'ದ.ಕ. ದಲ್ಲಿ ಕಾಂಗ್ರೆಸ್ ಬಲಿಷ್ಠ'
ಸುಳ್ಯ: ಏಳು ಜನ ಶಾಸಕರು, ಮೂವರು ಮಂತ್ರಿಗಳನ್ನು ಹೊಂದಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ದಿನೇ ದಿನೇ ಬಲಿಷ್ಠಗೊಳ್ಳುತ್ತಿದೆ. ಎಲ್ಲ ಜಾತಿ, ಧರ್ಮದ ಪ್ರೀತಿಯಾದರಗಳಿಗೆ ಪಾತ್ರರಾದ ಜನರ ಸೇವಕ ಜನಾರ್ದನ ಪೂಜಾರಿಯ ಗೆಲುವಿನ ಕುರಿತು ಯಾವುದೇ ಅನುಮಾನವಿಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಪೂಜಾರಿ ಪರ ಪ್ರಚಾರಕ್ಕಾಗಿ ಸುಳ್ಯಕ್ಕೆ ಆಗಮಿಸಿದ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದ್ದು, ಹೊರಗಡೆ ಸರಬರಾಜಾಗುವ ವಿದ್ಯುತನ್ನು ನಿಲ್ಲಿಸಲು ಹಾಗೂ ಹೆಚ್ಚುವರಿ ವಿದ್ಯುತ್ ಖರೀದಿಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಕಾಂಗ್ರೆಸ್ ನಾಯಕರಾದ ಧನಂಜಯ ಅಡ್ಪಂಗಾಯ, ಸಂಶುದ್ದೀನ್, ದಿವ್ಯಪ್ರಭಾ ಚಿಲ್ತಡ್ಕ, ಪಿ.ಎ. ಮಹಮ್ಮದ್, ಟಿ.ಎಂ. ಶಹೀದ್, ಕೆ.ಎಂ. ಮುಸ್ತಫ, ಕಳಂಜ ವಿಶ್ವನಾಥ ರೈ, ಪವಾಝ್ ಕನಕಮಜಲು, ಶ್ರೀಹರಿ ಕುಕ್ಕುಡೇಲು, ಸುಧೀರ್ ರೈ ಮೇನಾಲ, ಕೆ.ಎಸ್. ದೇವರಾಜ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ಗೆ ಸೇರಿದ ವಿವಿಧ ವಿದ್ಯಾ ಸಂಸ್ಥೆಗಳಿಗೆ ತೆರಳಿ ಡಿಕೆಶಿ ಮತ ಯಾಚಿಸಿದರು.
'ಪೂಜಾರಿ ಸಾಲಮೇಳದಿಂದ ನಾನು ನಾಯಕನಾದೆ'
ಸುಳ್ಯ: ನನ್ನಂತಹ ಹಲವಾರು ನಾಯಕರನ್ನು ಸೃಷ್ಟಿ ಮಾಡಿದ ಜನಾರ್ದನ ಪೂಜಾರಿ ಈ ಜಿಲ್ಲೆಯ ಧ್ವನಿಯಾಗಿ ಲೋಕಸಭೆ ಪ್ರವೇಶಿಸಬೇಕಾದುದು ಅನಿವಾರ್ಯ. ನಿಮ್ಮ ಪರವಾಗಿ ಲೋಕಸಭೆಯಲ್ಲಿ ಬಾಯಿ ಬಿಡದ ಅಭ್ಯರ್ಥಿಯನ್ನು ತಿರಸ್ಕರಿಸಿ ಜನಾರ್ದನ ಪೂಜಾರಿಯವರನ್ನು ಗೆಲ್ಲಿಸಬೇಕೆಂದು ಸಚಿವ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ಸುಳ್ಯದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೂಜಾರಿ ಅಂದು ಮಾಡಿದ ಸಾಲಮೇಳದಿಂದ ಬಡವರಿಗೆ ಸಾಲ ತೆಗೆಸಿಕೊಟ್ಟು ನಾನು ನಾಯಕನಾದೆ ಎಂದು ಅವರು ಹೇಳಿದರು.
ಸಚಿವ ವಿನಯಕುಮಾರ್ ಸೊರಕೆ, ಅಭ್ಯರ್ಥಿ ಜನಾರ್ದನ ಪೂಜಾರಿ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿದರು.
ಪಕ್ಷದ ನಾಯಕರಾದ ಕೆ.ಪಿ. ಹಸನಬ್ಬ, ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಎಂ. ವೆಂಕಪ್ಪ ಗೌಡ, ಟಿ.ಎಂ. ಶಹೀದ್ ಮೊದಲಾದವರು ಉಪಸ್ಥಿತರಿದ್ದರು. ಕಿರಣ್ ಗುಡ್ಲೆಗುತ್ತು ಸ್ವಾಗತಿಸಿದರು. ಪವಾಝ್ ಕನಕಮಜಲು ವಂದಿಸಿದರು. ಅಶೋಕ್ ಚೊಂತಾರು ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

