ಉಪನ್ಯಾಸಕ ಹುದ್ದೆಗೆ ಆಹ್ವಾನ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಮಡಿಕೇರಿ ವ್ಯಾಪ್ತಿಯಲ್ಲಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾಲಯ: 19 ಪ್ರೊಫೆಸರ್, 15 ಅಸಿಸ್ಟೆಂಟ್ ಪ್ರೊಫೆಸರ್, 2 ಪ್ರಾಂಶುಪಾಲರು.
ಮಡಿಕೇರಿ ವಿಶ್ವವಿದ್ಯಾಲಯ: 15 ಅಸಿಸ್ಟೆಂಟ್ ಪ್ರೊಫೆಸರ್. ಒಟ್ಟು 69 ಹಾಗೂ 14 ಬ್ಯಾಕ್ಲಾಗ್ ಹುದ್ದೆಗಳಿಗೆ ಅರ್ಹ ಮಹಿಳೆ ಮತ್ತು ಪುರುಷರಿಂದ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 61 ವರ್ಷ ವಯೋವುತಿ. ಅರ್ಜಿ ನಮೂನೆಯನ್ನು ಢಿಢಿಢಿ.ಟಛಟ್ಜಿಛಟ್ಟ್ಠಜ್ಡಟ್ಝಿಢಜ್ಠಡ್ಝಡಿಣ.ಛ್ಛ.್ಝಟಿ ವೆಬ್ಸೈಟ್ನಿಂದ ಪಡೆದು ರಿಜಿಸ್ಟ್ರಾರ್, ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿ ಇಲ್ಲಿಗೆ ಸಲ್ಲಿಸಬಹುದು. ಜೂ. 10 ಕೊನೆ ದಿನ.
ಅರ್ಜಿ ಆಹ್ವಾನ
ಮಂಗಳೂರು: 2012-13ನೇ ಸಾಲಿನ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯಲ್ಲಿ ಮಹಿಳೆಯರಿಗೆ ಶೇ. 33 ಹಾಗೂ ಅಂಗವಿಕಲರಿಗೆ ಶೇ 3 ಮೀಸಲಾತಿ ಇಡಲಾಗಿದೆ. ಅರ್ಜಿ ಸಲ್ಲಿಸಲು ಜೂ. 30 ಕೊನೆ ದಿನ. ಅರ್ಹತೆಗಳು: ಕುಟುಂಬದ ವಾರ್ಷಿಕ ಆದಾಯ ರು. 22 ಸಾವಿರ ಮೀರಿರಬಾರದು. 18 ರಿಂದ 55 ವರ್ಷ ವಯೋವುತಿ ಹೊಂದಿರಬೇಕು. ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ, ಕೊಟೇಶನ್, ಭಾವಚಿತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ 0824-2450044 ಸಂಪರ್ಕಿಸಬಹುದು.
ಅರ್ಜಿ ಆಹ್ವಾನ
ಮಂಗಳೂರು: ಬೆಂಗಳೂರು ವಿಜಯನಗರ ನಾಯಕ ಸಂಘದ ವತಿಯಿಂದ ವಾಲ್ಮೀಕಿ ನಾಯಕ ಸಮಾಜದ 2012-13ನೇ ಸಾಲಿನ ಪಿಯುಸಿ, ಎಸ್ಎಸ್ಎಲ್ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆಯಾ ಶಾಲಾ ಮುಖ್ಯೋಪಾಧ್ಯಾಯರಿಂದ ಸಹಿ ಹಾಕಿದ ಅಂಕಪಟ್ಟಿ ಪ್ರತಿ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಜು. 7 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್. ಆವಲಪ್ಪ- 9916801042 ಸಂಪರ್ಕಿಸಬಹುದು.
