ಉಪ್ಪುಕಳ ಒಂಟಿ ವೃದ್ಧನ ಕೊಲೆ ಪ್ರಕರಣ ತನಿಖೆ ತೀವ್ರ
ಸುಬ್ರಹ್ಮಣ್ಯ: ಉಪ್ಪುಕಳ ಎಂಬಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದ ವಯೋವೃದ್ಧ ಕೃಷಿಕ ಪರಮೇಶ್ವರ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಕೆಲ ಶಂಕಿತರನ್ನು ತನಿಖೆಗೆ ಒಳಪಡಿಸಿರುವ ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸ್ ಮೂಲಗಳಿಂದ ತಿಳದು ಬಂದಿದೆ.
ಊರವರೊಂದಿಗೆ ಜಾಸ್ತಿ ಬೆರೆಯದ ಹಾಗೂ ಯಾವುದೇ ದುಶ್ಚಟವಿಲ್ಲದ ಪರಮೇಶ್ವರ ಗೌಡರು ತೋಟ ಕೆಲಸಕ್ಕೆ ಸ್ಥಳೀಯ ಗಣಪಯ್ಯ ಗೌಡರನ್ನು ಮಾತ್ರ ಇಟ್ಟುಕೊಂಡಿದ್ದರು. ಆರ್ಥಿಕವಾಗಿ ಚೆನ್ನಾಗಿದ್ದ ಇವರು ಕೃಷಿ ಉತ್ಪನ್ನಗಳಾದ ಅಡಕೆ, ತೆಂಗು ಇತ್ಯಾದಿಗಳ್ನು ಪೇಟೆಯಲ್ಲಿ ಮಾರಿ ಬಂದ ಹಣವನ್ನು ಸಹಕಾರಿ ಅಥವಾ ಇನ್ನಿತರ ಬ್ಯಾಂಕ್ನಲ್ಲಿ ಇಡುತ್ತಿದ್ದರೇ ಹೊರತು ಮನೆಯಲ್ಲಿ ಯಾವತ್ತೂ ಹಣ ಇಡುತ್ತಿರಲಿಲ್ಲ ಎಂದು ಸ್ಥಳೀಯರು ಹಾಗೂ ಪುತ್ರ ಹೇಳುತ್ತಾರೆ.
ಪರಮೇಶ್ವರ ಗೌಡರಿಗೆ ವಯಸ್ಸಾಗಿದ್ದರೂ ಆರೋಗ್ಯದಿಂದ್ದ ಇವರದ್ದು ಗಟ್ಟಿ ಶರೀರ. ಇವರ ಕೈಕಾಲು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುಂಬಿಸಿ ಇವರನ್ನು ಕೊಲೆ ಮಾಡಿರಲು ಕೇವಲ ಒಬ್ಬರಿಂದಲೇ ಸಾಧ್ಯವಿಲ್ಲ.
ಈ ಕೃತ್ಯದಲ್ಲಿ ಒಂದು ತಂಡವೇ ಕೆಲಸ ಮಾಡಿದೆ. ಅಲ್ಲದೆ ಸ್ಥಳೀಯರ ನೆರವಿಲ್ಲದೆ ಈ ಕೃತ್ಯ ನಡೆಸಲೂ ಸಾಧ್ಯವಿಲ್ಲ ಎಂದು ಶಂಕಿಸಿರುವ ಪೊಲೀಸರು ಪ್ರಕರಣ ಬೇಧಿಸಲು ಎಲ್ಲ ಮೂಲಗಳಿಂದಲೂ ತೀವ್ರ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

