ಮಾನಸಿಕ ಅಸ್ವಸ್ಥ ಕುಂದಾಪುರದಲ್ಲಿ ಪತ್ತೆ
ಕ.ಪ್ರ. ವಾರ್ತೆ ಕುಂದಾಪುರ ಸೆ. 15
ಕಳೆದ ಮಾರ್ಚ್ನಲ್ಲಿ ಬೆಂಗಳೂರಿನ ಮನೆಯಿಂದ ಕಾಣೆಯಾಗಿದ್ದ ಯುವಕನೊಬ್ಬ ಬರೋಬ್ಬರಿ ಏಳು ತಿಂಗಳು ಕಾಲ್ನಡಿಗೆಯಲ್ಲೇ ಸವೆಸಿ ತೀರಾ ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕುಂದಾಪುರದ ಮಸೀದಿ ಪರಿಸರದಲ್ಲಿ ಪತ್ತೆಯಾಗಿದ್ದಾನೆ. ಈತನನ್ನು ಸ್ಥಳೀಯರು ಹೆತ್ತವರ ಮಡಿಲು ಸೇರಿಸಿದ್ದಾರೆ.
ಬೆಂಗಳೂರು ಟ್ಯಾನರಿ ರಸ್ತೆಯ ಪಿಎನ್ಟಿ ಕಾಲೋನಿಯ ರಿಯಲ್ ಎಸ್ಟೇಟ್ ಉದ್ಯಮಿ ಶಾಬುದ್ದೀನ್ ಅವರ ಹಿರಿಯ ಮಗ ಅಜರುದ್ದೀನ್(26) ಕಳೆದ ಮಾರ್ಚ್ನಲ್ಲಿ ಮನೆಯಿಂದ ಕಾಣೆಯಾಗಿದ್ದ. ಹೈಸ್ಕೂಲಿಗೆ ಹೋಗುತ್ತಿರುವಾಗ ಅಜರುದ್ದೀನ್ ಎಂಟು ವರ್ಷಗಳ ಹಿಂದೆ ಸಂಭವಿಸಿದ್ದ ಅಪಘಾತವೊಂದರಲ್ಲಿ ಸ್ವಲ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಬಳಿಕ ಮನೆಯವರ ಪಾಲನೆಯಲ್ಲೇ ಇದ್ದ. ಕಳೆದ ಮಾರ್ಚ್ನಲ್ಲಿ ಈತ ಮನೆಯವರ ಕಣ್ತಪ್ಪಿಸಿ ತೊಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರ ಬಂದಿದ್ದ.
ತೀರಾ ನಿತ್ರಾಣ ಸ್ಥಿತಿಯಲ್ಲಿ ಬಿದ್ದಿದ್ದ ಈತನನ್ನು ಗಮನಿಸಿದ ಸ್ಥಳೀಯ ಮುಸ್ಲಿಂ ವೆಲ್ಫೇರ್ನ ಸದಸ್ಯರು ಸಮಾಜ ಸೇವಕ ಅಬ್ಬು ಎಂಬವರ ನೇತೃತ್ವದಲ್ಲಿ ಉಪಚರಿಸಿ ಆತನಿಂದ ಬೆಂಗಳೂರಿನ ಅವನ ವಿಳಾಸವನ್ನು ಅಸ್ಪಷ್ಟ ರೀತಿಯಲ್ಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸ್ಥಳೀಯ ಕೋಲಾ ಬಶೀರ್ ಎಂಬವರು ಯುವಕನ ಫೋಟೋ ತೆಗೆದು ನೆಟ್ ಮೂಲಕ ಬೆಂಗಳೂರಿನಲ್ಲಿರುವ ತಮ್ಮ ಅಳಿಯ ಸಲೀಂಗೆ ರವಾನಿಸಿ ಈತನ ಬಗ್ಗೆ ಮಾಹಿತಿ ಕಲೆಹಾಕುವಂತೆ ತಿಳಿಸಿದ್ದರು. ಹುಡುಕಾಟದ ನಂತರ ಅಜರುದ್ದೀನ್ನ ಹೆತ್ತವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

