ಪೆರಿಯಡ್ಕ: ಬೆಂಕಿಗಾಹುತಿಯಾಗಿದ್ದ ಸೆಲೂನ್ ಉದ್ಘಾಟನೆ
ಉಪ್ಪಿನಂಗಡಿ: ದುಷ್ಕರ್ಮಿಗಳಿಂದ ಇತ್ತೀಚೆಗೆ ಬೆಂಕಿಗಾಹುತಿಯಾಗಿದ್ದ ಉಪ್ಪಿನಂಗಡಿಯ ಪೆರಿಯಡ್ಕದ ಓಂಕಾರ್ ಹೇರ್ ಡ್ರೆಸಸ್ಸ್ ಐದೇ ದಿನಗಳಲ್ಲಿ ಪುನರ್ ನವೀಕರಣಗೊಂಡು ಶುಕ್ರವಾರ ಕಾರ್ಯಾರಂಭಗೊಂಡಿತು.
ರಮೇಶ್ ಭಂಡಾರಿ ಮಾಲೀಕತ್ವದ ಈ ಸೆಲೂನ್‌ಗೆ ಅ. 21ರಂದು ನಸುಕಿನಲ್ಲಿ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಅಗ್ನಿ ಸ್ಪರ್ಶಗೈದಿದ್ದರು. ಹಲವು ಮಂದಿಯ ಸಹಕಾರದಿಂದ ಪುನರ್ ನಿರ್ಮಾಣಗೊಂಡ ಸೆಲೂನ್‌ನ್ನು ರಮೇಶ್‌ರ ತಾಯಿ ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಸಾರ್ವಜನಿಕ ಸಭೆ ನಡೆಯಿತು. ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು. ನಮೋ ಭಾರತ್ ಸಂಘಟನೆ ತಾಲೂಕು ಗೌರವಾಧ್ಯಕ್ಷ ಡಾ. ಪ್ರಸಾದ ಭಂಡಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವ ಗೌಡ, ತಾ.ಪಂ. ಸದಸ್ಯ ಉಮೇಶ್ ಶೆಣೈ, ಬಜರಂಗದಳದ ಜಿಲ್ಲಾ ಪ್ರಮುಖ್ ದಿನೇಶ್‌ಕು ಮಾರ್ ಜೈನ್, ಪ್ರಸಾದ್ ಪಚ್ಚಾಡಿ, ಜಗದೀಶ್ ಶೆಟ್ಟಿ, ವಿನಾಯಕ್, ಯಶವಂತ ಜಿ. ಇದ್ದರು.
ವಿನೂತನ ಶ್ರದ್ಧಾಂಜಲಿ ಕಾರ್ಯಕ್ರಮ: ಎಲ್ಲರೂ ನಿದ್ರಿಸುತ್ತಿರುವಾಗ ತಾನು ಜಾಗೃತಗೊಂಡು ಅಂಗಡಿಗಳಿಗೆ ಬೆಂಕಿಯಿಕ್ಕುವುದು, ಅಳವಡಿಸಲಾದ ಬ್ಯಾನರ್‌ಗಳನ್ನು ಹಾನಿಗೊಳಪಡಿಸುವುದು ಯಾವುದೇ ದೃಷ್ಟಿಯಲ್ಲೂ ಪೌರುಷವಲ್ಲ. ಅಂತೆಯೇ ಪೆರಿಯಡ್ಕದ ಪರಿಸರದಲ್ಲಿ ಈ ರೀತಿಯ ಕೃತ್ಯಗಳನ್ನು ನಡೆಸುತ್ತಿದ್ದ ಕಾಣದ ನಪುಂಸಕರಿಗೆ ಸಂಘಟನೆಯ ಕಾರ್ಯಕರ್ತರು ವಿನೂತನ ಶೈಲಿಯ ಶ್ರದ್ಧಾಂಜಲಿ ಸಲ್ಲಿಸಿದರು.
ಮಡಿಕೆಯಲ್ಲಿ ಬೂದಿ ತಂದಿರಿಸಿ, ಹೂವಿನ ಹಾರ ಹಾಕಿ, ಅಂಗಡಿಗೆ ಬೆಂಕಿ ಹಚ್ಚುವ, ಬ್ಯಾನರ್ ಹರಿಯುವ ನಪುಂಸಕರಿಗೆ ಶ್ರದ್ಧಾಂಜಲಿ ಎನ್ನುವ ಬರಹದ ಬ್ಯಾನರ್ ಅಳವಡಿಸಿ ಸಾರ್ವಜನಿಕ ಪ್ರದರ್ಶನ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

