ದಕ್ಷಿಣ ಕನ್ನಡ

ನಂಬಿಕೆ ಸಮ್ಮೇಳನ: 500 ಭಗಿನಿಯರು 150 ಧರ್ಮಗುರುಗಳು ಭಾಗಿ

Published On :

ಮಂಗಳೂರು: ಎರಡನೇ ವ್ಯಾಟಿಕನ್ ಆರಂಭದ ಸುವರ್ಣ ಮಹೋತ್ಸವ ಅಂಗವಾಗಿ ಇಲ್ಲಿನ ರೋಸಾರಿಯೋ ಕ್ಯಾತೆಡ್ರಾಲ್ ಚರ್ಚ್ ಹಾಲ್ನಲ್ಲಿ ಸೋಮವಾರ 500ಕ್ಕೂ ಹೆಚ್ಚು ಧರ್ಮ ಭಗಿನಿಯರು, 150ಕ್ಕೂ ಹೆಚ್ಚು ಧರ್ಮಗುರುಗಳ ಸಮಾವೇಶ ನಡೆಯಿತು.
ಜೀವನದಲ್ಲಿ ನಂಬಿಕೆಯೇ ಅಂತಿಮ ಮತ್ತು ಆದ್ಯತೆ ಆಗಿರಬೇಕು. ನಂಬಿಕೆಯಿಂದ ಬದುಕು ಉತ್ಸಾಹಭರಿತವಾಗಿರುತ್ತದೆ ಎಂದು ಸಮ್ಮೇಳನದ ನೇತೃತ್ವ ವಹಿಸಿದ ಪುಣೆ ಬಿಷಪ್ ಡಾ.ಥೋಮಸ್ ದಬ್ರೆ ಹೇಳಿದರು.
ನಮ್ಮಲ್ಲಿ ದೇವರ ಕುರಿತು ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಲು ಸಣ್ಣ ಕ್ರೈಸ್ತ ಸಮುದಾಯಗಳಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸಬೇಕೆಂದರು.
ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಮಾತನಾಡಿ, ಬೇರೆಯವರಿಗೆ ನಂಬಿಕೆ ಬಗ್ಗೆ ಉಪದೇಶ ನೀಡುವ ಮೊದಲು ನಂಬಿಕೆಯ ಅನುಭವ ನಾವು ಮಾಡಿಕೊಳ್ಳಬೇಕು. ಇದಕ್ಕಾಗಿಯೇ ಧರ್ಮಗುರುಗಳಿಗಾಗಿ ವಿಶೇಷ ಸಮ್ಮೇಳನ ಆಯೋಜಿಸಿದೆವು ಎಂದರು.
ಯುವ ಸಮ್ಮೇಳನ:  ಯುವ ಸಮ್ಮೇಳನ ನ.17ರಂದು ಮಿಲಾಗ್ರಿಸ್ ಚರ್ಚ್ ಕ್ಯಾತೆಡ್ರಾಲ್ನಲ್ಲಿ ನಡೆಸಲು ನಿರ್ಧರಿಸಲಾಯಿತು. ವರ್ಷದ ಬೃಹತ್ ಸಮ್ಮೇಳನ ನ.22ರಿಂದ 24ರವರೆಗೆ ನೆಹರು ಮೈದಾನದಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.