ಗುಟ್ಕಾ ನಿಷೇಧಕ್ಕೆ ಸ್ವಾಗತ
ಮಂಗಳೂರು: ಸರ್ವೊಚ್ಚ ನ್ಯಾಯಾಲಯದ ಆದೇಶದಂತೆ ಗುಟ್ಕಾ ನಿಷೇಧಿಸಿ ಕೋಟ್ಯಾಂತರ ಬಡವರ ಬದುಕನ್ನು ಕ್ಯಾನ್ಸರ್ನಿಂದ ಮುಕ್ತಗೊಳಿಸುವ ರಾಜ್ಯ ಸರ್ಕಾರದ ಕ್ರಮ ಶ್ಲಾಘನೀಯ ಎಂದು ಮಾಜಿ ಶಾಸಕ ಕೆ. ವಿಜಯಕುಮಾರ್ ಶೆಟ್ಟಿ ಹೇಳಿದ್ದಾರೆ. ಗುಟ್ಕಾ ನಿಷೇಧದ ವಿಚಾರ ಪ್ರಸ್ತಾಪವಾದಾಗಲೆಲ್ಲಾ ಅಡಕೆ ಬೆಳೆಗಾರರ ಸಂಕಷ್ಟ ಮುಂದಿಟ್ಟು ತಕರಾರು ತೆಗೆಯುತ್ತಿದ್ದು, ಇದು ಗುಟ್ಕಾ ಲಾಬಿಯ ಕೈವಾಡ ಎಂಬ ಅನುಮಾನ ಉಂಟಾಗುತ್ತಿದೆ ಎಂದಿದ್ದಾರೆ. ಗುಟ್ಕಾ ತಯಾರಿಕೆಗೆ ಭಾರತದ ಮೃದು ಅಡಕೆಗಿಂತ ವಿದೇಶದ ಗಟ್ಟಿ ಅಡಕೆಯನ್ನು ಹೆಚ್ಚು ಬಳಸಲಾಗುತ್ತಿದೆ. ಅಡಕೆ ಪರ್ಯಾಯ ಬಳಕೆ, ರೈತರಿಗೆ ಸಬ್ಸಿಡಿ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿ ಪರಿಹಾರ ನೀಡಲಿ. ಇದನ್ನು ಹೊರತುಪಡಿಸಿ ಗುಟ್ಕಾ ನಿಷೇಧವನ್ನು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಊರ್ಜಾ' ವೇದಿಕೆ ಅಸ್ತಿತ್ವಕ್ಕೆ
ಉಡುಪಿ: ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಭೂಮಾಫಿಯಾ ಮತ್ತು ಇತರ ರಾಜಕೀಯ ಬಲವುಳ್ಳವರು, ಅಧಿಕಾರಸ್ಥರು ಸಾಮಾನ್ಯ ಜನರನ್ನು ಶೋಷಿಸುವ ಘಟನೆಗಳು ಹೆಚ್ಚುಹೆಚ್ಚು ನಡೆಯುತ್ತಿದೆ. ಇಂತಹ ಸಂದರ್ಭ ಸಂತ್ರಸ್ತರಿಗೆ ಸಹಾಯವನ್ನೊದಗಿಸುವ ಉದ್ದೇಶದಿಂದ ಊರ್ಜಾ (ಉಡುಪಿ ರೈಸಸ್ ಫಾರ್ ಜಸ್ಟೀಸ್ ಅದೈನ್ಸ್ಟ್ ಅಟ್ರಾಸಿಟಿಸ್) ಎಂಬ ವೇದಿಕೆ ಅಸ್ತಿತ್ವಕ್ಕೆ ತರಲಾಗುತ್ತಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕಿ ಸಾಧನಾ ಕಿಣಿ, ಪೊಲೀಸ್ ಇಲಾಖೆ, ನ್ಯಾಯಾಂಗ ವ್ಯವಸ್ಥೆಯಿಂದಲೂ ಸರಿಯಾದ ಮಾರ್ಗದರ್ಶನ ದೊರೆಯದೆ ಅವರು ಇನ್ನಷ್ಟು ಸಂತ್ರಸ್ತರಾಗುತ್ತಿದ್ದಾರೆ. ಆದ್ದರಿಂದ ಇಂತಹ ಜನರಿಗೆ ಸಹಾಯ ಮಾಡಲು ವೇದಿಕೆ ರೂಪಿಸಲಾಗಿದೆ ಎಂದು ವಿವರಿಸಿದರು. ಅನೇಕ ಬಾರಿ ಹಲ್ಲೆ, ಭೂಮಿ ಆಕ್ರಮಣ, ಶೋಷಣೆಗೆ ಒಳಗಾಗುವ ಸಂತ್ರಸ್ತರಿಗೆ ಕಾನೂನು, ಸೆಕ್ಷನ್ ಇತ್ಯಾದಿಗಳು ತಿಳಿಯದೆ ನ್ಯಾಯ ಸಿಗದ ಘಟನೆಗಳು ನಡೆಯುತ್ತಿವೆ. ಆದ್ದರಿಂದ ಸಂತ್ರಸ್ತರ ಪರವಾಗಿ ಹೋರಾಟ ನಡೆಸುವುದು ತಮ್ಮ ಉದ್ದೇಶವಲ್ಲ, ಪುರುಷ-ಮಹಿಳೆ ಬೇಧವಿಲ್ಲದೇ ಸೂಕ್ತ ಕಾನೂನು ತಿಳಿದವರಿಂದ ಸಹಾಯ, ಮಾರ್ಗದರ್ಶನ ಮಾಡುವುದಷ್ಟೇ ತಮ್ಮ ವೇದಿಕೆಯ ಉದ್ದೇಶ ಎಂದು ಅವರು ಹೇಳಿದರು. ವೇದಿಕೆ ಸದಸ್ಯರಾದ ದಿವ್ಯಾ ಹೆಗ್ಡೆ, ಅಂಬಿಕಾ ಜಿ. ನಾಯಕ್, ಅನಿತಾ ನಾಯಕ್ ಮತ್ತು ರೇವತಿ ನಾಡಿಗೇರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

