ಜೆಸಿಂತಾ ಪ್ರಕರಣ: ಅಪದ್ಧ ನುಡಿದ ಸಂಪಾದಕ ಟೀಕೆಗೊಳಗಾದ!
ಮೇಲ್ಬೋರ್ನ್: ಆಗ ಆತ್ಮಹತ್ಯೆಗೆ ಕಾರಣ, ಈಗ ಅವಮಾನಕ್ಕೆ ಕಾರಣ...
ಇದು ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆಯ ಮಾಲೀಕನ ನಡಾವಳಿ.
ಈ ಹಿಂದೆ ಇಂಗ್ಲೆಂಡ್ನ ರಾಯಲ್ ಕುಟುಂಬದ ನರ್ಸ್ ಆಗಿದ್ದ ಮಂಗಳೂರಿನ ಜೆಸಿಂತಾ ಸಾಲ್ಡಾನಾ ಅವರನ್ನು ಯಾಮಾರಿಸಿ, ಆಕೆಯ ಬಳಿ ಕೇಟ್ ಅವರ ಆರೋಗ್ಯದ ಮಾಹಿತಿ ಪಡೆದಿದ್ದ ಆಸ್ಟ್ರೇಲಿಯಾದ ರೇಡಿಯೋ ಕಂಪನಿ, ಇದೀಗ ಮತ್ತೆ ಜೆಸಿಂತಾ ಕುರಿತು ಅವಹೇಳನಕಾರಿಯಾಗಿ ಮಾತನಾಡಿದೆ.
ಆಸ್ಟ್ರೇಲಿಯಾ ರೇಡಿಯೋದ ಜಾಕಿಯೊಬ್ಬ ಜೆಸಿಂತಾ ಅವರನ್ನು ಯಾಮಾರಿಸಿದ್ದರಿಂದ, ಆಕೆ ಆತ್ಮಹತ್ಯೆಗೆ ಶರಣಾಗಿದ್ದರು. ಒಬ್ಬ ಅಮಾಯಕ ಹೆಣ್ಣು ಮಗಳ ಆತ್ಮಹತ್ಯೆಗೆ ಕಾರಣವಾದೆವು ಎಂಬ ಪಶ್ಚಾತ್ತಾಪವಿಲ್ಲದೇ ಅದೇ ರೇಡಿಯೋ ಸಂಸ್ಥೆ ಇದೀಗ ಇಡೀ ಪ್ರಕರಣವನ್ನೇ 'ಶಟ್' ಅಥವಾ 'ಅಸಹ್ಯ' ಎಂದು ಕರೆದಿದೆ.
ಈ ಸಂಬಂಧ ಷೇರುದಾರರ ಸಭೆಯಲ್ಲಿ ಮಾತನಾಡಿರುವ ರೇಡಿಯೋ ಸಂಸ್ಥೆ ಮಾಲೀಕ ಮ್ಯಾಕ್ಸ್ ಮೂರೇ ವಿಲ್ಟನ್, ಜೆಸಿಂತಾಗೆ ಅವಮಾನ ಮಾಡಿದ್ದಾನೆ. ಈ ಘಟನೆಯನ್ನು ನೆನಪಿಸಿಕೊಳ್ಳಲೂ ಅಸಹ್ಯವಾಗುತ್ತಿದೆ ಎಂಬರ್ಥದಲ್ಲಿ ಆತ ಹೇಳಿಕೊಂಡಿದ್ದಾನೆ.
'ಇಂಥ ಘಟನೆಗಳು ನಡೆಯಬಾರದಿತ್ತು, ಇದೊಂದು ದುರದೃಷ್ಟವಶಾತ್ ಘಟನೆ ಎಂದಿರುವ ಆತ, ಇಂಥ ಘಟನೆಗಳು ಮಾಮೂಲಿ, ನಡೆಯುತ್ತಲೇ ಇರುತ್ತವೆ ಬಿಡಿ ಎಂದು ಒಬ್ಬ ಮಹಾನುಭಾವ ನನಗೆ ಹೇಳಿದ್ದ ಎಂದು ಬಡಬಡಾಯಿಸಿದ್ದಾನೆ.
ಇದೇ ವೇಳೆ ಜೆಸಿಂತಾ ಕುಟುಂಬದ ಪರವಾಗಿ ನಿಂತು ಮೊದಲಿನಿಂದಲೂ ಹೋರಾಟ ನಡೆಸುತ್ತಾ ಬಂದಿರುವ ಸಂಸದ ಕೇತ್ ವಾಸ್ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಹಿಂದಿನ ಘಟನೆಯಿಂದಲೇ ರೇಡಿಯೋ ಕಂಪನಿ ಪಾಠ ಕಲಿಯಬೇಕಿತ್ತು. ಆದರೆ ಅವರು ಅಂಥ ಕ್ರಮಕ್ಕೆ ಮುಂದಾಗಿಲ್ಲ. ಈಗ ಜೆಸಿಂತಾ ಅವರಿಗೆ ಮತ್ತೆ ಅವಮಾನ ಮಾಡಿದೆ ಎಂದು ಟೀಕಿಸಿದ್ದಾರೆ. ಈ ಕೂಡಲೇ ರೇಡಿಯೋ ಕಂಪನಿ ಜೆಸಿಂತಾ ಸಾಲ್ಡಾನಾ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಯಾವುದೇ ಕಾರಣಕ್ಕೂ ಕ್ಷಮೆ ಕೋರುವುದಿಲ್ಲ ಎಂದು ಆತ ಹೇಳಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

