ವಿದೇಶದಲ್ಲಿ ಚಿತ್ರೀಕರಿಸಿದ ತುಳುಚಿತ್ರ 'ನಿರೆಲ್' ನವೆಂಬರ್ನಲ್ಲಿ ತೆರೆಗೆ
ಮಂಗಳೂರು: ಪ್ರಥಮ ಬಾರಿಗೆ ವಿದೇಶದಲ್ಲೇ ಪೂರ್ತಿ ಚಿತ್ರೀಕರಣಗೊಂಡ ತುಳು ಚಲನಚಿತ್ರ 'ನಿರೆಲ್' (ನೆರಳು) ನವೆಂಬರ್ ಕೊನೆಗೆ ತೆರೆ ಕಾರಣಲಿದೆ ಎಂದು ನಿರ್ಮಾಪಕ ಶೋಧನ ಪ್ರಸಾದ್ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಿಸಲಾಗಿದೆ. ನವೆಂಬರ್ ಕೊನೆಗೆ ಗಲ್ಫ್ ರಾಷ್ಟ್ರದಲ್ಲಿ, ಜನವರಿಗೆ ಮಂಗಳೂರು, ಬೆಂಗಳೂರು, ಮುಂಬೈಗಳಲ್ಲಿ ಚಿತ್ರ ತೆರೆ ಕಾಣಲಿದೆ. ಸುಮಾರು 2.15 ಗಂಟೆ ಅವಧಿಯ ಸಿನಿಮಾ ಇದಾಗಿದೆ ಎಂದರು. ಈ ಚಿತ್ರವನ್ನು ಸಂಪೂರ್ಣವಾಗಿ ದುಬೈ, ಅಬುಧಾಬಿ ಮತ್ತು ಇನ್ನಿತರ ದೇಶಗಳಲ್ಲಿ ಚಿತ್ರೀಕರಿಸಿದ್ದು, ವಿದೇಶದಲ್ಲೇ ತಯಾರಾದ ಪ್ರಥಮ ತುಳು ಚಿತ್ರವಾಗಿದೆ. ಚಿತ್ರದಲ್ಲಿರುವವರು ದುಬೈನಲ್ಲಿ ಬೇರೆ ಬೇರೆ ಕೆಲಸಗಳಲ್ಲಿದ್ದರೂ ಶುಕ್ರವಾರದ ತಮ್ಮ ರಜೆಯನ್ನು ಸಂಪೂರ್ಣ ಚಿತ್ರಕ್ಕೆ ಮುಡಿಪಾಗಿಟ್ಟಿದ್ದಾರೆ. ಕಳೆದ 11 ತಿಂಗಳಿಂದ ಚಿತ್ರೀಕರಣ ನಡೆಸಿ ಮುಕ್ತಾಯಗೊಳಿಸಲಾಗಿದೆ. ಈಗ ಸಂಕಲನ ಹಂತದಲ್ಲಿದ್ದು, ಧ್ವನಿಮುದ್ರಣ ಮಾಡಿ ಚಿತ್ರವನ್ನು ತೆರೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕನ್ನಡದ ಪ್ರಸಿದ್ಧ ನಟ ರಮೇಶ್ ಅರವಿಂದ್ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬೆಂಗಳೂರಿನ ಸಾಪ್ಟ್ವೇರ್ ಉದ್ಯೋಗಿ ಕಾರ್ತಿಕ್ ಗೌಡ 'ನಿರೆಲ್' ಚಿತ್ರದ ಮೂಲಕಥೆ ಬರೆದಿದ್ದು, ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಚಿತ್ರಕ್ಕೆ ಹಾಸ್ಯ ಸನ್ನಿವೇಶಗಳನ್ನು ಮತ್ತು ದುಬೈನಲ್ಲಿ ಚಿತ್ರಿಕರಿಸಲು ಬೇಕಾದ ಕೆಲವು ಬದಲಾವಣೆಗಳನ್ನು ಚಿತ್ರ ನಿರ್ದೇಶಕ ರಂಜಿತ್ ಬಜ್ಪೆ ಮಾಡಿದ್ದಾರೆ. ಚಿತ್ರವನ್ನು ಸಂಪೂರ್ಣ ಕಾನನ್ 5ಡಿ ಮೂಲಕ ಚಿತ್ರೀಕರಿಸಲಾಗಿದ್ದು, ಮಣಿ ಕೂಕಲ್ ಛಾಯಾಗ್ರಹಣ ಮಾಡಿದ್ದಾರೆ. ಕಲಾ ನಿರ್ದೇಶಕರಾಗಿ ರಜನೀಶ್ ಅಮೀನ್, ಸಹಾಯಕ ನಿರ್ದೇಶಕರಾಗಿ ಸಚಿನ್ ಪಡೀಲ್, ಬೆಂಗಳೂರಿನ ಸಾಪ್ಟ್ವೇರ್ ಉದ್ಯೋಗಿ ಅಭಿಷೇಕ್ ಸಂಗೀತ ನಿರ್ದೇಶಕರು. ಚಿತ್ರದಲ್ಲಿ 6 ಹಾಡುಗಳಿದ್ದು, ಲೋಕು ಕುಡ್ಲ ಮತ್ತು ರಜನೀಶ್ ಸಾಹಿತ್ಯ ಬರೆದಿದ್ದಾರೆ. ಅಕ್ಷತ ರಾವ್, ಪ್ರಮೋದ್ ಕುಮಾರ್, ಶಿವ್ ಕುಮಾರ್, ಶಿಲ್ಪಾ ಮಧುಸೂಧನ್, ಅಭಿಷೇಕ್ ಹಾಡಿದ್ದು, ಸೀತಾರಾಂ ಕುಲಾಲ್ ಬರೆದ ಮೋಕೆದ ಸಿಂಗಾರಿ ಹಾಡನ್ನು ಮರು ಸಂಗೀತ ನೀಡಿ ಚಿತ್ರಕ್ಕೆ ಸೇರ್ಪಡೆಗೊಳಿಸಲಾಗಿದೆ. ಸ್ವಪ್ನಿಲ್ ದಿಗ್ದೆ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರದ ನಾಯಕ ಅನೂಪ್ ಸಾಗರ್, ನಾಯಕಿ ವರುಣಾ ಶೆಟ್ಟಿ, ದೀಪ್ತಿ, ಹಾಸ್ಯ ನಟರಾಗಿ ದೀಪಕ್ ಪಾಲಡ್ಕ, ಸುಭಾಸ್ ಸಾಲ್ಯಾನ್, ಜಮೀಲ್ ಅಹ್ಮದ್, ಕ್ಲಾಡಿ, ರಾಜೇಂದ್ರ ಪೈ, ಸಂತೋಷ್ ಪೂಜಾರಿ, ಶಶಿ ಶೆಟ್ಟಿ, ನಿತ್ಯಾನಂದ, ಸಚಿನ್ ಪಡೀಲ್, ಆನಂದ್ ಸಾಲ್ಯಾನ್, ಸಂಧ್ಯಾ ಪ್ರಸಾದ್, ವೀರ, ವಿಶ್ವಪತಿ ಭಟ್, ಡೋನಿ, ನಿಂದಿಯಾ, ಅಶೋಕ್ ಪಾಲನ್, ವಿದ್ಯಾ ತಾರಾಣಗಣದಲ್ಲಿ ಇದ್ದಾರೆ.
ನಾಳೆ ಆಡಿಯೋ ಬಿಡುಗಡೆ: 'ನಿರೆಲ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಅ.14ರಂದು ರಾತ್ರಿ 8.30ಕ್ಕೆ ನಗರದ ಸೈಬಿನ್ ಕಾಂಪ್ಲೆಕ್ ಎದುರಿನಲ್ಲಿ ನಡೆಯಲಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

