ದಕ್ಷಿಣ ಕನ್ನಡ

ಅಂಕಪಟ್ಟಿಯಲ್ಲಿ ವಿವಿ ತಪ್ಪು ಮಾಡಿದ್ದರೆ ಉಚಿತವಾಗಿ ಸರಿಪಡಿಸುತ್ತೇವೆ: ಕುಲಪತಿ

Published On :

ಮಂಗಳೂರು: ಮಂಗಳೂರು ವಿವಿ ಅಂತಿಮ ವರ್ಷದ ವಿದ್ಯಾರ್ಥಿಗಳ 5 ನೇ ಸೆಮಿಸ್ಟರ್ ಅಂಕಗಳನ್ನು ಕಡಿಮೆಗೊಳಿಸಿ ನಮೂದಿಸಲಾಗಿದೆ. ಶುಲ್ಕ ಇಲ್ಲದೆ ಸರಿ ಪಡಿಸಿಕೊಡಿ ಎಂಬ ವಿದ್ಯಾರ್ಥಿಗಳ ದೂರಿಗೆ ವಿವಿ ಕುಲಪತಿ ಸ್ಪಂದಿಸಿದ್ದಾರೆ.
 ಈ ಬಗ್ಗೆ ಕನ್ನಡಪ್ರಭ ವಿಶ್ವ ವಿದ್ಯಾಲಯ ಕುಲಪತಿ ಟಿ.ಸಿ. ಶಿವಶಂಕರಮೂರ್ತಿ ಅವರನ್ನು ಸಂಪರ್ಕಿಸಿದಾಗ 'ಒಂದು ವೇಳೆ ಮಂಗಳೂರು ವಿಶ್ವ ವಿದ್ಯಾಲಯ ಕಡೆಯಿಂದಲೇ ಅಂಕಪಟ್ಟಿಯಲ್ಲಿ ಅಂಕ ನಮೂದಿಸುವಾಗ ತಪ್ಪಾಗಿದ್ದರೆ, ಅದನ್ನು ಉಚಿತವಾಗಿ ಸರಿ ಮಾಡಿಕೊಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ನೀಡಿ 6 ತಿಂಗಳ ಒಳಗೆ ಯಾರದೇ ತಪ್ಪಿನಿಂದ ವ್ಯತ್ಯಾಸವಾಗಿದ್ದರೂ ಉಚಿತವಾಗಿಯೇ ಮಾಡಿಕೊಡುತ್ತೇವೆ, 6 ತಿಂಗಳ ಬಳಿಕ ಶುಲ್ಕ ವಿಧಿಸುವುದು ವಿವಿ ನಿಯಮ. ಆದರೆ ವಿವಿಯಿಂದ ತಪ್ಪಾಗಿದ್ದರೆ ಅವರಿಗೆ ಉಚಿತವಾಗಿ ಅಂಕಪಟ್ಟಿ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.
 ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವಲ್ಲಿ ವಿದ್ಯಾರ್ಥಿಗಳಿಗೆ ಸ್ವಲ್ಪ ಅಂಕಗಳು ಕಡಿಮೆಯಾದರೆ ವಿಪರೀತ ಪರಿಣಾಮ ಬೀರುತ್ತದೆ. ವಿಶ್ವ ವಿದ್ಯಾಲಯವನ್ನು ಸಂಪರ್ಕಿಸಿದ ವಿದ್ಯಾರ್ಥಿಗಳಿಗೆ ಮೂಲ ಅಂಕಪಟ್ಟಿ ಸಹಿತ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ ಎಂದು ಹೇಳಿದ್ದಾರೆ. ಸುಮಾರು 3 ಸಾವಿರ ಮಿಕ್ಕಿ ವಿಜ್ಞಾನ ಪದವೀಧರ ದೋಷ ಪೂರಿತ ಅಂಕ ಪಟ್ಟಿ ಪಡೆದು ಮುಂದಿನ ವ್ಯಾಸಂಗದ ಹಾದಿಯಲ್ಲಿದ್ದಾರೆ.
ವಿದ್ಯಾರ್ಥಿ ಹೊಣೆ: ಅಂಕಪಟ್ಟಿ ಪಡೆಯುವಾಗ ಸರಿ ಇದೆಯೋ ಇಲ್ಲವೊ ಎಂಬುದನ್ನು ಆಯಾ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು ನೋಡಿಕೊಳ್ಳುವ ಹೊಣೆ ಇದೆ. ಇದಾಗಿಯೂ ಅಂಕಪಟ್ಟಿ ಕೊಟ್ಟ 6 ತಿಂಗಳ ಒಳಗೆ ಉಚಿತವಾಗಿಯೇ ಸರಿಪಡಿಸಿ ನೀಡುತ್ತೇವೆ. ಬಹುಷಃ ಈ ಪ್ರಕರಣದಲ್ಲಿ 6 ತಿಂಗಳು ಕಳೆದಿರಬೇಕು ಎಂದು ಕುಲಸಚಿವ ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.