ದಕ್ಷಿಣ ಕನ್ನಡ

ಕಳವು ಯತ್ನ ವಿಫಲ

Published On :

ವಿಟ್ಲ: ಮಧ್ಯರಾತ್ರಿ ಮನೆಯೊಂದರ ಬಾಗಿಲು ಮುರಿದು ಒಳಹೊಕ್ಕ ಕಳ್ಳರು ಸೊತ್ತುಗಳಿಗಾಗಿ ಜಾಲಾಡುತ್ತಿದ್ದಂತೆಯೇ ಗಾಢ ನಿದ್ರೆಯಲ್ಲಿದ್ದ ಮನೆಯವರು ಎಚ್ಚರಗೊಂಡಾಗ ಕಳ್ಳರು ಪರಾರಿಯಾದ ಘಟನೆ ವಿಟ್ಲದ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಇದೇ ಸಮಯ ಇನ್ನೊದು ಮನೆಯಂಗಳದಲ್ಲಿದ್ದ ಬೈಕನ್ನು ಕದ್ದ ಕಳ್ಳರು ರಸ್ತೆ ಬದಿಯ ತೋಡಿಗೆಸೆದು ಹೋಗಿದ್ದಾರೆ.
ಕುಡ್ತಮುಗೇರು ಸಮೀಪದ ಪಡಾರು ಜಂಕ್ಷನ್‌ನಲ್ಲಿರುವ ಅಬ್ದುಲ್ ಹಕೀಂ ಎಂಬವರ ಮನೆಗೆ ಬುಧವಾರ ರಾತ್ರಿ ಕಳ್ಳರು ಹಿಂಬದಿಯ ಬಾಗಿಲು ಮುರಿದು ಒಳಹೊಕ್ಕಿದ್ದಾರೆ. ಆ ಬಳಿಕ ಮೂರು ಕೋಣೆಗಳ ಬಾಗಿಲುಗಳನ್ನು ಮುರಿದ ಕಳ್ಳರು ಕಪಾಟಿನಲ್ಲಿ ಚಿನ್ನಾಭರಣಗಳನ್ನು ಜಾಲಾಡಿದ್ದಾರೆ. ಇದೇ ಸಮಯ ಮನೆಯವರು ಎಚ್ಚೆತ್ತುಬೊಬ್ಬೆ ಹೊಡೆಯುತ್ತಿದ್ದಂತೆಯೇ ಕಳ್ಳ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಮತ್ತು ಸಿಬ್ಬಂದಿ ರಾತ್ರಿಯೇ ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಕಳ್ಳನಿಗಾಗಿ ಹುಡುಕಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ಸಮಯ ಕರೈ ನಿವಾಸಿ ವಿದೇಶದಲ್ಲಿರುವ ಹಮೀದ್ ಎಂಬವರ ಮನೆಯ ಮುಂಬಾಗಿಲು ಮುರಿದು ಒಳಹೊಕ್ಕ ಕಳ್ಳರು ಎರಡು ಕಪಾಟುಗಳನು ಮುರಿದಿದ್ದು ನಗದು 2ಸಾವಿರ ರೂಪಾಯಿ ಕಳ್ಳತನ ನಡೆಸಿದ್ದಾರೆ. ವಿಪರ್ಯಾಸವೆಂದರೆ ಅದೇ ರಾತ್ರಿ ಸಾಲೆತ್ತೂರು ತಾಮರಾಜೆ ಎಂಬಲ್ಲಿನ ಹಾಜಿ ಉಸ್ಮಾನ್ ಎಂಬವರ ಮನೆಯ ಹಿಂಬಾಗಿಲು ಮುರದಿದು ಒಳಹೊಕ್ಕ ಕಳ್ಳರು ಚಿನ್ನಾಭರಣಕ್ಕಾಗಿ ಹುಡುಕಾಡಿದ್ದಾರೆ. ಆ ಸಮಯ ಮನೆಯವರು ಎಚ್ಚರಗೊಂಡಿದ್ದರಿಂದಾಗಿ ಕಳ್ಳರು ಪರಾರಿಯಾಗಿದ್ದಾರೆ. ಅದಾದ ಕೆಲಹೊತ್ತಲ್ಲೇ ಕೊಲ್ನಾಡು ಪಂಚಾಯಿತಿ ಹಿಂಬದಿಯಲ್ಲಿರುವ ಸಿರಾಜ್ ಎಂಬವರ ಬಜಾಜ್ ಪಲ್ಸರ್ ಬೈಕ್ ಅನ್ನು  ಅಂಗಳದಿಂದಲೇ ಕದ್ದೊಯ್ದ ಕಳ್ಳರು ಸ್ವಲ್ಪ ದೂರದಲ್ಲಿ ರಸ್ತೆ ಬದಿಯ ತೋಡಿಗೆ ಎಸೆದು ಪರಾರಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.