ದಕ್ಷಿಣ ಕನ್ನಡ

ಬಾಂಜಾರುಮಲೆಗೆ ಜಿಪಂ ಸಿಇಒ ಭೇಟಿ

Published On :

ಬೆಳ್ತಂಗಡಿ: ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ತಾಲೂಕಿನ ದುರ್ಗಮ ಪ್ರದೇಶವಾದ ಬಾಂಜಾರು ಮಲೆಗೆ ಮಂಗಳವಾರ ಭೇಟಿ ನೀಡಿದರು.
ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿತ್ತು. 47 ಕುಟುಂಬದ 120 ಮಂದಿ ತಪಾಸಣೆ ಮಾಡಿಕೊಂಡರು. ಈ ವೇಳೆ ಅಂಗನವಾಡಿ, ರಸ್ತೆ, ಚರಂಡಿ, ವಿದ್ಯುತ್, ಸೇತುವೆಗಳ ಇತ್ಯಾದಿ ಬೇಡಿಕೆಗಳನ್ನು ಸ್ಥಳೀಯರು ಮುಂದಿಟ್ಟರು. ಅಂಗನವಾಡಿಗೆ ಸ್ಥಳೀಯ ಕಾರ್ಯಕರ್ತರನ್ನು ಉಚಿತವಾಗಿ ನೇಮಿಸಿಕೊಳ್ಳಿ, ಆಹಾರದ ಪೂರೈಕೆಗೆ ಆಡಳಿತದಿಂದ ವ್ಯವಸ್ಥೆ ಮಾಡಲಾಗುವುದು. ತಿಂಗಳಿಗೊಮ್ಮೆ ಆರೋಗ್ಯ ಶಿಬಿರದ ಬೇಡಿಕೆ ಬಂದಾಗ ನೆರಿಯದಲ್ಲಿ ವೈದ್ಯಾಧಿಕಾರಿ ಇಲ್ಲದಿರುವುದರಿಂದ ಆರೋಗ್ಯ ಸಹಾಯಕಿಯನ್ನು ತಿಂಗಳಿಗೊಮ್ಮೆ ಕಳುಹಿಸುವ ಏರ್ಪಾಟು ಮಾಡಲಾಗುವುದು. 10ನೇ ತರಗತಿ ಕಲಿತ ಮಹಿಳೆ ಇದ್ದರೆ ಅವರಿಗೆ ತರಬೇತಿ ನೀಡಿ ಆಶಾ ಕಾರ್ಯಕರ್ತೆಯನ್ನಾಗಿ ನೇಮಿಸುವ ಭರವಸೆ ನೀಡಿದರು.
ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ಒಂಬುಡ್ಸ್‌ಮೆನ್ ಸದಸ್ಯ ಕೃಷ್ಣ ಶೆಟ್ಟಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನರೇಂದ್ರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.