ದಕ್ಷಿಣ ಕನ್ನಡ

ಪುತ್ತೂರು: ಇಂದು ಕೃಷಿ ಹಬ್ಬಕ್ಕೆ ಬರಲಿದೆ ವಂಡರ್ ಕ್ಲೈಂಬರ್

Published On :

ಪುತ್ತೂರು: ಭಾರತೀಯ ಕಿಸಾನ್ ಸಂಘದ ಆಶ್ರಯದಲ್ಲಿ ನಡೆಯುವ ಕೃಷಿ ಹಬ್ಬದಲ್ಲಿ ಅಡಕೆ ಮರ ಏರುವ ಯಂತ್ರ ಹಾಗೂ ನೆಲದಿಂದಲೇ ಅಡಕೆ ಗೊನೆಗಳಿಗೆ ಔಷಧ ಸಿಂಪಡಿಸುವ ಯಂತ್ರ ವಂಡರ್ ಕ್ಲೈಂಬರ್ ಮಾದರಿ ಆಗಮಿಸಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಪುತ್ತೂರಿನ ತೆಂಕಿಲ ವಿವೇಕಾನಂದ ಶಾಲೆಯಲ್ಲಿ  ಭಾನುವಾರ ನಡೆಯುವ ಕೃಷಿ ಹಬ್ಬದಲ್ಲಿ ವಿವಿಧ ವಿಚಾರಗೋಷ್ಠಿಗಳ ನಡುವೆ ಕೃಷಿ ಆವಿಷ್ಕಾರಗಳ ಪ್ರದರ್ಶನ ಹಾಗೂ ವಿವಿಧ ಮಾದರಿಗಳ ಪ್ರಾತ್ಯಕ್ಷಿಕೆ ಕೂಡಾ ಇದೆ.
ಈ ಹಬ್ಬದಲ್ಲಿ ವಿಶೇಷವಾಗಿ ಕಳೆದ ವರ್ಷ ಪುತ್ತೂರಿನಲ್ಲಿ ಕ್ಯಾಂಪ್ಕೋ ವತಿಯಿಂದ ನಡೆದ ಯಂತ್ರಮೇಳದಲ್ಲಿ  ವಿಶೇಷ ಆಕರ್ಷಣೆಗಳಲ್ಲಿ  ಕಂಡುಬಂದದ್ದು ವಂಡರ್ ಕ್ಲೈಂಬರ್. ಅಡಕೆ ಕಟಾವಿಗೆ ಮಾತ್ರವೇ ತಯಾರಿಸಿದ್ದ ಈ ಯಂತ್ರ ಈ ಬಾರಿ ಮತ್ತೆ ಸುಧಾರಣೆಗೊಂಡು ನೆಲದಿಂದಲೇ ಅಡಕೆ ಗೊನೆಗೆ ಔಷಧ ಸಿಂಪಡಿಸುವ ನೂತನ ಆವಿಷ್ಕಾರವಾಗಿ ಲಭ್ಯವಿದೆ. ಜಿಲ್ಲೆಯ ಬೆಳೆಗಾರರನ್ನು ಗಮನದಲ್ಲಿರಿಸಿಕೊಂಡು ಕೊಂಚ ಬದಲಾಯಿಸಿ ನೆಲದಿಂದಲೇ ಅಡಕೆ ಗೊನೆಗಳಿಗೆ ಸಿಂಪಡಿಸಲು ಇದೇ ವಂಡರ್ ಕ್ಲೈಂಬರ್ ಬಳಕೆ ಮಾಡಲಾಗಿದೆ.
ಸಿಂಪಡಣೆ ಹೇಗೆ?: ಇದರಲ್ಲಿ ಇರುವ ಬ್ಲೇಡ್ ತೆಗೆದು  ಅಲ್ಲಿ ಔಷಧ ಸಿಂಪಡಣೆಯ ಸ್ಪ್ರೇ ಹೋಲ್ಡರ್ ಇರಿಸಿ ಔಷಧ ಸಿಂಪಡಣೆಯ ವ್ಯವಸ್ಥೆ ಮಾಡಲಾಗಿದೆ. ಕೆಳಭಾಗದಲ್ಲೇ ಔಷಧ ನಿಯಂತ್ರಣಕ್ಕೆ ನಿಯಂತ್ರಣ ವ್ಯವಸ್ಥೆ ಇದೆ.
ಒಂದು ಮರಕ್ಕೆ ಈ ಯಂತ್ರ ಏರಿದರೆ ಸುತ್ತಮುತ್ತಲಿನ ಸುಮಾರು 20 ಮರಗಳಿಗೆ ಸಿಂಪಡಣೆ ಮಾಡಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.