ಬಿಜೆಪಿ, ಆರೆಸ್ಸೆಸ್ನವರೇ ನನ್ನನ್ನು ಜೈಲಿಗೆ ಕಳುಹಿಸಿ
ಮಂಗಳೂರು: ನನ್ನ ವಿರುದ್ಧ ಈಗಾಗಲೇ ಒಂದು ಎಫ್ಐಆರ್ ಆಗಿದೆ, ಇನ್ನೊಂದು ದೂರು ನೀಡಿದ್ದೀರಿ. ಬಿಜೆಪಿ, ಆರ್ಎಸ್ಎಸ್ನವರೇ ನೀವು ನನ್ನ ಕೈಗೆ ಕೊಳ ಹಾಕಿ ಮೆರವಣಿಗೆ ಮಾಡಿ ಜೈಲಿಗೆ ಕಳುಹಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ ಸವಾಲು ಹಾಕಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಜಾತಿಯವರಿಗೆ ಮೀಸಲು ಇದೆ. ಬ್ರಾಹ್ಮಣರಿಗೆ ಮತ್ತು ಗೌಡ ಸಾರಸ್ವತ ಬ್ರಾಹ್ಮಣರಿಗೆ ಮೀಸಲು ಇಲ್ಲ. ಅವರಲ್ಲಿಯೂ ಬಡವರಿದ್ದಾರೆ. ಎಲ್ಲ, ಜಾತಿ, ಧರ್ಮದಲ್ಲಿ ಬಡವರಿದ್ದಾರೆ. ಈ ಎರಡು ಜಾತಿ ಬಿಟ್ಟುಹೋಗಿದೆ. ಅವರಿಗೆ ಅನ್ಯಾಯ ಆಗಿದೆ. ಆ ಜಾತಿಯಲ್ಲಿ ಬಡವರಾಗಿ ಹುಟ್ಟುವುದು ಪಾಪವೇ? ಇದನ್ನು ಸರಿ ಪಡಿಸಬೇಕು ಎನ್ನುವುದು ನನ್ನ ಕೂಗು. ಈ ಕೂಗು ದಿಲ್ಲಿಗೆ ಮುಟ್ಟಿತು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದರು. ಈ ಬಗ್ಗೆ ನನ್ನ ವಿರುದ್ಧ ಚುನಾವಣೆ ಆಯೋಗಕ್ಕೆ ನೀತಿ ಸಂಹಿತೆ ಉಲ್ಲಂಘನೆ ಎಂದು ಬಿಜೆಪಿ ದೂರು ನೀಡಿದೆ. ಹಾಗಾದರೆ ನಿಮ್ಮ ಪ್ರಣಾಳಿಕೆಯಲ್ಲಿ ಯಾವುದೇ ಭರವಸೆ ನೀಡುವುದಿಲ್ಲವೇ? ಅಥವಾ ಬ್ರಾಹ್ಮಣರಿಗೆ, ಗೌಡ ಸಾರಸ್ವತ ಬ್ರಾಹ್ಮಣರಿಗೆ ಮೀಸಲು ನೀಡಬಾರದು ಎನ್ನುವುದು ಬಿಜೆಪಿ ಉದ್ದೇಶವೇ ಎಂದು ಪ್ರಶ್ನಿಸಿದರು.
ಆಸ್ತಿ ತೆರಿಗೆ: ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ತೆರಿಗೆ ಏರಿಸುವುದಿಲ್ಲ ಎಂದು ಹೇಳಿದ್ದಲ್ಲ, ಪೂಜಾರಿ, ಕಾಂಗ್ರೆಸ್ ಪಕ್ಷ ಹೇಳಿದ್ದು. 60 ಮಂದಿ ಅಭ್ಯರ್ಥಿಗಳು ಪಾಲಿಕೆ ಸ್ಪರ್ಧೆಗೆ ಮುನ್ನ ಎಲ್ಲರ ಎದುರು ಪ್ರಮಾಣ ಮಾಡಿದ್ದರು, ಮಾತಿನಂತೆ ನಡೆಯುತ್ತಿದ್ದಾರೆ, ಇದು ತಪ್ಪೇ? ಎಂದು ಪ್ರಶ್ನಿಸಿದರು.
ಶ್ರೀಲಂಕ ತಮಿಳರಿಗೆ ಜಾತಿ ಪ್ರಮಾಣ ಪತ್ರ ಎಲ್ಲ ತಯಾರಾಗಿ ಸಿದ್ಧವಾಗಿದೆ. ಆದರೆ ಈಗ ನೀತಿ ಸಂಹಿತೆ ಬಂತು, ಇದು ಆದ ಕೂಡಲೆ ನೋಡಿ. ಪೂಜಾರಿ ಪ್ರಯತ್ನ ಮಾಡಿದ್ದು, ಜನರಿಗೆ ಗೊತ್ತಿದೆ ಎಂದರು.
ಮೋದಿಯೇ ನನಗೆ ಸ್ಪರ್ಧಿ ಎಂದು ನಾನು ದುರಹಂಕಾರದ ಮಾತಲ್ಲ. ಮೂಲೆ ಮೂಲೆಯಲ್ಲಿ ಮೋದಿ ಫ್ಲೆಕ್ಸ್ ಹಾಕಿ ವರ್ಷದಿಂದ ಚುನಾವಣೆಗೆ ತಯಾರು ಮಾಡಿದ್ದರು. ಹೀಗಾಗಿ ಮೋದಿ ವಿಚಾರ ಹೇಳುತ್ತಿದ್ದೇನೆ ಎಂದರು.
ಮೋದಿ ಹೇಳುವುದು ಸುಳ್ಳಿನ ಕಂತೆ, ಗುಜರಾತ್ಗೆ ಹೋಗಿ ನೋಡಿ. ಪ್ರಚಾರದಲ್ಲಿ ಅವರು ಮುಂದೆ ಇದ್ದಾರೆ, ಅವರು ಸುಳ್ಳನ್ನು ಸತ್ಯ ಮಾಡುತ್ತಿದ್ದಾರೆ, ನಮಗೆ ಸತ್ಯ ಹೇಳಲೂ ಧೈರ್ಯ ಇಲ್ಲ.
ದಿನ ಹೋದ ಹಾಗೆ ಸಮೀಕ್ಷೆ ಬದಲಾಗುತ್ತದೆ, ನೋಡಿ, ಕಾಂಗ್ರೆಸ್ಗೆ ಹೆಚ್ಚಿನ ಸೀಟ್ಗಳು ಬರುತ್ತವೆ. ಬಹುಮತ ಬಂದಾಗ ಅಂಗ ಪಕ್ಷಗಳ ಜತೆ ಸರ್ಕಾರ ನಡೆಸುವ ಪ್ರಶ್ನೆ ಬರುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

