ದಕ್ಷಿಣ ಕನ್ನಡ

ಭೂ ದಾಖಲೆ ಮಾಡಲು ಕಂದಾಯ ಇಲಾಖೆ ಅವ್ಯವಸ್ಥೆ ಅಡ್ಡಿ: ಧರ್ಮೇಂದ್ರ

Published On :

ಮಂಗಳೂರು: ಕಂದಾಯ ಇಲಾಖೆಯ ಅವ್ಯವಸ್ಥೆಯಿಂದ ಜನ ಸಾಮಾನ್ಯರು ತಮ್ಮ ಮನೆಯ ಆರ್‌ಟಿಸಿ ಮುಂತಾದ ದಾಖಲೆ ಮಾಡಲು, ಪಡೆದುಕೊಳ್ಳಲು ಹರಸಾಹಸ ಪಡುವಂತಾಗಿದೆ ಎಂದು ಪ್ರಜಾ ವಿಕಾಸ ಸೇವಾ ಟ್ರಸ್ಟ್ ಅಧ್ಯಕ್ಷ ಧಮೇಂದ್ರ ಹೇಳಿದ್ದಾರೆ. ಭಾನುವಾರ ಡಾನ್‌ಬಾಸ್ಕೋ ಸಭಾಂಗಣದಲ್ಲಿ ನಡೆದ ಭೂಮಿ ನಿವೇಶನ ಕುರಿತ ಸಮಸ್ಯೆಗಳ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು. ಇಂದಿನ ವಕೀಲರ, ಏಜೆಂಟರು, ಅಧಿಕಾರಿಗಳ ಲಾಬಿಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ಸರ್ಕಾರಿ ಕಚೇರಿಯಿಂದ ನಿವೇಶನ ಖಾತೆ ಪಡೆಯಲು ಕಷ್ಟವಾಗಿದೆ. ಸಂವಿಧಾನದಲ್ಲಿ ಜನ ಸಾಮಾನ್ಯರಿಗೂ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು ಎಂಬ ನಿಯಮವಿದೆ. ಇದರಲ್ಲಿ ವಸತಿ ಯೋಜನೆ ಕೂಡ ಒಂದಾಗಿದೆ. ಸರ್ಕಾರ ಖಾಸಗಿಯಿಂದ ಜಮೀನು ಖರೀದಿಸಲು ಮುಂದಾದರೂ ಪ್ರಭಾವಿ ರಾಜಕೀಯ ವ್ಯಕ್ತಿಗಳು ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅದರಲ್ಲಿ ಅಪಾರ್ಟ್‌ಮೆಂಟ್‌ಗಳು ಕಟ್ಟುತ್ತಿರುವ ಬಗ್ಗೆ ಮಾಹಿತಿ ಇದೆ. ಇಂದಿನ ಸನ್ನಿವೇಶದಲ್ಲಿ ಪ್ರಬಲ ಹೋರಾಟದಿಂದಲೇ ತಮ್ಮ ಹಕ್ಕನ್ನು ಪಡೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.