'ಕಾಂಗ್ರೆಸ್, ಬಿಜೆಪಿ ಕೊರತೆ ಮುಚ್ಚಲು ರಾಹುಲ್, ಮೋದಿ ಹೆಸರು ಹೇಳುತ್ತಿವೆ'
ಮಂಗಳೂರು: ಭ್ರಷ್ಟಾಚಾರ ಹಾಗೂ ಹಣಕಾಸು ನೀತಿಗಳ ವಿಚಾರದಲ್ಲಿ ಕಾಂಗ್ರೆಸ್ಗಿಂತ ಬಿಜೆಪಿ ಭಿನ್ನವಾಗಿಲ್ಲ. ತಮ್ಮ ಕುಂದು ಕೊರತೆಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಬಿಜೆಪಿ ನರೇಂದ್ರ ಮೋದಿ ಎಂಬ ಹೆಸರನ್ನು ಮುಂದೆ ಮಾಡುತ್ತಿವೆ ಂದು ಕಾಸರಗೋಡು ಸಿಪಿಎಂ ಮುಖಂಡ ಎ.ಕೆ.ನಾರಾಯಣ ಹೇಳಿದರು.
ಎನ್ಜಿಒ ಸಭಾಭವನದಲ್ಲಿ ಸೋಮವಾರ ನಡೆದ 'ಸಿಪಿಎಂ ಪರ್ಯಾಯ ರಾಜಕಾರಣ ಸಮಾವೇಶ'ದಲ್ಲಿ ಮಾತನಾಡಿದರು. ನಮಗೆ ವ್ಯಕ್ತಿಗಳು ಮುಖ್ಯವಲ್ಲ, ಹಣಕಾಸು ನೀತಿ ಮುಖ್ಯ. ಕಾಂಗ್ರೆಸ್ ಮತ್ತು ಬಿಜೆಪಿ ಅನುಸರಿಸುತ್ತಿರುವ ನೀತಿಗಳು ರೈತ, ಕಾರ್ಮಿಕ ಮತ್ತು ಬಡ ಮಧ್ಯಮ ವರ್ಗಾದವರ ವಿರುದ್ಧವಾಗಿದೆ. ಅವುಗಳು ಕಾರ್ಪೊರೇಟ್ ಉದ್ಯಮಿಗಳ ಹಿತ ಕಾಪಾಡುವುದರಲ್ಲಿ ಮುಳುಗಿದೆ. ಈ ಸಂದರ್ಭ ಸಿಪಿಎಂ ಪರ್ಯಾಯ ಶಕ್ತಿಯಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಡಪಕ್ಷಗಳನ್ನು ಬೆಂಬಲಿಸುವಂತೆ ಜನರಿಗೆ ಮನದಟ್ಟು ಮಾಡಬೇಕು ಎಂದರು.
ದಶಕಗಳ ಹಿಂದೆಯೇ ಮಂಗಳೂರು ಬೀಡಿ ಕಾರ್ಮಿಕರ ಚಳವಳಿ ಕೇಂದ್ರವಾಗಿತ್ತು. ಕೇರಳದ ಕಮ್ಯೂನಿಷ್ಟ್ ಚಳವಳಿಯೂ ಇಲ್ಲಿಂದ ಸ್ಫೂರ್ತಿ ಪಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಎಡಪಕ್ಷಗಳು ಪ್ರತಿಪಾದಿಸುವ ಪರ್ಯಾಯ ನೀತಿಗಳನ್ನು ಜನರಿಗೆ ಮುಟ್ಟಿಸಬೇಕಾಗಿದೆ. ಕಾಂಗ್ರೆಸ್ ಸರ್ಕಾರ 66 ವರ್ಷಗಳಲ್ಲಿ ಹೆಚ್ಚಿ ಕಾಲ ಆಡಳಿತದಲ್ಲಿದ್ದು, ಆಹಾರ ಭದ್ರತೆ ಕಾನೂನನ್ನು ಇತ್ತೀಚೆಗಷ್ಟೇ ಜಾರಿಗೊಳಿಸಲು ಶಕ್ತವಾಗಿದೆ. ಈ ಕಾಯಿದೆಯಲ್ಲಿ ಶೇ.77 ಮಂದಿಗೆ ಮಾತ್ರ ಆಹಾರ ಭದ್ರತೆ ದೊರೆಯಲಿದೆ ಎಂದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡಿ, ಸೌಜನ್ಯ ಕೊಲೆ ಪ್ರಕರಣದಲ್ಲಿ ಮೌನ ವಹಿಸಿರುವ ಕಾಂಗ್ರೆಸ್, ಬಿಜೆಪಿ ತಾವು ಯಾರ ಪರ ಎಂಬುದನ್ನು ಸ್ಪಷ್ಟ ಪಡಿಸಿವೆ. ಸೌಜನ್ಯ ಪ್ರಕರಣವನ್ನು ಚಳವಳಿ ರೀತಿಯಲ್ಲಿ ಸಿಪಿಎಂ ಮುನ್ನಡೆಸುತ್ತಿದೆ ಎಂದರು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೃಷ್ಣಪ್ಪ ಕೊಂಚಾಡಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಶಂಕರ ಮಾಸ್ಟರ್, ಕೆ.ಆರ್.ಜಯಾನಂದ, ನಗರ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಇದ್ದರು. ದಯಾನಂದ ಶೆಟ್ಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

