ದಕ್ಷಿಣ ಕನ್ನಡ

ಇಂದು ಕೊಂಕಣ ಮಾರ್ಗದಲ್ಲಿ ಎರ್ನಾಕುಲಂ- ಮುಂಬೈ ರೈಲು

Published On :

ಮಂಗಳೂರು: ಜನದಟ್ಟಣೆ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಎರ್ನಾಕುಲಂ-ಲೋಕಮಾನ್ಯ ತಿಲಕ್ ಟರ್ಮಿನ್ಸ್ ಮಧ್ಯೆ ವಿಶೇಷ ರೈಲು ಸಂಚಾರವನ್ನು ನ.17ರಂದು ಏರ್ಪಡಿಸಿದೆ.
ಈ ವಿಶೇಷ ರೈಲು ನ.17ರಂದು ಮಧ್ಯಾಹ್ನ 1.55ಕ್ಕೆ ಎರ್ನಾಕುಲಂ ಜಂಕ್ಷನ್‌ನಿಂದ ಹೊರಟು ಲೋಕಮಾನ್ಯ ಟರ್ಮಿನ್ಸ್‌ಗೆ ನ.18ರಂದು ಸಂಜೆ 4ಕ್ಕೆ ತಲುಪಲಿದೆ. ಈ ರೈಲು ಎಸ್ 2- ಟೈರ್, ಎಸ್ 3-ಟೈರ್, 13 ಸ್ಲೀಪರ್ ಕ್ಲಾಸ್, 6 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ಗಳಿವೆ. ಈ ರೈಲಿಗೆ ಅಲುವಾ, ತ್ರಿಶೂರ್, ಶೋರ್ನೂರ್, ಕುಟ್ಟಿಪುರಂ, ತಿರೂರ್, ಕೋಯಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರು, ಕಾಞಂಗಾಡ್, ಕಾಸರಗೋಡು, ಮಂಗಳೂರು ಜಂಕ್ಷನ್, ಉಡುಪಿ, ಕಾರವಾರ, ಮಡ್ಗಾಂವ್, ಥಿವಿಮ್, ಕಂಕವಾಲಿ, ರತ್ನಗಿರಿ, ಚಿಪ್ಲೂನ್, ರೋಹಾ, ಥಾಣೆಯಲ್ಲಿ ನಿಲುಗಡೆ ಕಲ್ಪಿಸಲಾಗಿದೆ ಎಂದು ಫಾಲ್ಘಾಟ್ ರೇಲ್ವೆ ವಿಭಾಗ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.