ಮತಾಂಧ ದಾಳಿಕೋರರ ಬಂಧನಕ್ಕೆ ಆಗ್ರಹಿಸಿ ಠಾಣೆ ಮುಂದೆ ಪ್ರತಿಭಟನೆ
ಮಂಗಳೂರು: ಮನೆಗೆ ಹೊಕ್ಕು ಮಹಿಳೆಯರು, ಮಕ್ಕಳು, ವೃದ್ಧರ ಮೇಲೆ ಹಲ್ಲೆ ನಡೆಸಿದ 50ಕ್ಕೂ ಹೆಚ್ಚು ಮತಾಂಧ ದುಷ್ಕರ್ಮಿಗಳ ಬಂಧನ ವಿಳಂಬಿಸುತ್ತಿರುವ ಪೊಲೀಸ್ ವಿರುದ್ಧ ಹಿಂದೂ ಸಂರಕ್ಷಣೆ ಸಮಿತಿ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದೆ. ಇತ್ತೀಚೆಗೆ ಮುಸ್ಲಿಂ ಮತಾಂಧರು ಬೊಂಡಂತಿಲ ಗ್ರಾಮದ ಬಾರ್ ಒಳ ಹೊಕ್ಕು ಐವರ ಮೇಲೆ ಹಲ್ಲೆ ನಡೆಸಿದ್ದರು. ಬಾರ್ ಪುಡಿಗೈದು ಪರಾರಿಯಾಗಿದ್ದರು. ಈವರೆಗೆ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಇನ್ನೂ 20 ಮಂದಿ ತಲೆಮರೆಸಿಕೊಂಡಿದ್ದಾರೆ. 'ಪೊಲೀಸರೆ ನೀವು ನಿಮ್ಮ ಕರ್ತವ್ಯ ನಿರ್ವಹಿಸದೇ ಇದ್ದಲ್ಲಿ, ನಾವು ದುಷ್ಕರ್ಮಿಗಳನ್ನು ಹಿಡಿದು ನೀಡುತ್ತೇವೆ' ಎಂದು ಸಮಿತಿ ಮುಖಂಡ ಹರೀಶ್ ಎಚ್ಚರಿಕೆ ನೀಡಿದರು. ರಾಜಕೀಯ ಶಕ್ತಿಗಳು ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಈ ಹಿಂದೆ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸಲು 3 ದಿನ ಗಡುವು ನೀಡಿದ್ದೆವು. ಆದರೆ 10 ದಿನಗಳಾದರೂ ಯಾವೊಬ್ಬ ಆರೋಪಿಯನ್ನು ಬಂಧಿಸಿಲ್ಲ. 5 ದಿನಗಳ ಒಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ನೀರುಮಾರ್ಗಕ್ಕೆ ಸೀಮಿತವಾಗಿರುವ ಪ್ರತಿಭಟನೆಯನ್ನು ಜಿಲ್ಲಾ ಮಟ್ಟಕ್ಕೆ ಒಯ್ಯಲಿದ್ದೇವೆ ಎಂದು ಹಿಂದು ಸಂರಕ್ಷಣೆ ಸಮಿತಿ ಪೊಲೀಸ್ ಕಮಿಷನರ್ಗೆ ಮನವಿ ಸಲ್ಲಿಸಿದೆ. ಬಜರಂಗದಳ ವಿಭಾಗ ಸಂಚಾಲಕ ಶರಣ್ ಪಂಪ್ವೆಲ್, ಪುನೀತ್ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

