ದಕ್ಷಿಣ ಕನ್ನಡ

ನಗರದೆಲ್ಲೆಡೆ ಗ್ಯಾಸ್ ವಾಸನೆ: ಬೆದರಿದ ಜನತೆ, ನೂರಾರು ಕರೆ

Published On :

ಮಂಗಳೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಅನಿಲ ವಾಸನೆ ಪಸರಿಸಿದ ಹಿನ್ನೆಲೆಯಲ್ಲಿ ಗ್ಯಾಸ್ ಸೋರಿಕೆ ಭೀತಿಯಿಂದ ಜನರು ಪೊಲೀಸ್ ನಿಯಂತ್ರಣ ಕೊಠಡಿಗೆ, ಅಗ್ನಿಶಾಮಕ ದಳಕಚೇರಿಗೆ ಕರೆ ಮಾಡಿದ್ದಾರೆ.
 ಲ್ಯಾಂಡ್ ಲಿಂಕ್ಸ್ ಪ್ರದೇಶದ ನಿವಾಸಿಗಳು ಹೆದರಿಕೆಯಿಂದ ಮನೆಯಿಂದ ಹೊರ ಬಂದಿದ್ದಾರೆ. ಬಿಜೈ ಪ್ರದೇಶದಲ್ಲಿ ಕರೆಂಟ್ ಆಫ್ ಮಾಡಿದ್ದಾರೆ. ಯೆಯ್ಯಾಡಿ, ಕಂಕನಾಡಿ, ಕೂಳೂರು, ಮೇರಿಹಿಲ್, ಬೈಕಂಪಾಡಿಯಿಂದು ಎಕ್ಕೂರು ಪ್ರದೇಶದಲ್ಲಿಯೂ ಸಂಜೆವರೆಗೆ ಗ್ಯಾಸ್ ಸೋರಿಕೆ ಭೀತಿ ಮನೆ ಮಾಡಿತ್ತು. ಅಂತರ್ಜಾಲದಲ್ಲಿಯೂ ಗ್ಯಾಸ್ ಸೋರಿಕೆ, ಕಟು ವಾಸನೆ ಬಗ್ಗೆ ಗಂಭೀರ ಚರ್ಚೆಯಾಗಿತ್ತು.
 ಅಗ್ನಿಶಾಮಕ ದಳದ ಮೂರು ತುಕಡಿ ಎಲ್ಲ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿತ್ತು.
ಅನೇಕ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಗ್ಯಾಸ್‌ನ ಕಟುವಾದ ವಾಸನೆ ಬರುತ್ತಿದ್ದರೂ ಅದು ಗ್ಯಾಸ್ ಸೋರಿಕೆ ಅಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
 ಪರಿಸರ ಇಲಾಖೆ ಎಂಜಿನಿಯರ್‌ಗಳು ವಾತಾವರಣದಲ್ಲಿ ಗ್ಯಾಸ್ ಸೋರಿಕೆಯಾಗಿದೆ ಎಂಬ ಪರಿಶೀಲನೆ ಕೂಡಾ ಮಾಡಿದ್ದಾರೆ.
ಗ್ಯಾಸ್ ಸೋರಿಕೆಯಾಗಿದೆ ಎಂಬ ಬಗ್ಗೆ ಅಗ್ನಿಶಾಮಕದಳ ನಗರದೆಲ್ಲೆಡೆಯಿಂದ ಕಚೇರಿಗೆ ನೂರಾರು ಕರೆಗಳು ಬಂದಿವೆ.  ಬಹುತೇಕ ಕಡೆ ಪರಿಶೀಲನೆ ಮಾಡಿದ್ದೇವೆ, ಎಲ್ಲೂ ಗ್ಯಾಸ್ ಸೋರಿಕೆ ದೃಢಪಟ್ಟಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ವರದರಾಜನ್ ತಿಳಿಸಿದ್ದಾರೆ.
ಎಂಆರ್‌ಪಿಎಲ್ ಸ್ಪಷ್ಟನೆ: ವಿದ್ಯುತ್, ಗ್ಯಾಸ್ ಉತ್ಪಾದಿಸುವ ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಗ್ಯಾಸ್ ಸೋರಿಕೆಯಾಗಿದೆ ಎಂದು ಎಲ್ಲೆಡೆ ಸುದ್ದಿಯಾದ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್ ಸಂಸ್ಥೆ ನಮ್ಮ ಸಂಸ್ಥೆಯಲ್ಲಿ ಗ್ಯಾಸ್ ಸೋರಿಕೆ ಆಗಿಲ್ಲ ಎಂಬ ಒಕ್ಕಣೆಯ ಸ್ಪಷ್ಟನೆ ಪತ್ರಿಕಾ ಕಚೇರಿಗೆ ರವಾನಿಸಿದೆ.
 ನಮ್ಮಲ್ಲಿ ಯಾವುದೇ ಗ್ಯಾಸ್ ಸೋರಿಕೆ ಆಗಿಲ್ಲ, ಬೇರೆ ಕಡೆ ಗ್ಯಾಸ್ ಏಜೆನ್ಸಿಗಳಲ್ಲಿ ಸೋರಿಕೆ ಆಗಿರಬೇಕುಎಂದು ಎಂಆರ್‌ಪಿಎಲ್ ಎಂಡಿ ಯು.ಪಿ. ಉಪಾಧ್ಯಾಯ ಹೇಳಿದ್ದಾರೆ.  

