ದಕ್ಷಿಣ ಕನ್ನಡ

ಎಷ್ಟೊಂದು ಸುಂದರ ಮಂಗಳೂರು ದಸರಾ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು

Published On :

ಮಂಗಳೂರು: ದುಷ್ಟ ಶಕ್ತಿಗಳ ವಿರುದ್ಧ ಗೆಲವು ಸಾಧಿಸಿದ ಸಾಂಕೇತಿಕ ದಿನವಾದ ವಿಜಯದಶಮಿಯಂದು ನಗರದಲ್ಲಿ ಶಾರದೆಯನ್ನು ಮೆರವಣಿಗೆಯಲ್ಲಿ ಕರೆದೊಯ್ದು ವಿಸರ್ಜಿಸಲಾಯಿತು.
 ಕುದ್ರೋಳಿ ಗೋಕರ್ಣನಾಥೇಶ್ವರ, ಮಂಗಳಾದೇವಿ ಸಹಿತ ಪುಣ್ಯಕ್ಷೇತ್ರಗಳಲ್ಲಿ ಶಾರದೆ ವಿಸರ್ಜನೆ ಉತ್ಸವ ಸಂಪನ್ನಗೊಂಡಿತು. ಕುದ್ರೋಳಿ ಕ್ಷೇತ್ರದಲ್ಲಿ ಸ್ಥಾಪಿಸಲಾಗಿದ್ದ ಶಾರದೆ, ಗಣೇಶ ಮತ್ತು ನವದುರ್ಗೆಯರನ್ನು ಸೋಮವಾರ ಸಂಜೆ ಮಂಟಪದಿಂದ ಹೊರತರುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿದ್ಯುದೀಪಗಳಿಂದ ಅಲಂಕೃತವಾದ ರಾಜರಸ್ತೆಯಲ್ಲಿ ಮೆರವಣಿಗೆ ಸಾಗಿದ್ದು, ಸಹಸ್ರಾರು ಭಕ್ತರು ಮೆರವಣಿಗೆ ಸಾಕ್ಷಿಯಾದರು.
 ಭಾರತೀಯ ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು, ಯಕ್ಷಗಾನ ವೇಷಧಾರಿಗಳು, ಹುಲಿ ವೇಷಧಾರಿಗಳು, ಬೊಂಬೆಗಳು, ವಾದ್ಯ ಘೋಷಗಳು ಮೆರವಣಿಗೆಗೆ ಕಳೆ ನೀಡಿದವು. ರಾತ್ರಿ ಇಡೀ ನಗರದಲ್ಲಿ ಸಂಚರಿಸಿದ ಬಳಿಕ ಮಂಗಳವಾರ ಬೆಳಗ್ಗಿನ ಜಾವ ಕುದ್ರೋಳಿ ಕ್ಷೇತ್ರದ ಕೆರೆಯಲ್ಲಿ ಮೂರ್ತಿಗಳನ್ನು ಜಲಸ್ತಂಬನಗೊಳಿಸಲಾಯಿತು.
ಠಾಣೆಯಲ್ಲಿ ಆಯುಧ ಪೂಜೆ: ಎಲ್ಲ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರಗಳಿಗೆ ಠಾಣಾಧಿಕಾರಿಗಳ ನೇತೃತ್ವದಲ್ಲಿ ಪೊಲೀಸರು ಪೂಜೆ ಸಲ್ಲಿಸಿದರು. ಐಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಸ್ತ್ರಾಗಾರದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು.
ವಾಹನಪೂಜೆ: ಎಲ್ಲ ದೇವಸ್ಥಾನಗಳ ಮುಂದೆ ಪೂಜೆಗಾಗಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಆಸ್ತಿಕರು ವಾಹನ, ಮಳಿಗೆಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.