ಪಡುಬಿದ್ರಿ: ಮದರಂಗಿ ಕಾರ್ಯಕ್ರಮಕ್ಕೆ ಬಂದ ಯುವಕ ಶವವಾಗಿ ಪತ್ತೆ
ಪಡುಬಿದ್ರಿ: ಮದರಂಗಿ ಕಾರ್ಯಕ್ರಮಕ್ಕೆ ಗೆಳೆಯರೊಂದಿಗೆ ಬಂದಿದ್ದ ಯುವಕನೋರ್ವ ಅದಮಾರು ರೇಲ್ವೆ ಟ್ರಾಕ್ ಸಮೀಪ ಪೊದೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಪಡುಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಪಡುಬಿದ್ರಿ ಕಣಪು ಕೋಟಿ ನಿವಾಸಿ ಸಿದ್ದಾರ್ಥ (27) ಮೃತ ಯುವಕ. ತಡರಾತ್ರಿ ಸಂಚರಿಸುವ ರೈಲು ಡಿಕ್ಕಿಯಾಗಿ ಸಾವನ್ನಪ್ಪಿರಬೇಕು ಎಂದು ಶಂಕಿಸಲಾಗಿದೆ.
ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ ಅವರು ಅದಮಾರು ಮೂಡಬೆಟ್ಟು ರೇಲ್ವೆ ಟ್ರ್ಯಾಕ್ ಸಮೀಪದ ಗೆಳೆಯನ ಸಂಬಂಧಿ ಮನೆಯಲ್ಲಿ ಶನಿವಾರ ಮದರಂಗಿ ಕಾರ್ಯಕ್ರಮಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ. ಮದರಂಗಿ ಕಾರ್ಯಕ್ರಮದಲ್ಲಿ ವಿಪರೀತವಾಗಿ ಕುಡಿದಿದ್ದು ಗೆಳೆಯರೊಡನೆ 'ತಾನು ಬರುವುದಿಲ್ಲ, ನೀವು ಮುಂದೆ ಹೋಗಿ' ಎಂದು ಹೇಳಿದ್ದ ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿದ್ದ ಸಿದ್ದಾರ್ಥ ಅವರಿಗೆ ತಡರಾತ್ರಿ ರೈಲು ಡಿಕ್ಕಿ ಹೊಡೆದು ಸಮೀಪದ ಪೊದೆಗೆ ಎಸೆಯಲ್ಪಟ್ಟು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸ್ನೇಹಿತರೊಂದಿಗೆ ತಾನು ತಡವಾಗಿ ಹಿಂತಿರುಗುವುದಾಗಿ ಹೇಳಿದ್ದ ಸಿದ್ದಾರ್ಥ ಭಾನುವಾರವೂ ಕಂಡುಬಾರದೆ ಇದ್ದುದರಿಂದ ಸ್ನೇಹಿತರು ಹುಡುಕಾಟದಲ್ಲಿ ತೊಡಗಿದರು. ಸಿದ್ದಾರ್ಥ ಮದರಂಗಿ ಸಂಭ್ರಮ ನಡೆದ ಮನೆಯ ಪಕ್ಕದಲ್ಲೇ ಶವವಾಗಿ ಪತ್ತೆಯಾಗಿದ್ದ. ಪಡುಬಿದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.
ಬೈಕ್-ಕಾರು ಡಿಕ್ಕಿ: ಸವಾರ ಸಾವು
ಬ್ರಹ್ಮಾವರ: ಬೈಕ್ ಮತ್ತು ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ಇಲ್ಲಿನ ಉಪ್ಪೂರು ಗ್ರಾಮದ ಅಮ್ಮುಂಜೆ ಎಂಬಲ್ಲಿ ಶನಿವಾರ ನಡೆದಿದೆ. ಗಾಯಾಳುವನ್ನು ವಿಜಯ ಪೂಜಾರಿ ಎಂದು ಗುರುತಿಸಲಾಗಿದೆ. ಇವರು ತಮ್ಮ ಬೈಕಿನಲ್ಲಿ ಅಮ್ಮುಂಜೆ ಕಡೆಗೆ ಹೋಗುತ್ತಿರುವಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

