ಉಪ್ಪುಕಳ ನಿಧಿ,ಕೊಲೆ ಪ್ರಕರಣ: ತಲೆಮರೆಸಿಕೊಂಡ ಆರೋಪಿಗೆ ಶೋಧ
ಸುಬ್ರಹ್ಮಣ್ಯ: ಉಪ್ಪುಕಳ ನಿಧಿ ಪ್ರಕರಣ ಹಾಗೂ ಕೊಲೆ ಪ್ರಕರಣದಲ್ಲಿ ಈಗಾಗಲೇ 6 ಮಂದಿಗೆ ನ್ಯಾಯಾಂಗ ಬಂಧನವಾಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚಂದ್ರಹಾಸ ತಲೆಮರೆಸಿಕೊಂಡಿದ್ದಾರೆ. ಚಂದ್ರಹಾಸ ಸೇರಿದಂತೆ ಈ ಪ್ರಕರಣದಲ್ಲಿ ಒಟ್ಟು 13 ಮಂದಿ ಭಾಗಿಯಾದವರ ಮಾಹಿತಿ ಇದೀಗ ಪೊಲೀಸರಿಗೆ ಲಭಿಸಿದೆ.
ನಿಧಿ ಪ್ರಕರಣದಲ್ಲಿ 6 ಮಂದಿ ನ್ಯಾಯಾಂಗ ಬಂಧನದಲ್ಲಿದ್ದು, ಚಂದ್ರಹಾಸ, ಮುರಳಿ, ಚಲನ್, ಯಶೋಧರ, ಸುಕುಮಾರ, ಆನಂದ, ಶಶಿ ಕೃತ್ಯದಲ್ಲಿ ಭಾಗಿಯಾದ ಪ್ರಮುಖರು ಎಂದು ಪೊಲೀಸರು ತಿಳಿಸಿದ್ದಾರೆ. ಪರಮೇಶ್ವರ ಗೌಡರ ಕೊಲೆ ಪ್ರಕರಣ ಭೇದಿಸಲು ಹೊರಟ ಪೊಲೀಸರಿಗೆ ಮೋಹನ್ದಾಸ್ ಗೌಡ, ಮೋಹನ್ ಮೊಗ್ರ ಇವರನ್ನು ತನಿಖೆಗೊಳಪಡಿಸಿದಾಗ ಅವರು ನೀಡಿದ ಮಾಹಿತಿ ಮೇರೆಗೆ ಮಂತ್ರವಾದಿ ಕಾಸರಗೋಡು ಮೂಲದ ಇಬ್ರಾಹಿಂ, ಅಬುಬಕಾರ್, ಅಹಮ್ಮದ್, ಸದಾನಂದ ಯಾನೆ ಸುಧಾಕರ ಅವರನ್ನು ಬಂಧಿಸಿ ವಿಚಾರಿಸಿದಾಗ ಒಟ್ಟು 13 ಮಂದಿ ಈ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಪರಮೇಶ್ವರ ಗೌಡರ ಕೊಲೆ ಪ್ರಕರಣ ಆರೋಪಿಗಳ ಪತ್ತೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ನಿಧಿ ಪ್ರಕರಣದ ಕುರಿತಂತೆ ಮಹತ್ವದ ಮಾಹಿತಿ ಲಭಿಸಿದೆ. ಈ ಮೂಲಕ ಒಂದು ಕೇಸು ಪತ್ತೆ ಹಚ್ಚುವಾಗ 2 ಪ್ರಕರಣಗಳು ಬೆಳಕಿಗೆ ಬಂದವು. ಕೊಲೆ ಪ್ರಕರಣದ ಶಂಕಿತ ಮುಖ್ಯ ಆರೋಪಿ ಚಂದ್ರಹಾಸನ ಮೊಬೈಲ್, ಸಿಮ್ ನಿಷ್ಕ್ರಿಯ ಸ್ಥಿತಿಯಲ್ಲಿರುವುದರಿಂದ ಪತ್ತೆ ಹಚ್ಚಲು ಕಷ್ಟವಾಗಿದೆ. ಶೀಘ್ರವೇ ಆತನ ಪತ್ತೆ ಹಚ್ಚುವ ವಿಶ್ವಾಸವಿದ್ದು, ಚಂದ್ರಹಾಸ ಸಿಕ್ಕಿದಾಗ ಕೊಲೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳು ಸಿಕ್ಕಿ ಪ್ರಕರಣದ ನೈಜ ಕತೆ ಹೊರ ಬೀಳಲಿದೆ. ಈ ನಿಟ್ಟಿನಲ್ಲಿ ಶಂಕಿತ ಮುಖ್ಯ ಆರೋಪಿ ಚಂದ್ರಹಾಸನ ಚಲನವಲನದ ಬಗ್ಗೆ ನಿಗಾ ಇಡಲಾಗಿದೆ ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

