ದಕ್ಷಿಣ ಕನ್ನಡ

ವಿಧವಾ 'ಪೂಜಾರಿ'ಗಳು ನಾಪತ್ತೆ ಆಗಿಲ್ಲ, ರಜೆಯಲ್ಲಿದ್ದರು: ಪೂಜಾರಿ

Published On :

ಮಂಗಳೂರು: ಕುದ್ರೋಳಿ ಕ್ಷೇತ್ರದಲ್ಲಿ ವಿಧವಾ ಅರ್ಚಕಿಯರು ನಾಪತ್ತೆಯಾಗಿಲ್ಲ. ಏಳು ದಿನ ವಿಶ್ರಾಂತಿಗಾಗಿ ರಜೆ ಹಾಕಿ ಮತ್ತೆ ಪೂಜೆಯಲ್ಲಿ ತೊಡಗಿದ್ದಾರೆ ಎಂದು ಕ್ಷೇತ್ರ ನವೀಕರಣ ರೂವಾರಿ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
'ಕನ್ನಡಪ್ರಭ'ದಲ್ಲಿ ಸೋಮವಾರ ಪ್ರಕಟವಾದ 'ವಿಧವಾ ಪೂಜಾರಿಗಳು ನಾಪತ್ತೆ' ವಿಶೇಷ ವರದಿಗೆ ಸ್ಪಷ್ಟೀಕರಣ ನೀಡಿದರು. ಅರ್ಚಕಿಯರು ರಜೆ ಮುಗಿಸಿ ಅ.24ರಿಂದ ದೇಗುಲದಲ್ಲಿ ಮತ್ತೆ ಪೂಜೆ ಮುಂದುವರಿಸಿದ್ದಾರೆ ಎಂದರು. ತರಬೇತಿ ಪಡೆದ ಮಹಿಳಾ ಅರ್ಚಕಿಯರನ್ನು ಅ.6ರಂದು ಕುದ್ರೋಳಿ ಕ್ಷೇತ್ರಕ್ಕೆ ನೇಮಿಸಲಾಗಿತ್ತು. 10 ದಿನ ದಸರಾ ಪೂಜೆಯಿಂದ ಬಳಲಿದ್ದ ಅರ್ಚಕಿಯರಿಗೆ ಅ.18ರಿಂದ ಅ.23ರವರೆಗೆ ವಿಶ್ರಾಂತಿ ರಜೆ ನೀಡಲಾಗಿತ್ತು. ಅ.25ರಂದು ಜಂಟಿ ಸಂಸದೀಯ ಸಮಿತಿಯ ಹತ್ತು ಸಂಸದರು ಕೆಐಒಸಿಎಲ್ ಕಂಪನಿಗೆ ಭೇಟಿ ನೀಡಿದ್ದು, ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಅವರು ಮಹಿಳಾ ಅರ್ಚಕಿಯರಿಂದ ಪೂಜೆ ಮಾಡಿಸಿ, ಪ್ರಸಾದ ಸ್ವೀಕರಿಸಿದ್ದಕ್ಕೆ ದಾಖಲೆಗಳಿವೆ ಎಂದರು. ಬದಲಾವಣೆ ಮಾಡುವಾಗ ಅಡ್ಡಿ ಬರುತ್ತದೆ ಎಂಬ ಕಾರಣಕ್ಕೆ ಅರ್ಚಕಿಯರ ನೇಮಕ ಸಂದರ್ಭದಲ್ಲಿ ಕ್ಷೇತ್ರ ಆಡಳಿತ ಮಂಡಳಿಯಲ್ಲಿ ಚರ್ಚಿಸಿಲ್ಲ. ಆದರೆ ಆಡಳಿತ ಮಂಡಳಿಯ 7 ಟ್ರಸ್ಟಿಗಳಿಂದ ಯಾವುದೇ ಆಕ್ಷೇಪ ಬಂದಿಲ್ಲ. ಎಲ್ಲರೂ ಶ್ಲಾಘಿಸಿ ಒಪ್ಪಿಕೊಂಡಿದ್ದಾರೆ ಎಂದೂ ಹೇಳಿದರು.

ರಾಜ್ಯದೆಲ್ಲೆಡೆ ನೇಮಕ?
ರಾಜ್ಯದಲ್ಲಿರುವ 36 ಸಾವಿರ ದೇವಸ್ಥಾನದಲ್ಲಿ ಮಹಿಳಾ ಅರ್ಚಕಿಯರ ನೇಮಕ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ ಸರ್ಕಾರ 65 ವರ್ಷಗಳಿಂದ ದೇಶಕ್ಕೆ ಏನೂ ಮಾಡಿಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್ ವಿರೋಧಿಗಳ ಟೀಕೆ ಸರಿಯಲ್ಲ. 45 ವರ್ಷ ದೇಶ ಆಳಿದ ಬ್ರಾಹ್ಮಣರು ಅಭಿವೃದ್ಧಿ ಮಾಡಿಲ್ಲ ಎಂದಾದರೆ, ಬ್ರಾಹ್ಮಣರಿಗೆ ಏನೂ ಶಕ್ತಿ ಇರಲಿಲ್ಲ ಎಂದರ್ಥವೇ ಎಂದು ಜನಾರ್ದನ ಪೂಜಾರಿ ತಿರುಗೇಟು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.