ಗುತ್ತಿಗೆ ಭದ್ರತಾ ಸಿಬ್ಬಂದಿ ಬದುಕು ಅತಂತ್ರ
ಸುಬ್ರಹ್ಮಣ್ಯ: ಕಳೆದ 6- 7 ವರ್ಷಗಳಿಂದ ಭದ್ರತಾ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 25 ಮಂದಿ ಕಾರ್ಮಿಕರಿಗೆ ಗುತ್ತಿಗೆದಾರ ಇದೀಗ ಕೆಲಸ ನಿರಾಕರಿಸಿದ್ದು, ಈ ಕಾರ್ಮಿಕರು ಕೆಲಸ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.
ಕ್ಷೇತ್ರಕ್ಕೆ ದಿನಂಪ್ರತಿ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಅಮೂಲ್ಯ ಸಂಪತ್ತು ಹೊಂದಿದ ದೇವಾಲಯಕ್ಕೆ ಭದ್ರತೆ ಒದಗಿಸಲೆಂದು ಕಳೆದ 6 ವರ್ಷಗಳ ಹಿಂದೆ ದೇವಳದ ವತಿಯಿಂದ ಟೆಂಡರ್ ಕರೆದು ಸಿಬ್ಬಂದಿ ನೇಮಕಕ್ಕೆ ಗುತ್ತಿಗೆ ನೀಡಲಾಗಿತ್ತು. ಈ ನೇಮಕದ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಭದ್ರತಾ ಸಿಬ್ಬಂದಿ ನೇಮಿಸಿ, ಅವರಿಗೆ ಕಾನೂನು ಬದ್ಧ ಸವಲತ್ತುಗಳನ್ನು ನೀಡದೆ ವಂಚಿಸಿದೆ ಎಂಬ ಆರೋಪ ಕೇಳಿಬಂದಿದೆ.
ಕಾರ್ಮಿಕರ ದೂರು: ಕನಿಷ್ಠ ವೇತನ, ಕೆಲಸದ ಭದ್ರತೆ ನೀಡದೆ ಗುರುತಿನ ಚೀಟಿ, ಪ್ರಾವಿಡೆಂಟ್ ಫಂಡ್ ಚೀಟಿ, ಇಎಸ್ಐ ಸೌಲಭ್ಯ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ಸೇರಿದಂತೆ ಹಲವಾರು ಕಾನೂನು ಬದ್ಧ ಸವಲತ್ತುಗಳನ್ನು ಈ ಕಾರ್ಮಿಕರಿಗೆ ನಿರಾಕರಿಸಿರುವುದಾಗಿ ಕೆಲಸ ಕಳಕೊಂಡ ಕಾರ್ಮಿಕರು ದೂರಿದ್ದಾರೆ.
ಹಿಂದಿನ ವರ್ಷ ಗುತ್ತಿಗೆಗೆ ನೇಮಕ ಪಡಕೊಂಡಿದ್ದ ಸಂಸ್ಥೆಯ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು, ನೂತನವಾಗಿ ಗುತ್ತಿಗೆ ವಹಿಸಿಕೊಂಡ ಸ್ಥಳೀಯ ಗುತ್ತಿಗೆದಾರರು ಈ ಹಿಂದೆ ದುಡಿದ 26 ಮಂದಿಗೆ ಕಾರಣವಿಲ್ಲದೆ ಕೆಲಸ ನಿರಾಕರಿಸಿರುತ್ತಾರೆ.
ಮುಂದುವರಿಸಲು ಮನವಿ: ಕೆಲಸ ನಿರಾಕರಣೆಗೆ ಒಳಗಾದ ಕಾರ್ಮಿಕರು ಇದೇ ಕೆಲಸದಲ್ಲಿ ತಮ್ಮನ್ನು ಮುಂದುವರಿಸುವಂತೆ ದೇವಳದ ಕಾರ್ಯನಿರ್ವಹಣಾಧಿಕಾರಿ, ಆಡಳಿತ ಮಂಡಳಿಗೆ ಮನವಿ ನೀಡಿ ಒತ್ತಾಯಿಸಿದ್ದು, ಮಾನವೀಯ ನೆಲೆಯಲ್ಲೂ ಕೆಲಸ ನೀಡುವಂತೆ ಬೇಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