ವಾಸನೆಗೆ ಎದೆ ಹಿಂಡಿದಂತಾಯಿತು...!
ಬೈಕ್‌ನಲ್ಲಿ ಬರುತ್ತಿದ್ದಾಗ ಎದೆ ಹಿಡಿದುಕೊಂಡಂತೆ ಆಯಿತು. ದುರ್ವಾಸನೆಯೂ ಜೋರಿತ್ತು. ನನಗೇನೋ ಆಗುತ್ತಿದ್ದೆ ಎನ್ನುವ ಅನುಭವ ಆಗಿತ್ತು ಎನ್ನುತ್ತಾರೆ ಬೋಂದೇಲ್‌ನ ವೇಣುಗೋಪಾಲ್.
ಮಗ ಗ್ಯಾಸ್ ವಾಸನೆ ಬರುತ್ತಿದೆ ಎಂದು ಮನೆಯೊಳಗೆ ಹೋದ. ಆದರೆ ಅಲ್ಲಿ ವಾಸನೆ ಬರುತ್ತಿರಲಿಲ್ಲ. ಹೊರಗಡೆ ಬಂದಾಗ ಗ್ಯಾಸ್ ವಾಸನೆ ತೀವ್ರವಾಗಿ ಬರುತ್ತಿತ್ತು ಎನ್ನುತ್ತಾರೆ ಸುನೀಲ್. ನಗರ ಪ್ರದೇಶದಲ್ಲಿ ಇಡೀ ಗ್ಯಾಸ್ ದುರ್ವಾಸನೆ ಹಬ್ಬಿತ್ತು. ದಿನವಿಡೀ ಮಳೆ ಸುರಿದಿತ್ತು. ಸೋರಿಕೆಯಾದ ದುರ್ವಾಸನೆ(ಗ್ಯಾಸ್) ತೀವ್ರ ಮಳೆಯಿಂದ ತಳಮಟ್ಟದ ಹವಾಮಾನದಲ್ಲಿ ಪಸರಿಸಿತ್ತು ಎನ್ನಲಾಗಿದೆ.
ಲ್ಯಾಂಡ್ ಲಿಂಕ್ಸ್‌ನಲ್ಲಿದ್ದ ಗರ್ಭಿಣಿಯೊಬ್ಬರಿಗೆ ದುರ್ವಾಸನೆಯಿಂದ ವಾಕರಿಕೆ ಉಂಟಾಗಿದ್ದು, ಬಳಿಕ ಎಲ್ಲರೂ ಗ್ಯಾಸ್ ಸೋರಿಕೆಯ ವಾಸನೆಯಿಂದ ಬೆದರಿ ಮನೆಗಳಿಂದ ಹೊರ ಬಂದರು.
ಸೋರಿಕೆ : ಪೆಟ್ರೊ ಸಂಸ್ಥೆಯಲ್ಲಿ ಬೆಳಗ್ಗಿನ 10 ಗಂಟೆ ವೇಳೆಗೆ ಗ್ಯಾಸ್ ಸೋರಿಕೆಯಾಗಿದ್ದು, ತಜ್ಞರ ನೆರವಿನೊಂದಿಗೆ ಮಧ್ಯಾಹ್ನ ವೇಳೆಗೆ ತಹಬದಿಗೆ ತರಲಾಯಿತು.
 ನಿಜವಾಗಿಯೂ ಗ್ಯಾಸ್ ಸೋರಿಕೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಗ್ಯಾಸ್ ದುರ್ವಾಸನೆ ಅನುಭವ ನಗರದಲ್ಲಿದ್ದ ಬಹುತೇಕ ಜನರಿಗೆ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.