ದಕ್ಷಿಣ ಕನ್ನಡ

ಅಕ್ರಮ ಕಾಮಗಾರಿ ದೂರು; ಎಎಂಆರ್ ಪವರ್ ಪ್ರಾಜೆಕ್ಟ್‌ಗೆ ಭೇಟಿ, ಪರಿಶೀಲನೆ

Published On :

ಬಂಟ್ವಾಳ: ಅಕ್ರಮ ಕಾಮಗಾರಿ ನಡೆಯುತ್ತಿದೆ ಎನ್ನುವ ಸಾರ್ವಜನಿಕರ ದೂರಿನ ಮೇರೆಗೆ ನರಿಕೊಂಬು ಗ್ರಾಪಂ ಸದಸ್ಯರು ಬುಧವಾರ ಶಂಭೂರು ಎಎಂಆರ್ ಪವರ್ ಪ್ರಾಜೆಕ್ಟ್‌ಗೆ ಭೇಟಿ ನೀಡಿ ಪರಿಶಿಲನೆ ನಡೆಸಿದರು. ಪಂಚಾಯಿತಿಗೆ ಮಾಹಿತಿ ನೀಡದೆ ಇಲ್ಲಿ ಹೆಚ್ಚುವರಿ ಪವರ್ ಹೌಸ್ ನಿರ್ಮಿಸಲಾಗುತ್ತಿದ್ದು ಸದಸ್ಯರ ಭೇಟಿಯ ಸಂದರ್ಭ ದೃಢಪಟ್ಟಿದೆ.
ಇಲ್ಲಿ ಕಾಲುವೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು 6 ದಿನಗಳ ಮೊದಲೇ ಕಂಪೆನಿಗೆ ನೋಟಿಸ್ ನೀಡಿ ಪರಿಶೀಲನೆಗೆ ಬಂದಿದ್ದೇವೆ. ಪಂಚಾಯಿತಿಗೆ ಮಾಹಿತಿ ನೀಡದೆ ಅಕ್ರಮವಾಗಿ ಇಲ್ಲಿ ಕಾಮಗಾರಿ ನಡೆಯುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಗೊಳ್ಳಬೇಕಾದರೂ ಪಂಚಾಯಿತಿಯಿಂದ ಅನುಮತಿ ಪಡೆಯಬೇಕು. ಆದರೆ ನಿಯಮವನ್ನು ಉಲ್ಲಂಘಿಸಿ ಎಎಂಆರ್ ಕಂಪೆನಿ ಕಾಮಗಾರಿ ನಡೆಸುತ್ತಿದೆ ಎಂದು ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ ಸಾಲ್ಯಾನ್ ಆರೋಪಿಸಿದರು.
ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನದಿಯಲ್ಲಿ ನೆರೆ ನೀರು ಉಕ್ಕಿ ಬರುವುದುರಿಂದ ನೀರು ಸಂಗ್ರಹಿಸಿಡಲು ಕಷ್ಟವಾಗುತ್ತಿದೆ. ಕಳೆದ ಮಳೆಗಾಲದಲ್ಲಿ 30 ಗೇಟ್‌ಗಳಿಂದಲೂ ನೀರು ಹೊರ ಬಿಡಲಾಗಿದೆ. ನೆರೆ ನೀರನ್ನು ಹೊರ ಹರಿಯ ಬಿಡಲು ಬೈಪಾಸ್ ಕಾಲುವೆ ನಿರ್ಮಿಸುತ್ತಿರುವುದಾಗಿ ಕಂಪೆನಿಯ ಪ್ಲಾಂಟ್ ಮ್ಯಾನೇಜರ್ ಪ್ರೇಮನಾಥ್ ಮಾಹಿತಿ ನೀಡಿದರು. ಆದರೆ ಅಧಿಕಾರಿಯ ಈ ಮಾಹಿತಿಯನ್ನು ಪಂಚಾಯಿತಿ ಸದಸ್ಯರು ತಳ್ಳಿ ಹಾಕಿದ್ದಾರೆ.
ಛಾಯಾಗ್ರಹಣಕ್ಕೆ ಅಡ್ಡಿಪಡಿಸಿದ ಅಧಿಕಾರಿ: ಅಕ್ರಮ ಕಾಮಗಾರಿಯ ಛಾಯಾಚಿತ್ರ ತೆಗೆಯದಂತೆ ಮಾಧ್ಯಮದವರ ಕರ್ತವ್ಯಕ್ಕೆ ಪ್ಲಾಂಟ್ ಮ್ಯಾನೇಜರ್ ಪ್ರೇಮನಾಥ್ ಅಡ್ಡಿಪಡಿಸಿದರು. ವರದಿಗಾರೊಬ್ಬರ ಕೈಯಿಂದ ಕ್ಯಾಮರಾ ಕಸಿಯಲು ಮುಂದಾಗುತ್ತಿದಂತಯೇ ಅಧಿಕಾರಿ ಮತ್ತು ಮಾಧ್ಯಮದವರ ನಡುವೆ ಮಾತಿನ ಚಕಮಕಿ ನಡೆಯಿತು. ಮಾಹಿತಿ ನೀಡಿ ಫೋಟೋ ತೆಗೆಯಿರಿ ಎಂದು ಅಧಿಕಾರಿ ಸಮಜಾಯಿಷಿ ನೀಡಲು ಮುಂದಾದಾಗ ನೀವು ಪಂಚಾಯಿತಿಗೆ ಮಾಹಿತಿ ನೀಡಿ ಈ ಕಾಮಗಾರಿ ಮಾಡುತ್ತಿದ್ದೀರಾ ಎಂದು ಪಂಚಾಯಿತಿ ಸದಸ್ಯರು ಅಧಿಕಾರಿಯನ್ನು ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.