ವಿಟ್ಲ: ಆತ್ಮಹತ್ಯೆಗೆ ಯತ್ನಿಸಿದ ಯುವಕನ ಬದುಕಿಸಿದ ಸಂಘಟನೆ ಸದಸ್ಯರು
ಬಂಟ್ವಾಳ: ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನೋರ್ವ ಸಂಘಟನೆಯೊಂದರ ಸಮಯಪ್ರಜ್ಞೆಯಿಂದ ಬದುಕುಳಿದ ಘಟನೆ ಗುರುವಾರ ವಿಟ್ಲದ ಬೊಬ್ಬೆಕೇರಿ ಎಂಬಲ್ಲಿ ನಡೆದಿದೆ.
ಬುಳೇರಿಕಟ್ಟೆ ನಿವಾಸಿ ಹರಿಪ್ರಸಾದ್ ಕುಲಾಲ್ (26) ಎಂಬಾತ ಆತ್ಮಹತ್ಯೆಗೆ ಯತ್ನಿಸಿದಾತ. ಜೀವನ್ಮರಣ ಸ್ಥಿತಿಯಲ್ಲಿದ್ದ ಈತನನ್ನು ಫ್ರೆಂಡ್ಸ್ ವಿಟ್ಲ ಸಂಘಟನೆಯ ಯುವಕರು ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ್ದಾರೆ. ಈತ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಗುರುವಾರ ಸಂಜೆ ವೇಳೆ ಕೆಲಸ ಮುಗಿಸಿಕೊಂಡು ನೇರವಾಗಿ ಬಂದು ಬೊಬ್ಬೆಕೇರಿ ಎಂಬಲ್ಲಿ ಬೈಕ್ನಿಂದ ಇಳಿದು ವಿಟ್ಲ- ಮಂಗಳೂರು ರಸ್ತೆಯ ಮನೆಯೊಂದರ ಕಾಂಪೌಂಡ್ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ.
ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಗಮನಿಸಿದ ಫ್ರೆಂಡ್ಸ್ ವಿಟ್ಲ ಸಂಘಟನೆ ಕಾರ್ಯಕರ್ತರು ತಮ್ಮ ಆಂಬ್ಯುಲೆನ್ಸ್ನಲ್ಲಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಬಳಿಕ ಆಸ್ಪತ್ರೆಯಲ್ಲಿ ಆತನ ಮೊಬೈಲ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಯುವತಿಯೊಬ್ಬಳ ಸಂದೇಶಗಳು ಬಂದಿದ್ದು, ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಫ್ರೆಂಡ್ಸ್ ವಿಟ್ಲ ಸಂಘಟನೆ ಯುವಕರು ಇದೇ ರೀತಿ ಈ ಹಿಂದೆಯೂ ಹಲವು ಪ್ರಾಣಗಳನ್ನು ಉಳಿಸಿ ಮಾನವೀಯತೆ ಮೆರೆದಿದ್ದಾರೆ. ಇದೀಗ ಮತ್ತೊಮ್ಮೆ ಯುವಕನನ್ನು ಬದುಕುಳಿಸಿ ಸಾರ್ವಜನಿಕರ ಪ್ರಸಂಶೆಗೆ ಪಾತ್ರರಾಗಿದ್ದಾರೆ.
ವಿದ್ಯುತ್ ಕಂಬ ಧರೆಗೆ; ಕೆಲಕಾಲ ಆತಂಕ
ವಿಟ್ಲ: ಪಟ್ಟಣದ ಹಳೆ ಬಸ್ಸು ನಿಲ್ದಾಣದ ಎದುರಿನ ವಿಟ್ಲ- ಪುತ್ತೂರು ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬವೊಂದು ನೆಲಕ್ಕುರುಳಿದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಈ ಘಟನೆಗೆ ಸಾರ್ವಜನಿಕರು ಹಲವು ಸಮಯಗಳವರೆಗೆ ರಸ್ತೆಯಲ್ಲಿ ಓಡಾಡಲು ಆತಂಕಪಡುವಂತೆ ಮಾಡಿದೆ. ಅಂಗಡಿಯೊಂದರ ಜಾಹೀರಾತಿನ ಬ್ಯಾನರೊಂದಕ್ಕೆ ಅಳವಡಿಸಲಾದ ಹಗ್ಗಕ್ಕೆ ಪುತ್ತೂರು ಕಡೆಯಿಂದ ಬಂದ ಲಾರಿ ತಾಗಿದ ಪರಿಣಾಮ ವಿದ್ಯುತ್ ಕಂಬ ಬುಡ ಸಮೇತ ಮುರಿದು ಬಿದ್ದಿದೆ.
ಕಂಬ ಉರುಳಿದ ಪರಿಣಾಮ ಪಾದಚಾರಿಗಳು ನಡೆದಾಡಲು ಪರದಾಡುವಂತ ಪರಿಸ್ಥಿತಿ ಎದುರಾಗಿದ್ದು, ಇನ್ನೂ ಕೆಲ ಮಂದಿ ವಿದ್ಯುತ್ ಸ್ಪರ್ಶಿಸಬಹುದೆಂಬ ಭಯದಿಂದ ಆತಂಕ ಪಡುವಂತಹ ಪರಿಸ್ಥಿತಿಯೂ ಎದುರಾಗಿತ್ತು. ಇಲ್ಲಿ ಹಾಕಲಾದ ಬ್ಯಾನರ್ಗನ್ನು ಸ್ಥಳೀಯರು ತೆರವುಗೊಳಿಸಲು ಈ ಹಿಂದೆ ಹೇಳಿದ್ದರೂ ಅದನ್ನು ತೆರವುಗೊಳಿಸದೇ ಇದ್ದದ್ದೇ ಈ ಘಟನೆಗೆ ಕಾರಣವೆನ್ನಲಾಗಿದೆ. ಬಳಿಕ ಸ್ಥಳೀಯರು ವಿಟ್ಲ ಮೆಸ್ಕಾಂ ಶಾಖಾಧಿಕಾರಿ ಪ್ರವೀಣ್ ಕೊಟ್ಟಾರಿ ಅವರಿಗೆ ಮಾಹಿತಿ ನೀಡಿದ್ದು ತೆರವುಗೊಳಿಸುವ ಕಾರ್ಯ ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

