ದಕ್ಷಿಣ ಕನ್ನಡ

ಯುವಕರಿಗೆ ಖಡ್ಕ ದೀಕ್ಷೆ ಖಚಿತ, ಜೈಲ್‌ಗೆ ಹೋಗಲೂ ಸಿದ್ಧ: ರಾಯ್

Published On :

ಮಂಗಳೂರು: ಹಿಂದು ಸಮುದಾಯ ರಕ್ಷಣೆ ಮತ್ತು ಯುವಕರಲ್ಲಿ ತೇಜಸ್ಸು ತುಂಬುವ ದೃಷ್ಟಿಯಿಂದ ಅಖಿಲಭಾರತ ಹಿಂದೂ ಮಹಾಸಭಾ ವತಿಯಿಂದ ಅ.25ರಂದು ಹಿಂದೂ ಯುವಕರಿಗೆ ಖಡ್ಗ ದೀಕ್ಷೆ ನೀಡಲಾಗುವುದು ಎಂದು ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿ ಡಾ.ಸಂತೋಷ್ ರಾಯ್ ಹೇಳಿದರು.
 ಉತ್ತರ ಪ್ರದೇಶದಲ್ಲಿ ನಾವು ಖಡ್ಗ ದೀಕ್ಷೆ ನೀಡಿದ್ದೇವೆ. ಉಗ್ರಗಾಮಿಗಳ ತಾಣವಾಗಿ ಮಾರ್ಪಟ್ಟಿರುವ ಮಂಗಳೂರಲ್ಲಿಯೂ ನಾವು ಖಡ್ಗ ದೀಕ್ಷೆ ನೀಡುತ್ತೇವೆ. ಇದಕ್ಕಾಗಿ ಜೈಲ್‌ಗೆ ಹೋಗಲೂ ಸಿದ್ಧ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 ಭಯೋತ್ಪಾದನೆ, ಮತಾಂತರ, ಲವ್ ಜಿಹಾದ್ ಇತ್ಯಾದಿ ರಾಷ್ಟ್ರದ್ರೋಹ ಪಿತೂರಿ ನಡೆಯುತ್ತಿದೆ. ದೇಶದ್ರೋಹಿಗಳ ಮಟ್ಟಹಾಕಿ ಹಿಂದೂಗಳ ಹಿತ ಕಾಪಾಡಲು ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಹಿಂದೂ ಸಮಾಜದಲ್ಲಿ ಅಪಾಯದಿಂದ ರಕ್ಷಣೆಗೆ ಖಡ್ಗ ಇಟ್ಟುಕೊಳ್ಳುವುದು ಪುರಾಣ ಕಾಲದಿಂದಲೂ ರೂಢಿಯಲ್ಲಿದೆ. ಖಡ್ಗ ದೀಕ್ಷೆ ವಿರೋಧಿಸುವ ಬುದ್ಧಿ ಜೀವಿಗಳು ಮಂಗಳೂರಲ್ಲಿ ಅವ್ಯಾಹತ ಗೋಕಳವು ಬಗ್ಗೆ ಸುಮ್ಮನೆ ಇರುವದೇಕೆ ಎಂದು ಪ್ರಶ್ನಿಸಿದರು.
 ಯಾಸೀನ್ ಭಟ್ಕಳ, ರಿಯಾಜ್ ಭಟ್ಕಳ ವಿಚಾರದಲ್ಲಿ ಸುಮ್ಮನೆ ಉಳಿದದ್ದೇಕೆ. ಇದೇ ಪಿಯುಸಿಎಲ್ ಅಫ್ಜಲ್‌ಗುರು ಗಲ್ಲು ವಿರೋಧಿಸಿ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದವರು. ಇವರು ಭಯೋತ್ಪಾದನೆ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅವರ ಮೇಲೆ ಶಾಂತಿ ಕದಡುವ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಬ್ರಾಹ್ಮಣರ ಗೋಮಾಂಸ ಭಕ್ಷಿಸುವ ಕುರಿತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೂರ್ತಿ ತಲೆಕೆಟ್ಟವರಂತೆ ಮಾತನಾಡುತ್ತಿದ್ದಾರೆ. ಮೋದಿ ಪ್ರಧಾನಿಯಾದರೆ ದೇಶಬಿಡುವ ಮಾತನಾಡಿದವರು, ಅವರು ವಿದೇಶಕ್ಕೆ ತೆರಳುವ ಪ್ರಯಾಣ ವೆಚ್ಚ ಮತ್ತು ತಂಗುವ ವೆಚ್ಚವನ್ನು ನಾವು ಭರಿಸುತ್ತೇವೆ ಎಂದರು. ಗೋಮಾಂಸ ಭಕ್ಷಣೆ ವಿಚಾರದಲ್ಲಿ ಪೇಜಾವರ ಶ್ರೀಗಳು ಈ ಮಾತನ್ನು ಹೇಳಿದರೂ ನಾವು ವಿರೋಧಿಸುತ್ತೇವೆ ಎಂದರು.
 ಲೋಕಸಭೆ ಚುನಾವಣೆಯಲ್ಲಿ ಅಖಿಲಭಾರತ ಹಿಂದೂ ಮಹಾ ಸಭಾ ದೇಶದಲ್ಲಿ 50 ಕಡೆ ಸ್ಪರ್ಧಿಸಲಿದೆ. ರಾಜ್ಯದಲ್ಲಿ ಮಂಗಳೂರು ಸೇರಿದಂತೆ 5 ಕಡೆ ಸ್ಪರ್ಧಿಸಲಿದೆ ಎಂದರು. ಜಿಲ್ಲಾಧ್ಯಕ್ಷ ರಾಜೇಶ್ ಪೂಜಾರಿ ಇದ್ದರು.


ಭಯೋತ್ಪಾದನೆ, ಮತಾಂತರ, ಲವ್ ಜಿಹಾದ್ ಇತ್ಯಾದಿ ರಾಷ್ಟ್ರದ್ರೋಹ ಪಿತೂರಿ ನಡೆಯುತ್ತಿದೆ. ದೇಶದ್ರೋಹಿಗಳ ಮಟ್ಟಹಾಕಿ ಹಿಂದೂಗಳ ಹಿತ ಕಾಪಾಡಲು ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಹಿಂದೂ ಸಮಾಜದಲ್ಲಿ ಅಪಾಯದಿಂದ ರಕ್ಷಣೆಗೆ ಖಡ್ಗ ಇಟ್ಟುಕೊಳ್ಳುವುದು ಪುರಾಣ ಕಾಲದಿಂದಲೂ ರೂಢಿಯಲ್ಲಿದೆ. ಖಡ್ಗ ದೀಕ್ಷೆ ವಿರೋಧಿಸುವ ಬುದ್ಧಿ ಜೀವಿಗಳು ಮಂಗಳೂರಲ್ಲಿ ಅವ್ಯಾಹತ ಗೋಕಳವು ಬಗ್ಗೆ ಸುಮ್ಮನೆ ಇರುವದೇಕೆ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.