯ ಜನಪ್ರತಿನಿಧಿಗಳ, ಮುಖಂಡರ ಪ್ರಯತ್ನದಂತೆ ಕಳೆದ ಬಾರಿಯ ಬಿಜೆಪಿ ಸರ್ಕಾರದ ಅನುಪಮ ಕೊಡುಗೆಯಾಗಿ ಈ ಸೇತುವೆ ಈ ಭಾಗದ ಜನತೆಯ ಮನಸ್ಸು ಅರಳಿಸಿದೆ. ಮನೆ ತನಕ ವಾಹನದೊಂದಿಗೆ ಸಾಗಬಹುದಾದ ಕನಸು ನನಸಾದ ಬಗ್ಗೆ ಸಂತಸದ ಭಾವ ವ್ಯಕ್ತವಾಗಿದ್ದು. ಶಾಸಕ ಎಸ್. ಅಂಗಾರ ಮತ್ತು ಸ್ಥಳಿಯ ಪ್ರತಿನಿಧಿಗಳ ಬಗ್ಗೆ ಇಲ್ಲಿನ ನಾಗರಿಕರು ಕೃತಜ್ಞತಾ ಭಾವದಿಂದ ಧನ್ಯತೆ ಸಲ್ಲಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.