ದಕ್ಷಿಣ ಕನ್ನಡ

ಹಳ್ಳಿ ಜನರಿಗೆ ಮುಖವಾಡ ತೊಟ್ಟ ಕಾರ್ಯಕರ್ತರೇ ನರೇಂದ್ರ ಮೋದಿ: ರಾಜೇಂದ್ರ ಕುಮಾರ್ ಲೇವಡಿ

Published On :

ಉಡುಪಿ: ಬಿಜೆಪಿ ಮೋದಿಯ ಮುಖವಾಡ ತೊಟ್ಟು ಮತಯಾಚನೆ ಮಾಡುತ್ತಿದೆ. ಆದರೆ ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಮೋದಿ ಎಂದರೆ ಯಾರು ಎಂಬುದೇ ಜನರಿಗೆ ಗೊತ್ತಿಲ್ಲ. ಮುಖವಾಡ ತೊಟ್ಟು ತಿರುಗಾಡುತ್ತಿರುವ ಬಿಜೆಪಿ ಕಾರ್ಯಕರ್ತರನ್ನೇ ಮೋದಿ ಎಂದು ಹಳ್ಳಿ ಜನ ತಿಳಿದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ನ ಉಡುಪಿ- ಚಿಕ್ಕಮಗಳೂರು- ದಕ್ಷಿಣ ಕನ್ನಡ ಚುನಾವಣಾ ಪ್ರಚಾರ ಉಸ್ತುವಾರಿ ರಾಜೇಂದ್ರಕುಮಾರ್ ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಈ ಭಾಗದಲ್ಲಿ ಕಾಂಗ್ರೆಸ್ ಯಾವುದೇ ಸ್ಟಾರ್ ಪ್ರಚಾರಕರನ್ನು ಕರೆಸುತ್ತಿಲ್ಲ. ಅಬ್ಬರದ ಪ್ರಚಾರ, ಸಮಾವೇಶಗಳನ್ನು ನಡೆಸುತ್ತಿಲ್ಲ. ಬದಲಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಮನೆಮನೆಗೆ ತೆರಳಿ ಮಹಿಳೆಯರು ಮತ್ತು ಯುವಕರನ್ನು ಭೇಟಿಯಾಗಿ ಕಾಂಗ್ರೆಸ್‌ನ್ನು ಯಾಕೆ ಆರಿಸಬೇಕು, ಬಿಜೆಪಿ ಯಾಕೆ ಬೇಡ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಈಗಾಗಲೇ ಶೇ.80ರಷ್ಟು ಮನೆಗಳನ್ನು ತಲುಪಲಾಗಿದೆ. ಪರಿಣಾಮ ಕಾಂಗ್ರೆಸ್ ಪರವಾಗಿ ಅದ್ಭುತ ಜನಭಿಪ್ರಾಯ ರೂಪುಗೊಂಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.