ದಕ್ಷಿಣ ಕನ್ನಡ

45.5 ಲಕ್ಷ ಮೌಲ್ಯದ 6 ಚಿನ್ನ ಗಟ್ಟಿ ವಶ

Published On :

ಮಂಗಳೂರು: ದುಬೈಯಿಂದ ಚಿನ್ನದ ಗಟ್ಟಿ ತರುತ್ತಿದ್ದ ಕಾಸರಗೋಡು ನಿವಾಸಿಯನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಕಾಸರಗೋಡು ಹಿದಾಯತ್‌ನಗರ ನಿವಾಸಿ ರಹಿಮಾನ್ ಮಲಂಗಾಲ ಬಂಧಿತ. 45.55 ಲಕ್ಷ ಬೆಲೆಬಾಳುವ 6 ಚಿನ್ನದ ಗಟ್ಟಿಗಳನ್ನು ತನ್ನ ಬ್ಯಾಗ್‌ನಲ್ಲಿ ಇರಿಸಿದ್ದ. ಬೆಳಗ್ಗೆ 8.30ಕ್ಕೆ ಬಜಪೆ ನಿಲ್ದಾಣದಲ್ಲಿ ವಿಮಾನ ಬಂದಿತ್ತು. ಆರೋಪಿ ಬ್ಯಾಗ್‌ನಲ್ಲಿ 1,499.450 ಗ್ರಾಂ 24 ಕ್ಯಾರೇಟ್ ಶುದ್ಧ ಚಿನ್ನ 6 ಗಟ್ಟಿಗಳ ರೂಪದಲ್ಲಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟೆಂಪೋ- ಬೈಡ್ ಡಿಕ್ಕಿ; ಸವಾರ ಗಾಯ
ಪಡುಬಿದ್ರಿ: ಟೆಂಪೋ- ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಇಲ್ಲಿನ ಅದಮೂರು ಎಂಬಲ್ಲಿ ಮಂಗಳವಾರ ನಡೆದಿದೆ. ಗಾಯಗೊಂಡವರನ್ನು ವಿನಯ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಅದಮಾರು ಕಡೆಯಿಂದ ಎರ್ಮಾಳು ಕಡೆಗೆ ಬರುತ್ತಿರುವಾಗ ಟೆಂಪೋ ಚಾಲಕ ಪ್ರಕಾಶ್ ಡಿಆಲ್ಮೇಡಾ ಟೆಂಪೋವನ್ನು ನಿರ್ಲಕ್ಷ್ಯತನದಿಂದ ಒಮ್ಮೆಲೆ ತಿರುಗಿಸಿದಾಗ ಬೈಕ್‌ಗೆ ಡಿಕ್ಕಿಯಾಗಿದೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲ ಕೇಳಿದ್ದಕ್ಕೆ ತಮ್ಮನಿಗೆ ಅಣ್ಣನಿಂದ ಗೂಸಾ
ಉಡುಪಿ: ಇಲ್ಲಿನ ಕುಕ್ಕಿಕಟೆಯ ನಿವಾಸಿ ಮಂಜುನಾಥ ಎಂಬವರು ಸಹೋದರ ಜಗದೀಶ ಮನೆಗೆ ಹೋಗಿ ಅವರಲ್ಲಿ ಸಾಲದ ರೂಪದಲ್ಲಿ ಹಣ ನೀಡುವಂತೆ ಕೇಳಿದಾಗ ಜಗದೀಶ ಬಾಸುಂಡೆ ಬರುವಂತೆ ಕೋಲಿನಿಂದ ಯದ್ವಾ ತದ್ವಾ ಹೊಡೆದ ಪ್ರಕರಣ ಬುಧವಾರ ವರದಿಯಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.
ಶಿವಪುರ: ಪೇಟೆಗೆಂದು ಹೋದ ವೃದ್ಧೆ ನಾಪತ್ತೆ
ಹೆಬ್ರಿ: ಶಿವಪುರ ಗ್ರಾಮದ ರಾಜೀವಿ ಪೂಜಾರ್ತಿ (75) ಎಂಬವರು ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಈವರೆಗೆ ವಾಪಾಸ್ ಮನೆಗೆ ಬಾರದೆ ಕಾಣೆಯಾದ ಪ್ರಕರಣ ಬುಧವಾರ ವರದಿಯಾಗಿದೆ. ಈ ಬಗ್ಗೆ ಸದಾನಂದ ಪೂಜಾರಿ ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.