ದಕ್ಷಿಣ ಕನ್ನಡ

ಪ್ರತಿ ಪಾಠಕ್ಕೆ ಚಿತ್ರಕಲೆ ತಳಹದಿ: ಪುರುಷೋತ್ತಮ

Published On :

ಮಂಗಳೂರು: ತರಗತಿಯಲ್ಲಿ ನಡೆಯುವ ಪ್ರತಿ ಪಾಠಕ್ಕೆ ಚಿತ್ರಕಲೆ ತಳಹದಿಯಾಗಿದೆ ಎಂದು ಪುತ್ತೂರು ಫಿಲೋಮಿನಾ ಹೈಸ್ಕೂಲ್‌ನ ಚಿತ್ರಕಲಾ ಶಿಕ್ಷಕ ಪುರುಷೋತ್ತಮ ಹೇಳಿದ್ದಾರೆ.  ನಗರದ ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ ಶುಕ್ರವಾರ 'ಬಸೋಲಿ' ನವಮಾರ್ಗ ಶೈಲಿ ಚಿಕಣಿ ಚಿತ್ರಕಲೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಲಾಪ್ರಜ್ಞೆ ಬೆಳೆಸಿಕೊಳ್ಳಬೇಕಿದ್ದು, ಏಕಾಗ್ರತೆ, ಹೊಸತನ, ತಾಳ್ಮೆಯಿಂದ ಚಿತ್ರ ರಚಿಸಬೇಕು. ಹಿಂದೆ ಭಾರತೀಯ ಚಿತ್ರಕಲೆಗೆ ಪ್ರಾಶಸ್ತ್ಯ ಇರಲಿಲ್ಲ. ಈಗ ಕಂಪ್ಯೂಟರ್ ಯುಗದಲ್ಲೂ ಚಿತ್ರಕಲೆಯಲ್ಲಿ ಕಲಾತ್ಮಕತೆಗೆ ಒತ್ತು ನೀಡಲಾಗುತ್ತಿದೆ ಎಂದರು.  ಖ್ಯಾತ ಚಿತ್ರಕಲಾವಿದ ಕಮಲ್ ಅಹಮದ್ ಮಾತನಾಡಿ, ಚಿತ್ರಕಲೆ ಮೂಲಕ ಸಂಪ್ರದಾಯ ಉಳಿಸಬಹುದು. ಚಿತ್ರಕಲಾ ಶಿಕ್ಷಕರಿಗೆ ಶಾಲೆಯಲ್ಲಿ ಕೊನೆಸ್ಥಾನವಿದ್ದು, ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಚಿತ್ರಕಲಾ ಶಿಕ್ಷಕರ ಅನಿವಾರ್ಯತೆಯನ್ನು ಮೂಡಿಸಬೇಕು ಎಂದರು.  ಚಿತ್ರಕಲಾ ಪದವಿಯ 23 ಮಂದಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದು, ಚಿಕಣಿ ಚಿತ್ರಕಲೆಯನ್ನು ಹೇಳಿಕೊಡಲಾಯಿತು. ಚಿಕಣಿ ಚಿತ್ರಕಲಾ ಪ್ರದರ್ಶನ ಇಲ್ಲಿ ಅ.30ರ ವರೆಗೆ ಇರಲಿದೆ. ರಾಷ್ಟ್ರ ಮಟ್ಟದ ಸೃಜನಶೀಲ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.   ವೇದಿಕೆಯಲ್ಲಿ ಶಾಲಾ ಪ್ರಾಚಾರ್ಯ ಪುರುಷೋತ್ತಮ ನಾಯಕ, ಪೇಂಟಿಂಗ್ ವಿಭಾಗ ಮುಖ್ಯಸ್ಥ ಎನ್.ಎಸ್.ಪತ್ತಾರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.