ದಕ್ಷಿಣ ಕನ್ನಡ

ಉಪ್ಪುಕಳ ನಿಧಿ ಅಪಹರಣ ಪ್ರಕರಣ; ನಾಲ್ವರಿಗೆ ನ್ಯಾಯಾಂಗ ಬಂಧನ

Published On :

ಸುಬ್ರಹ್ಮಣ್ಯ: ಉಪ್ಪುಕಳ ಪರಮೇಶ್ವರ ಗೌಡರ ಕೊಲೆ ಹಾಗೂ ಇದೇ ಪರಿಸರದಲ್ಲಿ ನಡೆದ ನಿಧಿ ಅಪಹರಣದ ಕೃತ್ಯದ ಬಗ್ಗೆ 2 ಹಂತದಲ್ಲಿ ತನಿಖೆ ನಡೆಯುತ್ತಿದ್ದು ದಿಢೀರ್ ಬೆಳವಣಿಗೆಯೊಂದರಲ್ಲಿ ನಿಧಿ ಅಪಹರಣ ಕೃತ್ಯಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಮಂಗಳವಾರ ಪೊಲೀಸರು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸೋಮವಾರವಷ್ಟೇ ಪರಮೇಶ್ವರ ಗೌಡರ ಕೊಲೆ ಪ್ರಕರಣ ಸಂಬಂಧ ಇಬ್ಬರನ್ನು ನ್ಯಾಯಾಂಗ ಬಂಧನದಲ್ಲಿ ಒಳಪಡಿಸಲಾಗಿತ್ತು. ಸೋಮವಾರ ವಶಕ್ಕೆ ಪಡೆದ ಮಂತ್ರವಾದಿ ಕಾಸರಗೋಡು ಮೂಲದ ಇಬ್ರಾಹಿಂನನ್ನು ಮಂಗಳವಾರ ಪೊಲೀಸರು ನಿಧಿ ಅಪಹರಿಸಲಾಗಿದೆ ಎನ್ನಲಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವಶದಲ್ಲಿರುವ ಕಾಸರಗೋಡು ಮೂಲದ ಅಹಮ್ಮದ್, ಅಬುಬುಕಾರ್, ಸದಾನಂದ ಯಾನೆ ಸುಧಾಕರ ಇವರನ್ನು ಮಂಗಳವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನಾಲ್ವರಿಗೂ ನ.11ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು.
ಕೊಲೆ ಮತ್ತು ನಿಧಿ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದು ಇವರು ನೀಡಿದ ಮಾಹಿತಿ ಮೇರೆಗೆ ಸುಳ್ಯ  ವೃತ್ತ ನಿರೀಕ್ಷಕ ಸತೀಶ್ ಬಿ.ಎಸ್. ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಠಾಣಾಧಿಕಾರಿ ನಾಗೇಶ್ ಕದ್ರಿ ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.