ಬಲಿಪ ಶುದ್ಧತೆ ಕಾಪಿಟ್ಟ ಸರ್ವಮಾನ್ಯ ಭಾಗವತ: ನಾ. ಕಾರಂತ ಪೆರಾಜೆ
ಪುತ್ತೂರು: ಆರು ದಶಕಗಳಿಂದ ಒಂದೇ ಶೈಲಿ ಕಾಪಿಟ್ಟುಕೊಂಡ ಬಲಿಪ ನಾರಾಯಣರು ಯಕ್ಷಗಾನದ ಸರ್ವಮಾನ್ಯ ಭಾಗವತ. ಯಾವುದೇ ಹಪಹಪಿಯಿಲ್ಲದೆ ಯಕ್ಷಗಾನವನ್ನೇ ಸರ್ವಸ್ವವನ್ನಾಗಿ ಸ್ವೀಕರಿಸಿ, ಭಾಗವತಿಕೆಯಲ್ಲಿ ಶುದ್ಧತೆ ಕಾಪಾಡಿಕೊಂಡವರು ಎಂದು ಅಂಕಣಕಾರ, ಕಲಾವಿದ ನಾ. ಕಾರಂತ ಪೆರಾಜೆ ಅಭಿಪ್ರಾಯಪಟ್ಟಿದ್ದಾರೆ. ಪುತ್ತೂರಿನ ಸ್ವಾಮಿ ಕಲಾಮಂದಿರದಲ್ಲಿ ಭಾನುವಾರ ಜರುಗಿದ ಯಕ್ಷಗಾನ ಪ್ರದರ್ಶನದ ಸಂದರ್ಭ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರನ್ನು ಅಭಿನಂದಿಸಿ ಮಾತನಾಡಿದ ಅವರು, ನಿರಂತರ ಕ್ರಿಯಾಶೀಲತೆಯ ಬಲಿಪರು 100ಕ್ಕೂ ಮಿಕ್ಕಿ ಪ್ರಸಂಗಗಳನ್ನು ರಂಗದಲ್ಲಿ ಆಡಿಸಲ್ಲ ಸರ್ವಶ್ರೇಷ್ಠ ಭಾಗವತ ಎಂದರು.
ಪುತ್ತೂರು ತೆಂಕಿಲದ ಯಕ್ಷಮಿತ್ರರು ಸ್ವಾಮಿಬಳಗದವರು ಆಯೋಜಿಸಿದ ಸಂಮಾನ ಸಮಾರಂಭದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಶ್ರೀಶಕುಮಾರ್ ಎಂ.ಕೆ. ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಆರಕ್ಷಕ ಠಾಣೆ ಎಸ್.ಐ. ಪ್ರಮೋದ್ ಕುಮಾರ್ ಇದ್ದರು. ಉಪನ್ಯಾಸಕ ಎನ್.ಕೆ. ರಾಮಚಂದ್ರ ಭಟ್ ನಿರ್ವಹಿಸಿದರು. ಬಳಿಕ ನಾಡಿನ ಖ್ಯಾತ ಕಲಾವಿದರ ಸಮ್ಮಿಲನದಲ್ಲಿ 'ಕೀಚಕ ವಧೆ ಬಬ್ರುವಾಹನ' ಪ್ರಸಂಗದ ಪ್ರದರ್ಶನ ಜರುಗಿತು. ಬಲಿಪರ ಹಾಡುಗಾರಿಕೆಯಲ್ಲಿ ಬಬ್ರುವಾಹನ ಕಾಳಗ ಪ್ರಸಂಗ ಪ್ರದರ್ಶನಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

