ದಕ್ಷಿಣ ಕನ್ನಡ

ಚುನಾವಣೆ ಪೂರ್ವ ಸಿದ್ಧತೆಗೆ ಹರ್ಷ ಮೊಯ್ಲಿ ನೇತೃತ್ವ

Published On :

ಮಂಗಳೂರು:  ಕರಾವಳಿ ಜಿಲ್ಲೆಗಳಲ್ಲಿ ಲೋಕಸಭೆ ಸ್ಥಾನಕ್ಕೆ ಕಾಂಗ್ರೆಸ್ ಚುನಾವಣೆ ಪೂರ್ವ ಸಿದ್ಧತೆ ಹರ್ಷ ಮೊಯ್ಲಿ ನೇತೃತ್ವದಲ್ಲಿ ಭರದಿಂದ ಸಾಗಿದೆ.
 ಎಐಸಿಸಿ ಸೂಚನೆ ಮೇರೆಗೆ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ಮತದಾರ ಸಂಪರ್ಕ ಸಂವಹನ ಯೋಜನೆ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಕಾರ್ಯತಂತ್ರ ನೇತೃತ್ವ ವಹಿಸಿಕೊಂಡಿದ್ದಾರೆ.
 ಹೊಸ ಮತದಾರ ನೋಂದಣಿ, ಬಹುಮಾಧ್ಯಮಗಳ ಮೂಲಕ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಮತ್ತು ಪ್ರತಿಪಕ್ಷಗಳ ಅಪಪ್ರಚಾರ ಎದುರಿಸಲು ಬೇಕಾದ ಕಾರ್ಯತಂತ್ರ ರೂಪಿಸುವುದು ಮುಖ್ಯ ಉದ್ದೇಶವಾಗಿದೆ.
ಮಂಗಳೂರು, ಮೂಡುಬಿದರೆ ಪ್ರದೇಶದ ನಾಲ್ಕು ವಿಧಾನಸಭೆ ಕ್ಷೇತ್ರದ ಬ್ಲಾಕ್ ಪ್ರತಿನಿಧಿಗಳ ಕಾರ್ಯಾಗಾರ ಮಂಗಳೂರು ನಗರದಲ್ಲಿ ನಡೆಸಲಾಯಿತು. ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಮತ್ತು ಪುತ್ತೂರು ವಿಧಾನಸಭೆ ಕ್ಷೇತ್ರಗಳ ಬ್ಲಾಕ್ ಮಟ್ಟದ ಕಾರ್ಯಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧ್ಯಕ್ಷ ರಮಾನಾಥ ರೈ ಬಂಟ್ವಾಳದಲ್ಲಿ ಚಾಲನೆ ನೀಡಿದರು.
ಹಿರಿಯ ತರಬೇತುದಾರ ಮತ್ತು ಮಾಧ್ಯಮ ತಜ್ಞ ಮೋಹನ್ ಚಂದ್ರ ಅವರ ತಂಡ ಕಾರ್ಯಾಗಾರ ನಿರ್ವಹಿಸಿತು. ಫೇಸ್‌ಬುಕ್, ಟ್ವೀಟರ್ ಬ್ಲಾಗ್‌ಗಳ ಮೊದಲಾದ ಅಂತರ್ಜಾಲ ಸಾಮಾಜಿಕ ತಾಣಗಳ ಮೂಲಕ ಮತದಾರರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಯುವಕರ ತಂಡ ತರಬೇತಿ ನೀಡುವುದೇ ಮುಖ್ಯ ಗುರಿಯಾಗಿದೆ. ಸತತ ಸೋಲು ಕಾಣುತ್ತಿರುವ ಲೋಕಸಭೆ ಕ್ಷೇತ್ರಗಳಲ್ಲಿ ಈ ಬಾರಿ ಗೆಲವು ಸಾಧಿಸಲು ಬೇಕಾದ ಕಾರ್ಯತಂತ್ರಗಳನ್ನು ಬೂತ್ ಮಟ್ಟ ಕಾರ್ಯಕರ್ತರೊಂದಿಗೆ ಚರ್ಚಿಸಿ ಕೈಗೊಳ್ಳಲಾಗುವುದು ಎಂದರು.
 ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಕಾಂಗ್ರೆಸ್ ಮುಖಂಡ ಐವನ್ ಡಿಸೋಜ, ಪ್ರಕಾಶ್ ತುಂಬೆ, ಅಬ್ಬಾಸ್ ಅಲಿ, ಭರತ್ ಮುಂಡೋಡಿ, ದುರ್ಗಾಪ್ರಸಾದ್, ದಿನೇಶ್ ರಾವ್, ತೇಜೋಮಯ ಬಿ.ಎಚ್.ಖಾದರ್, ಸುಭೋದ್ ಆಳ್ವ ಭಾಗವಹಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.