ದಕ್ಷಿಣ ಕನ್ನಡ

ಬಿ.ಸಿ. ರೋಡ್ನಲ್ಲಿ ಟ್ರಾಫಿಕ್ ಜಾಮ್

Published On :

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡ್ನಲ್ಲಿ ಮಂಗಳವಾರ ಸುದೀರ್ಘ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಕಿಲೋ ಮೀಟರ್ ದೂರಕ್ಕೆ ವಾಹನಗಳು ಸರತಿ ಸಾಲಿನಲ್ಲಿ ತಾಸು ಗಟ್ಟಲೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ ವಾಹನಗಳ ಅಡ್ಡಾದಿಡ್ಡಿ, ಅವಸರದ ಸಂಚಾರದಿಂದ ಮತ್ತಷ್ಟು ಸಮಸ್ಯೆ ಬಿಗಡಾಯಿಸುತ್ತಲೇ ಇತ್ತು. ಪಾಣೆಮಂಗಳೂರು ನೇತ್ರಾವತಿ ಸೇತುವೆ ಟೋಲ್ಗೇಟ್ ಬಳಿ ಉದ್ಭವಿಸಿದ ವಿವಾದವೊಂದು  ಸಮಸ್ಯೆಯನ್ನು  ಮತ್ತಷ್ಟು ಬಿಗಡಾಯಿಸಿತು. ಅಪರಾಹ್ನ ಮೂರು ಗಂಟೆ ಸುಮಾರಿಗೆ ಟೋಲ್ ಗೇಟ್ ಬಳಿ ಬರುತ್ತಿದ್ದ ಕಾರೊಂದು ಸುಂಕ ಪಾವತಿಸದೆ ತೆರಳಿದಾಗ, ಟೋಲ್ ಗೇಟ್ ನಿರ್ವಹಣಾ ಸಿಬ್ಬಂದಿ ಆ ಕಾರನ್ನು ತಡೆದು ನಿಲ್ಲಿಸಿ ವಿಚಾರಿಸಿದರು. ಈ ಸಂದರ್ಭ ಪರಸ್ಪರ ಮಾತಿನ ಚಕಮಕಿ ನಡೆದು, ಸಂಚಾರ ಸ್ಥಗಿತಗೊಂಡು ಬಹಳ ಹೊತ್ತು ವಾಹನಗಳು ಅಲ್ಲೇ ನಿಲ್ಲುವಂತಾಯಿತು. ಇದರಿಂದ ಸಾಲು ಮತ್ತಷ್ಟು ವಿಸ್ತರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.